Homeಮುಖಪುಟಸಂಸತ್​​ನಲ್ಲಿ ಹಮಾಸ್ ಕುರಿತ ಪ್ರಶ್ನೋತ್ತರಕ್ಕೆ ನಾನು ಸಹಿ ಹಾಕಿಲ್ಲ: ಸಚಿವೆ ಮೀನಾಕ್ಷಿ ಲೇಖಿ ಸ್ಪಷ್ಟನೆ

ಸಂಸತ್​​ನಲ್ಲಿ ಹಮಾಸ್ ಕುರಿತ ಪ್ರಶ್ನೋತ್ತರಕ್ಕೆ ನಾನು ಸಹಿ ಹಾಕಿಲ್ಲ: ಸಚಿವೆ ಮೀನಾಕ್ಷಿ ಲೇಖಿ ಸ್ಪಷ್ಟನೆ

- Advertisement -
- Advertisement -

‘ಹಮಾಸ್‌’ ಗುಂಪನ್ನು ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಕುರಿತ ಪ್ರಶ್ನೆ ಹೊಂದಿರುವ ಯಾವುದೇ ಪೇಪರ್‌ಗೆ ನಾನು ಸಹಿ ಮಾಡಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಇಂದು (ಡಿ.9) ಸ್ಪಷ್ಟಪಡಿಸಿದ್ದಾರೆ.

ಹಮಾಸ್ ಅನ್ನು ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಕುರಿತು ಸಂಸತ್ತಿನಲ್ಲಿ ಕೇಳಲಾಗಿದೆ ಎನ್ನಲಾದ ಪ್ರಶ್ನೋತ್ತರದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸಚಿವೆ ಮೀನಾಕ್ಷಿ ಲೇಖಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಎಕ್ಸ್‌ ಪೋಸ್ಟ್‌ ಒಂದನ್ನು ರಿ ಟ್ವೀಟ್ ಮಾಡಿರುವ ಮೀನಾಕ್ಷಿ ಲೇಖಿ, “ನಿಮಗೆ ತಪ್ಪು ಮಾಹಿತಿ ನೀಡಲಾಗಿದೆ. ನಾನು ಈ ರೀತಿಯ ಪ್ರಶ್ನೆ ಮತ್ತು ಉತ್ತರ ಹೊಂದಿರುವ ಯಾವುದೇ ಪೇಪರ್‌ಗೆ ಸಹಿ ಹಾಕಿಲ್ಲ” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, “ಸೂಕ್ತ ತನಿಖೆ ತಪ್ಪಿತಸ್ಥರು ಯಾರೆಂದು ತಿಳಿಸಲಿದೆ” ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಇಲಾಖೆಯ ಸಚಿವರಾದ ಎಸ್‌. ಜೈಶಂಕರ್ ಅವರಿಗೆ ಪೋಸ್ಟ್‌ ಟ್ಯಾಗ್ ಮಾಡಿದ್ದಾರೆ.

ಮೀನಾಕ್ಷಿ ಲೇಖಿ ಅವರ ಸೃಷ್ಟೀಕರಣಕ್ಕೆ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿದ್ದು, ಲೇಖಿ ಅವರ ಪ್ರತಿಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಮೀನಾಕ್ಷಿ ಲೇಖಿ ಜೀ ಅವರು ತಾನು ಸಹಿ ಮಾಡಿರುವುದನ್ನು ನಿರಾಕರಿಸುತ್ತಿದ್ದಾರೆ. ನಾನು ಸಹಿ ಮಾಡಿಲ್ಲ ಎಂದಿದ್ದಾರೆ. ಸಹಿ ಮಾಡಿದವರು ಯಾರೆಂದು ಗೊತ್ತಿಲ್ಲ, ಇದು ನಕಲಿ ಸಹಿ ಎಂದು ಹೇಳುತ್ತಿದ್ದಾರೆ. ಇದು ಹೌದು ಎಂದಾದರೆ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ಲೇಖಿ ಅವರ ಸ್ಪಷ್ಟೀಕರಣಕ್ಕೆ ಕೃತಜ್ಞತೆ ಹೇಳುತ್ತೇನೆ” ಎಂದು ಚತುರ್ವೇದಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಳಲ್ಲಿ ಹರಿದಾಡಿದ ಪ್ರಶ್ನೋತ್ತರ ಪ್ರತಿಯ ಪ್ರಕಾರ, ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಪ್ರಸ್ತಾಪವನ್ನು ಭಾರತ ಸರ್ಕಾರ ಹೊಂದಿದೆಯೇ? ಇಸ್ರೇಲ್ ಸರ್ಕಾರವು ಈ ರೀತಿಯ ಬೇಡಿಕೆ ಇಟ್ಟಿದಿಯೇ? ಎಂಬ ಬಗ್ಗೆ ಉತ್ತರ ಕೋರಿ ಕಾಂಗ್ರೆಸ್ ಸಂಸದ ಕುಂಬಕುಡಿ ಸುಧಾಕರನ್ ಅವರು ಪ್ರಶ್ನೆ ಕೇಳಿದ್ದಾರೆ.

ಭಾರತದ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಅವರು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಆದರೆ, ಭಾರತ ಸರ್ಕಾರವು ಹಮಾಸ್ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿಲ್ಲ.

ಇದನ್ನೂ ಓದಿ : ಕದನ ವಿರಾಮಕ್ಕೆ ಕರೆ ನೀಡುವ UN ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿ ಯುಎಸ್‌ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...