Homeಅಂತರಾಷ್ಟ್ರೀಯಕದನ ವಿರಾಮಕ್ಕೆ ಕರೆ ನೀಡುವ UN ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿ ಯುಎಸ್‌ ತಡೆ

ಕದನ ವಿರಾಮಕ್ಕೆ ಕರೆ ನೀಡುವ UN ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿ ಯುಎಸ್‌ ತಡೆ

- Advertisement -
- Advertisement -

ಗಾಝಾ ಪಟ್ಟಿಯ ಮೇಲೆ ಇಸ್ರೇಲ್‌ ನಿರಂತರ ದಾಳಿ ಮಾಡುತ್ತಿದೆ. ಯುದ್ಧ ಘೋಷಣೆ ಬಳಿಕ ಪ್ಯಾಲೆಸ್ತೀನ್‌ನಲ್ಲಿ 17,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 4 ದಿನಗಳ ಕದನ ವಿರಾಮದ ಬಳಿಕ ಇಸ್ರೇಲ್‌ ಮತ್ತೆ ಯುದ್ಧವನ್ನು ಮುಂದುವರಿಸಿದೆ. ಈ ಮಧ್ಯೆ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆ ಮಂಡಿಸಿದೆ. ಆದರೆ ನಿರ್ಣಯವನ್ನು ಬೆಂಬಲಿಸಲು ಅಮೆರಿಕ ನಿರಾಕರಿಸಿದ್ದು, ಪ್ರಸ್ತಾವಣೆಗೆ ವಿಟೊ ಅಧಿಕಾರ ಬಳಸಿ ತಡೆ ನೀಡಿದೆ.

ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 13 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಬ್ರಿಟನ್ ಮತದಾನದಿಂದ ದೂರ ಉಳಿದಿದೆ. ಪ್ಯಾಲೆಸ್ತೀನ್‌ ಹಾಗೂ ಇಸ್ರೇಲ್ ಜನರು ಶಾಂತಿಯುತವಾಗಿ ಬದುಕಬೇಕು. ಆದರೆ ದೀರ್ಘಕಾಲದ ಶಾಂತಿಯನ್ನು ಹಮಾಸ್ ಬಯಸುವುದಿಲ್ಲ. ಹಾಗಾಗಿ ಶಾಂತಿಯನ್ನು ಅಮೆರಿಕ ಬಯಸಿದರೂ ತಕ್ಷಣದ ಕದನ ವಿರಾಮ ನಿರ್ಣಯವನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇಸ್ರೇಲ್‌ ಯುದ್ಧ ಘೋಷಿಸಿದ ಬಳಿಕ 17,487 ಪ್ಯಾಲೆಸ್ತೀನ್‌ ನಾಗರಿಕರನ್ನು ಇಸ್ರೇಲ್‌ ಹತ್ಯೆ ಮಾಡಿದೆ. ಅದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಗಾಝಾದ ವಿಶಾಲ ಪ್ರದೇಶಗಳು ಪಾಳುಭೂಮಿಯಾಗಿ ಮಾರ್ಪಟ್ಟಿವೆ. ಸುಮಾರು 80 ಪ್ರತಿಶತ ಜನಸಂಖ್ಯೆಯು ಸ್ಥಳಾಂತರಗೊಂಡಿದ್ದು, ಆಹಾರ, ಇಂಧನ, ನೀರು ಮತ್ತು ಔಷಧಿಗಳ ಭೀಕರ ಕೊರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಸಾಂಕ್ರಾಮಿ ರೋಗದ ಭೀತಿ ಎದುರಾಗಿದೆ ಎಂದು UN ಹೇಳಿದೆ.

ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರು ತುರ್ತು ಭದ್ರತಾ ಮಂಡಳಿಯ ಸಭೆಯನ್ನು ಕರೆದು ಕದನ ವಿರಾಮಕ್ಕೆ ಆಗ್ರಹಿಸಿದ್ದಾರೆ. ಒತ್ತೆಯಾಳುಗಳ ಬಿಡುಗಡೆಗೆ ಒತ್ತಾಯಿಸಿದ್ದು, ಹಮಾಸ್ ನಡೆಸಿದ ಕ್ರೌರ್ಯಕ್ಕೆ ಪ್ಯಾಲೆಸ್ತೀನ್‌ ಜನರ ಸಾಮೂಹಿಕ ಶಿಕ್ಷೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ ಎಂದು ಹೇಳಿದ್ದಾರೆ.

ಇಸ್ರೇಲ್‌ಗೆ ಯುದ್ಧಕ್ಕೆ ಬಿಲಿಯನ್‌ಗಟ್ಟಲೆ ಡಾಲರ್‌ಗಳ ಮಿಲಿಟರಿ ಸಹಾಯವನ್ನು ಪೂರೈಸುವ ಯುಎಸ್, ನಿರ್ಣಯವನ್ನು ತಿರಸ್ಕರಿಸಿದೆ. ಭದ್ರತಾ ಮಂಡಳಿಯ 5 ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ಅಮೆರಿಕ, ಹಮಾಸ್ ದಾಳಿಯ ವಿರುದ್ಧ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ವಾದಿಸಿ ನಿರ್ಣಯವನ್ನು ತಿರಸ್ಕರಿಸಿದೆ. ಮತದಾನದಿಂದ ಬ್ರಿಟನ್ ದೂರ ಉಳಿದಿದ್ದು, ಫ್ರಾನ್ಸ್‌ ಸೇರಿ ಕೆಲವು ಯುಎಸ್ ಮಿತ್ರರಾಷ್ಟ್ರಗಳು ಕದನ ವಿರಾಮಕ್ಕೆ ಮತ ಹಾಕಿದೆ.

ಕೌನ್ಸಿಲ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ್ನು ಪ್ರತಿನಿಧಿಸುತ್ತಿದ್ದ ರಾಬರ್ಟ್ ಎ.ವುಡ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಬೇಷರತ್ತಾದ ಮತ್ತು ತಕ್ಷಣದ ಕದನ ವಿರಾಮದ ನಿರ್ಣಯವು ಅವಾಸ್ತವಿಕ ಮಾತ್ರವಲ್ಲ ಅಪಾಯಕಾರಿಯಾಗಿದೆ.  ಹಮಾಸ್ ಇದು ಮರುಸಂಘಟಿಸಲು ಸಾಧ್ಯವಾಗುತ್ತದೆ ಮತ್ತು ಅ.7ರಂದು ಮಾಡಿದ್ದನ್ನು ಪುನರಾವರ್ತಿಸುತ್ತದೆ  ಎಂದು ಹೇಳಿದ್ದಾರೆ.

ಎರಡು ತಿಂಗಳ ಯುದ್ಧದ ನಂತರ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಆಹಾರ, ಔಷಧಿ ಮತ್ತು ಅಡುಗೆ ಅನಿಲದಂತಹ ಅಗತ್ಯ ವಸ್ತುಗಳನ್ನು ತಲುಪಿಸಲು ವಿಫಲವಾಗುತ್ತಿದೆ. ನಾಗರಿಕರ ಸುವ್ಯವಸ್ಥೆ ಹದಗೆಡುತ್ತಿದೆ. ಯುಎನ್ ವಾಹನಗಳಿಗೆ ಕಲ್ಲೆಸೆಯಲಾಗುತ್ತಿದೆ. ಆಹಾರ ಸಾಮಾಗ್ರಿಗಳನ್ನು ಲೂಟಿ ಮಾಡಲಾಗುತ್ತಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ವಿಶ್ವಸಂಸ್ಥೆಯ ಪರಿಹಾರ ಸಂಸ್ಥೆಯ ನಿರ್ದೇಶಕ ಥಾಮಸ್ ವೈಟ್ ಹೇಳಿದ್ದಾರೆ.

ದಕ್ಷಿಣ ಗಾಝಾದ ಅತಿದೊಡ್ಡ ನಗರವಾದ ಖಾನ್ ಯೂನಿಸ್ ಮತ್ತು ಉತ್ತರ ಗಾಝಾದ ಮೇಲೆ ದಾಳಿ ನಡೆಯುತ್ತಿವೆ. ಇಸ್ರೇಲ್‌ ಪಡೆಗಳು ಗಾಝಾ ನಗರದ ಶಾಜೈ ನೆರೆಹೊರೆಯ ಮೇಲೆ ಮತ್ತು ನಗರದ ಉತ್ತರಕ್ಕೆ ಜನನಿಬಿಡ ಪ್ರದೇಶವಾದ ಜಬಾಲಿಯಾ ಮೇಲೆ ದಾಳಿ ನಡೆಸುತ್ತಿದೆ. ಅಲ್ಲಿ ಹಮಾಸ್ ಕಾರ್ಯಕರ್ತರಿದ್ದಾರೆ ಎಂದು ಇಸ್ರೇಲ್‌ ಆರೋಪಿಸಿದೆ.

ಇದನ್ನು ಓದಿ: ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ: ಅಗ್ರಸ್ಥಾನದಲ್ಲಿರುವ ಯುಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ತಾಯಿಯೊಬ್ಬಳು ತನ್ನ ಮಗುವಿಗೆ ಅಮಾನುಷವಾಗಿ ಥಳಿಸಿದ್ದಾಳೆ ಎನ್ನಲಾದ ವಿಡಿಯೋ ಕರ್ನಾಟಕದ್ದಲ್ಲ

0
ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತಾಯಿಯೋರ್ವಳು ತನ್ನ ಮಗನಿಗೆ ನಿರ್ಧಯವಾಗಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಒಂದು ನಿಮಿಷ ಮೂವತ್ತು ಸೆಕೆಂಡ್‌ನ ವಿಡಿಯೋದಲ್ಲಿ ತಾಯಿ ತನ್ನ ಮಗನ ಎದೆಯ ಮೇಲೆ ಕುಳಿತು...