Homeಮುಖಪುಟ'ಸರ್ಕಾರ ವಿರೋಧಿ ಕಾವ್ಯಕ್ಕೆ ಅವಕಾಶವಿಲ್ಲ': ರೇಖ್ತಾ ಸಾಂಸ್ಕೃತಿಕ ಉತ್ಸವದಿಂದ ಹಿಂದೆ ಸರಿದ ಕವಿ ವಾಜಪೇಯಿ

‘ಸರ್ಕಾರ ವಿರೋಧಿ ಕಾವ್ಯಕ್ಕೆ ಅವಕಾಶವಿಲ್ಲ’: ರೇಖ್ತಾ ಸಾಂಸ್ಕೃತಿಕ ಉತ್ಸವದಿಂದ ಹಿಂದೆ ಸರಿದ ಕವಿ ವಾಜಪೇಯಿ

- Advertisement -
- Advertisement -

ಸರ್ಕಾರವನ್ನು ಟೀಕಿಸುವ ಕವಿತೆಗಳನ್ನು ಓದಬೇಡಿ ಎಂದು ಸಂಘಟಕರು ಕೇಳಿದ್ದರಿಂದ ರೇಖ್ತಾ ಫೌಂಡೇಶನ್ ಆಯೋಜಿಸಿರುವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ಕವಿ ಅಶೋಕ್ ವಾಜಪೇಯಿ ಶುಕ್ರವಾರ ಹೇಳಿದ್ದಾರೆ.

ಸುಂದರ್ ನರ್ಸರಿಯಲ್ಲಿ ಮೂರು ದಿನಗಳ ಆರ್ತ್ ಕಲ್ಚರ್ ಫೆಸ್ಟ್‌ ನಡೆಯುತ್ತಿದ್ದು, ಶುಕ್ರವಾರ ನಡೆದ ಕವಿಗೋಷ್ಠಿಯಲ್ಲಿ ಅನಾಮಿಕಾ, ಬದ್ರಿ ನಾರಾಯಣ್, ದಿನೇಶ್ ಕುಶ್ವಾಹಾ ಮತ್ತು ಮಾನವ್ ಕೌಲ್ ಸೇರಿದಂತೆ ಇತರ ಕವಿಗಳೊಂದಿಗೆ ವಾಜಪೇಯಿ ಪಾಲ್ಗೊಳ್ಳಬೇಕಿತ್ತು.

”ಸಂಘಟಕರು ನನಗೆ ರಾಜಕೀಯವನ್ನಾಗಲಿ, ಸರಕಾರವನ್ನಾಗಲಿ ನೇರವಾಗಿ ವಿಮರ್ಶಿಸದ ಕವಿತೆಗಳನ್ನು ಓದುವಂತೆ ಕೇಳಲಾಗಿರುವುದರಿಂದ ಅರ್ಥ್ ಮತ್ತು ರೇಖ್ತಾ ಆಯೋಜಿಸಿರುವ ಸಂಸ್ಕೃತಿ ಉತ್ಸವದಲ್ಲಿ ನಾನು ಭಾಗವಹಿಸುವುದಿಲ್ಲ. ಈ ರೀತಿಯ ಸೆನ್ಸಾರ್ಶಿಪ್ ಸ್ವೀಕಾರಾರ್ಹವಲ್ಲ” ಎಂದು ವಾಜಪೇಯಿ ಫೇಸ್‌ಬುಕ್‌ನಲ್ಲಿ ಹಿಂದಿಯಲ್ಲಿ ಬರೆದಿದ್ದಾರೆ.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ವಾಜಪೇಯಿ ಅವರು, ”ನಾನು ಏಳು ”ಕೋರಸ್”ಅನ್ನು ಓದಲು ನಿರ್ಧರಿಸಿದ್ದೆ. ಇದು ಮೊದಲು ಗ್ರೀಕ್ ರಂಗಭೂಮಿಗೆ ಸಂಬಂಧಿಸಿದ ಸಾಹಿತ್ಯ ಸಾಧನವಾಗಿದ್ದು, ಇದರಲ್ಲಿ ನಾಟಕ ಆರಂಭವಾಗುವ ಸನ್ನಿವೇಶದ ಬಗ್ಗೆ ಪ್ರದರ್ಶಕರು ಪ್ರತಿಕ್ರಿಯಿಸುತ್ತಾರೆ”  ಎಂದು ಹೇಳಿದರು.

ಇದನ್ನೂ ಓದಿ: ಬಿಬಿಸಿ ಮೇಲೆ ಕೈ ಹಾಕಿದರೆ ಇಂದಿರಾ ಗಾಂಧಿಗೆ ಆದಂತೆ ಮೋದಿಜಿಗೂ ಆಗಲಿದೆ!

”ರೇಖ್ತಾ ಫೌಂಡೇಶನ್‌ನ ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿ, ರಾಜಕೀಯವನ್ನು ಒಳಗೊಳ್ಳದ ಕವಿತೆಗಳನ್ನು ಓದುತ್ತೀರಾ ಎಂದು ಕೇಳಿದರು. ಕವಿತೆ ಹೇಗೆ ಅರಾಜಕೀಯವಾಗಬಹುದು ಎಂದು ನಾನು ಕೇಳಿದೆ, ಆದ್ದರಿಂದ ಅವರು ಅದರಿಂದ ದೂರವಿರಲು ನನ್ನನ್ನು ಕೇಳಿದರು. ಆಗ ನಾನು, ಈ ರೀತಿಯ ಸೆನ್ಸಾರ್‌ಶಿಪ್‌ನ್ನು ನಾನು ಬೆಂಬಲಿಸುವುದಿಲ್ಲ ಮತ್ತು ನಾನು ಇದರಲ್ಲಿ ಸೇರುವುದಿಲ್ಲ” ಎಂದು ಹೇಳಿರುವುದಾಗಿ ವಾಜಪೇಯಿ ತಿಳಿಸಿದರು.

2008-2011ರ ಅವಧಿಯಲ್ಲಿ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ವಾಜಪೇಯಿ ಅವರು, 2015ರಲ್ಲಿ ”ಜೀವನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲಿನ ಆಕ್ರಮಣ”ವನ್ನು ಪ್ರತಿಭಟಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.

ಬರಹಗಾರ ಪುರುಷೋತ್ತಮ್ ಅಗರ್ವಾಲ್ ಅವರು ವಾಜಪೇಯಿ ಅವರನ್ನು ಬೆಂಬಲಿಸಿ ಹೀಗೆ ಬರೆಯುತ್ತಾರೆ, ”ತುರ್ತು ಪರಿಸ್ಥಿತಿಯು ವೈಯಕ್ತಿಕ ಸರ್ವಾಧಿಕಾರವಾಗಿತ್ತು, ಆದರೆ ಈಗ ನಾವು ಸೈದ್ಧಾಂತಿಕ ಸರ್ವಾಧಿಕಾರಕ್ಕೆ ದೂಡಲ್ಪಡುತ್ತಿದ್ದೇವೆ. ಈ ಸರ್ವಾಧಿಕಾರಕ್ಕೆ ಪ್ರತಿರೋಧವೊಡ್ಡುವುದು ಕಡ್ಡಾಯ ಮತ್ತು ಅದು ನಮ್ಮ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.

ಈ ಮಧ್ಯೆ ಆಯೋಜಕರು, ”ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಉತ್ಸವವು ಮಾತನಾಡುವವರಿಗೆ ವೇದಿಕೆಯನ್ನು ಒದಗಿಸುತ್ತದೆ ಮತ್ತು ಅವರು ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಫೆಬ್ರುವರಿ 25 ಮತ್ತು 26ರಂದು ನಡೆಯುತ್ತಿರುವ ಈ ಉತ್ಸವಕ್ಕೆ ಬಲಪಂಥೀಯದಿಂದ ಹಲವಾರು ವಿವಾದಾತ್ಮಕ ವ್ಯಕ್ತಿಗಳನ್ನು ಆಹ್ವಾನಿಸಿದೆ. ಈ ಹಿಂದೆ ದ್ವೇಷಪೂರಿತ ಕಾಮೆಂಟ್‌ಗಳನ್ನು ಮಾಡಿದ್ದ ಚಲನಚಿತ್ರ ನಿರ್ಮಾಪಕ ಅವರನ್ನು ಕರೆಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read