Homeಮುಖಪುಟವಕ್ಫ್ ಕಾಯಿದೆ ರದ್ದುಗೊಳಿಸಲು ಖಾಸಗಿ ಸದಸ್ಯ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ

ವಕ್ಫ್ ಕಾಯಿದೆ ರದ್ದುಗೊಳಿಸಲು ಖಾಸಗಿ ಸದಸ್ಯ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ

- Advertisement -
- Advertisement -

ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಕಾಯಿದೆ 1995ನ್ನು ಹಿಂತೆಗೆದುಕೊಳ್ಳುವ/ ರದ್ದುಗೊಳಿಸುವ ಖಾಸಗಿ ಸದಸ್ಯ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

ಬಿಜೆಪಿ ಸಂಸದ ಹರನಾಥ್‌ ಸಿಂಗ್‌ ಯಾದವ್‌ ವಕ್ಫ್‌ ಕಾಯಿದೆ ರದ್ದುಗೊಳಿಸುವ ಮಸೂದೆ 2022ನ್ನು ಮಂಡಿಸಿದ್ದಾರೆ. ಕಾಂಗ್ರೆಸ್‌, ಟಿಎಂಸಿ, ಡಿಎಂಕೆ, ಸಿಪಿಐ, ಸಿಪಿಐ (ಎಂ) ಮತ್ತು ಆರ್‌ಜೆಡಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆಡಳಿತ ಪಕ್ಷ ಬಿಜೆಪಿಯ 53 ಸದಸ್ಯರ ಬೆಂಬಲದೊಂದಿಗೆ ಮಸೂದೆಯನ್ನು ಮಂಡಿಸಲಾಯಿತು. ಇದಕ್ಕೆ 32 ಸದಸ್ಯರು ವಿರೋಧಿಸಿದ್ದಾರೆ.

ಹರನಾಥ್‌ ಸಿಂಗ್‌ ಯಾದವ್ ಮಸೂದೆಯನ್ನು ಮಂಡಿಸಿದ್ದು, ಮಸೂದೆ ಮೇಲೆ  ಚರ್ಚೆ ನಡೆಯಲಿದೆ. ಪ್ರಸ್ತಾವಿಕ ಹಂತದಲ್ಲಿ ಮಸೂದೆಯನ್ನು ವಿರೋಧಿಸಿದ ಸಿಪಿಐ(ಎಂ) ಸಂಸದ ಎಳಮರಮ್ ಕರೀಂ, ವಕ್ಫ್ ಮಂಡಳಿಯು ದೇಶದಲ್ಲಿ ಅನೇಕ ಧಾರ್ಮಿಕ ಸ್ಥಳಗಳು ಮತ್ತು ಅನಾಥಾಶ್ರಮಗಳನ್ನು ನಡೆಸುತ್ತಿದೆ. ಇಂತಹ ಸೂಕ್ಷ್ಮ ವಿಚಾರವನ್ನು ಮುಟ್ಟಿದರೆ ಜನರಲ್ಲಿ ಕೋಮು ವಿಭಜನೆಯಾಗುತ್ತದೆ. ಆದ್ದರಿಂದ ಮಸೂದೆಯನ್ನು ಒಪ್ಪಿಕೊಳ್ಳಬಾರದು ಅದನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಸದ ಜಾನ್ ಬ್ರಿಟಾಸ್ ಅವರು ಈ ಬಗ್ಗೆ ಮಾತನಾಡಿದ್ದು, ಮಸೂದೆಯ ಏಕೈಕ ಉದ್ದೇಶವೆಂದರೆ ವಿವಿಧ ವರ್ಗಗಳ ನಡುವೆ ದ್ವೇಷ ಮತ್ತು ಧ್ರುವೀಕರಣವನ್ನು ಸೃಷ್ಟಿಸುವುದಾಗಿದೆ. ಇದು ಸಮಾಜದಲ್ಲಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಡಳಿತ ಪಕ್ಷದ ಸದಸ್ಯರು ಧ್ರುವೀಕರಣ ಮತ್ತು ಅಸಂಗತತೆಯನ್ನು ಸೃಷ್ಟಿಸುವ ಇಂತಹ ಮಸೂದೆಗಳನ್ನು ಬೆಂಬಲಿಸಬಾರದು. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದರು.

ಮಸೂದೆ ಮಂಡನೆಯನ್ನು ವಿರೋಧಿಸುವಾಗ ಸಿಪಿಐ ಸಂಸದ ಸಂತೋಷ್ ಕುಮಾರ್ ಪಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಡಿಎಂಕೆ ಸಂಸದ ತಿರುಚಿ ಶಿವ ಕೂಡ ಈ ಮಸೂದೆಗೆ ಬಲವಾಗಿ ವಿರೋಧಿಸಿದ್ದಾರೆ. ಖಾಸಗಿ ಸದಸ್ಯ ಮಸೂದೆ ಕೋಮು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಸಿಪಿಐಎಂ ಸಂಸದ ವಿ ಶಿವದಾಸನ್ ಹೇಳಿದ್ದಾರೆ.

ಜವಾಹರ್ ಸಿರ್ಕಾರ್ (ಟಿಎಂಸಿ), ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್), ಫೌಜಿಯಾ ಖಾನ್ (ಎನ್‌ಸಿಪಿ), ಮಹುವಾ ಮಜಿ (ಜೆಎಂಎಂ), ಮತ್ತು ಮನೋಜ್ ಕುಮಾರ್ ಝಾ (ಆರ್‌ಜೆಡಿ) ಕೂಡ ಮಸೂದೆಯ ಬಗ್ಗೆ ತಮ್ಮ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’: ಕೇಂದ್ರದ ಉತ್ತರದಲ್ಲಿ ಸ್ಪಷ್ಟನೆ ಇಲ್ಲ!

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...