Homeಕರೋನಾ ತಲ್ಲಣಕೊರೊನಾ ಲಸಿಕೆ: ಭಾರತದಲ್ಲಿ ಮುಂದಿನ ವಾರ ಅಸ್ಟ್ರಾಜೆನೆಕಾಗೆ ಅನುಮತಿ ಸಾಧ್ಯತೆ

ಕೊರೊನಾ ಲಸಿಕೆ: ಭಾರತದಲ್ಲಿ ಮುಂದಿನ ವಾರ ಅಸ್ಟ್ರಾಜೆನೆಕಾಗೆ ಅನುಮತಿ ಸಾಧ್ಯತೆ

ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಲಸಿಕೆಯ ಅನುಮತಿಗಾಗಿ ಬಂದಿದ್ದ ಮೂರು ಅರ್ಜಿಯನ್ನು ಡಿಸೆಂಬರ್ 9 ರಂದು ಪರಿಶೀಲಿಸಿದೆ.

- Advertisement -
- Advertisement -

ಬ್ರಿಟನ್ ಮೂಲದ ಆಕ್ಸ್‌‌ಫರ್ಡ್ ತಯಾರಿಕೆಯ ಕೊರೊನಾ ವೈರಸ್ ಲಸಿಕೆ ಆಸ್ಟ್ರಾಜೆನೆಕಾದ ತುರ್ತು ಬಳಕೆಗೆ ಭಾರತವು ಮುಂದಿನ ವಾರದಲ್ಲಿ ಅನುಮತಿ ನೀಡಲಿದೆ ಎಂದು ಎರಡು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಈಗಾಗಲೇ ಔಷಧ ನಿಯಂತ್ರಕರಿಗೆ ಹೆಚ್ಚುವರಿ ಡೇಟಾವನ್ನು ಆಸ್ಟ್ರಾಜೆನೆಕಾದ ಸ್ಥಳೀಯ ತಯಾರಕರು ನೀಡಿದ್ದಾರೆ ಎನ್ನಲಾಗಿದೆ.

ಬ್ರಿಟನ್ ಔಷಧ ನಿಯಂತ್ರಕವು ಪ್ರಯೋಗದ ಡೇಟಾವನ್ನು ಇನ್ನೂ ಪರೀಕ್ಷಿಸುತ್ತಿದ್ದು, ಒಂದು ವೇಳೆ ಭಾರತವು ಈ ಲಸಿಕೆಗೆ ಅನುಮತಿ ನೀಡಿದರೆ ಭಾರತವು ಅಸ್ಟ್ರಾಜೆನೆಕಾಗೆ ಅನುಮತಿ ನೀಡಿದ ಮೊದಲ ರಾಷ್ಟ್ರವಾಗಲಿದೆ.

ಇದನ್ನೂ ಓದಿ: 60 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ಸಿದ್ದವಾಗಿರುವ ಭಾರತ

ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ತಯಾರಿಸುವ ದೇಶವಾದ ಭಾರತವು ಮುಂದಿನ ತಿಂಗಳು ತನ್ನ ನಾಗರಿಕರಿಗೆ ಚುಚ್ಚುಮದ್ದನ್ನು ನೀಡಲು ಬಯಸಿದ್ದು, ಈಗಾಗಲೇ ಫೈಝೆರ್ ಮತ್ತು ಸ್ಥಳೀಯ ಕಂಪನಿ ಭಾರತ್ ಬಯೋಟೆಕ್ ತಯಾರಿಸಿದ ಲಸಿಕೆಗಳಿಗೆ ತುರ್ತು ಬಳಕೆಯ ದೃಡೀಕರಣ ಅರ್ಜಿಗಳನ್ನು ಸಹ ಪರಿಗಣಿಸುತ್ತಿದೆ.

ವಿಶ್ವದಲ್ಲೆ ಅತೀ ಹೆಚ್ಚು ಸೋಂಕಿತರಿರುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆಯು ಭಾರತದಂತಹ ಉಷ್ಣ ವಾತಾವರಣವಿರುವ ದೇಶಗಳಿಗೆ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಅಗ್ಗವಾಗಿದ್ದು, ಸಾಗಿಸಲು ಕೂಡಾ ಸುಲಭವಾಗಿದೆ. ಅಲ್ಲದೆ ಇದನ್ನು ಸಾಮಾನ್ಯ ಫ್ರಿಜ್ ತಾಪಮಾನದಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಬಹುದಾಗಿದೆ ಎನ್ನಲಾಗಿದೆ.

ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಲಸಿಕೆಯ ಅನುಮತಿಗಾಗಿ ಬಂದಿದ್ದ ಮೂರು ಅರ್ಜಿಯನ್ನು ಡಿಸೆಂಬರ್ 9 ರಂದು ಪರಿಶೀಲಿಸಿದ್ದು, ಎಲ್ಲಾ ಕಂಪನಿಗಳಿಂದ ಹೆಚ್ಚಿನ ಮಾಹಿತಿ ಪಡೆದಿದೆ.

ಇದನ್ನೂ ಓದಿ: ಪ್ರಯೋಗಾರ್ಥ ಕೊರೊನಾ ಲಸಿಕೆ ತೆಗೆದುಕೊಂಡಿದ್ದ ಹರಿಯಾಣ ಆರೋಗ್ಯ ಸಚಿವನಿಗೆ ಕೊರೊನಾ ಪಾಸಿಟಿವ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...