Homeಮುಖಪುಟಅಲ್ಪಸಂಖ್ಯಾತರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು? ಇಲ್ಲಿದೆ ವಿವರ

ಅಲ್ಪಸಂಖ್ಯಾತರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು? ಇಲ್ಲಿದೆ ವಿವರ

ಬಿಜೆಪಿ ಪಕ್ಷವು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಒಂದೂ ಟಿಕೆಟ್ ನೀಡಿಲ್ಲ.

- Advertisement -
- Advertisement -

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ಟಿಕೆಟ್ ಘೋಷಿಸಿದ್ದು ಈಗಾಗಲೇ ನಾಮಪತ್ರ ಸಲ್ಲಿಸಲಾಗಿದೆ. ಅಲ್ಪಸಂಖ್ಯಾತರಿಗೆ ಯಾವ ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ ಎಂಬುದರ ವಿವರ ಇಲ್ಲಿದೆ.

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಕೆ ವಿವರ

ಬಿಜೆಪಿ: 00
ಕಾಂಗ್ರೆಸ್: 15
ಜೆಡಿಎಸ್: 22
ಆಪ್: 25

ಕಾಂಗ್ರೆಸ್ ಟಿಕೆಟ್ ಪಡೆದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು

  1. ಗುಲ್ಬರ್ಗ ಉತ್ತರ- ಕನೀಜ್ ಫಾತಿಮಾ
  2. ಬೀದರ್‌- ರಹೀಮ್ ಖಾನ್

3. ಶಿವಾಜಿನಗರ- ರಿಜ್ವಾನ್ ಅರ್ಷದ್

4. ಶಾಂತಿನಗರ- ಎನ್‌.ಎ. ಹ್ಯಾರಿಸ್‌

5. ಚಾಮರಾಜಪೇಟೆ- ಜಮೀರ್‌ ಅಹಮದ್ ಖಾನ್‌

6. ರಾಮನಗರ- ಇಕ್ಬಾಲ್ ಹುಸೇನ್‌ ಎಚ್‌.ಎ.

7. ಮಂಗಳೂರು- ಯು.ಟಿ. ಖಾದರ್‌

8. ನರಸಿಂಹರಾಜ – ತನ್ವೀರ್ ಸೇಠ್‌

9. ಮಂಗಳೂರು ನಗರ ಉತ್ತರ: ಇನಾಯತ್ ಅಲಿ

10. ಶಿಗ್ಗಾಂವಿ: ಯಾಸೀರ್ ಅಹ್ಮದ್ ​ಖಾನ್​ ಪಠಾಣ್

11. ಬೆಳಗಾವಿ ಉತ್ತರ: ಆಸಿಫ್ ಸೇಟ್

12. ಬಿಜಾಪುರ ನಗರ: ಅಬ್ದುಲ್ ಹಮೀದ್ ಮುಶ್ರೀಫ್

13. ರಾಯಚೂರು ನಗರ; ಮೊಹಮ್ಮದ್ ಶಾಲಂ

14. ಗಂಗಾವತಿ: ಇಕ್ಬಾಲ್ ಅನ್ಸಾರಿ

15. ತುಮಕೂರು ನಗರ: ಇಕ್ಬಾಲ್ ಅಹಮದ್

ಜೆಡಿಎಸ್ ಟಿಕೆಟ್ ಪಡೆದ ಮುಸ್ಲಿಂ ಅಭ್ಯರ್ಥಿಗಳ ಪಟ್ಟಿ

  1. ಖಾನಾಪುರ: ನಾಸೀರ್ ಬಾಪುಲಸಾಬ್ ಭಗವಾನ್
  2. ಜಮಖಂಡಿ: ಯಾಕೂಬ್‌ ಬಾಬಾಲಾಲ್‌ ಕಪಡೇವಾಲ್
  3. ಬೀಳಗಿ: ರುಕ್ಮುದ್ದೀನ್‌ ಸೌದಗರ್
  4. ಬಿಜಾಪುರ ನಗರ: ಬಂದೇ ನವಾಜ್‌ ಮಾಬರಿ
  5. ಗುಲ್ಬರ್ಗ ಉತ್ತರ: ನಾಸಿರ್ ಹುಸೇನ್ ಉಸ್ತಾದ್
  6. ಬಸವಕಲ್ಯಾಣ; ಎಸ್ ವೈ ಖಾದ್ರಿ
  7. ಹುಮ್ನಾಬಾದ್: ಸಿಎಂ ಫಯಾಜ್
  8. ಭಾಲ್ಕಿ: ರೌಫ್ ಪಟೇಲ್
  9. ರೋಣ: ಮುಗದಮ್‌ ಸಾಬ್‌ ಮುದೋಳ
  10. ಕುಂದಗೋಳ: ಹಜರತ್‌ ಅಲಿ ಅಲ್ಲಾಸಾಬ್
  11. ಹರಪನಹಳ್ಳಿ : ಎನ್ ಎಂ ನೂರ್ ಅಹಮದ್
  12. ದಾವಣಗೆರೆ ದಕ್ಷಿಣ: ಅಮಾನುಲ್ಲಾ ಖಾನ್
  13. ಸಾಗರ: ಜಾಕೀರ್‌
  14. ಬೈಂದೂರು : ಮನ್ಸೂರ್ ಇಬ್ರಾಹಿಂ
  15. ಕಾಪು: ಸಬೀನಾ ಸಮದ್
  16. ಹೆಬ್ಬಾಳ: ಮೊಹಿದ್ ಅಲ್ತಾಫ್
  17. ಸರ್ವಜ್ಞನಗರ: ಮೊಹಮ್ಮದ್ ಮುಷ್ತಾಕ್
  18. ಚಿಕ್ಕಪೇಟೆ:  ಇಮ್ರಾನ್‌ಪಾಷ
  19. ಬೆಳ್ತಂಗಡಿ: ಅಶ್ರಫ್ ಅಲಿ ಕುಂಞ
  20. ಮಂಗಳೂರು ಉತ್ತರ: ಮೊಯಿದ್ದೀನ್ ಬಾವಾ
  21. ವಿರಾಜಪೇಟೆ: ಮನ್ಸೂರ್‌ ಆಲಿ
  22. ನರಸಿಂಹರಾಜ: ಅಬ್ದುಲ್‌ ಖಾದರ್ ಶಾಹಿದ್

ಕ್ರಿಶ್ಚಿಯನ್ ಸಮುದಾಯಕ್ಕೆ ಟಿಕೆಟ್ ನೀಡಿಕೆ ವಿವರ

ಬಿಜೆಪಿ: 00
ಕಾಂಗ್ರೆಸ್: 03
ಜೆಡಿಎಸ್: 01
ಆಪ್: 04

ಜೈನ ಸಮುದಾಯಕ್ಕೆ ಟಿಕೆಟ್ ನೀಡಿಕೆ ವಿವರ

ಬಿಜೆಪಿ: 01
ಕಾಂಗ್ರೆಸ್: 01
ಜೆಡಿಎಸ್: 01
ಆಪ್: 02

ಬಿಜೆಪಿ ಪಕ್ಷವು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಒಂದೂ ಟಿಕೆಟ್ ನೀಡಿಲ್ಲ. ಕಳೆದ ಚುನಾವಣೆಯಲ್ಲಿಯೂ ಸಹ ನೀಡಿರಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಅಲ್ಪಸಂಖ್ಯಾತ ಸಮುದಾಯಗಳಿಗೆ, ಮಹಿಳೆಯರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಆಮ್ ಆದ್ಮಿ ಪಕ್ಷ ಮುಂದಿದೆ. ಈ ಕುರಿತು ನಾನುಗೌರಿಯೊಂದಿಗೆ ಪ್ರತಿಕ್ರಿಯಿಸಿದ ಆಪ್ ವಕ್ತಾರ ದರ್ಶನ್ ಜೈನ್, “ಒಟ್ಟು 212 ಅಭ್ಯರ್ಥಿಗಳು ಕಣದಲ್ಲಿದ್ದರೂ ಸಹ ಪರಿಶಿಷ್ಟ ಜಾತಿ ಸಮುದಾಯಕ್ಕೆ ಬೇರೆಲ್ಲಾ ಪಕ್ಷಗಳಿಗಿಂತ 40% ಜಾಸ್ತಿ ಪ್ರಾತಿನಿಧ್ಯ ನೀಡಿದ್ದೇವೆ (ಒಟ್ಟು 49 ಮಂದಿಗೆ ಟಿಕೆಟ್). ಎಸ್ಸಿ ಸಮುದಾಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ಜಾತಿಗಳಿಗೂ (21 ವಿವಿಧ ದಲಿತ ಜಾತಿಗಳಿಗೆ) ಪ್ರಾತಿನಿಧ್ಯ ನೀಡಲಾಗಿದೆ. 20 ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ. ಆ ಮೂಲಕ ಸಾಮಾಜಿಕ ನ್ಯಾಯಕ್ಕೆ ಅತೀ ಹೆಚ್ಚಿನ ನ್ಯಾಯ ಒದಗಿಸಿರುವುದು ನಮ್ಮ ಪಕ್ಷವೇ ಎಂಬುದು ಹೆಮ್ಮೆಯ ಸಂಗತಿ” ಎಂದಿದ್ದಾರೆ.

ನಮ್ಮ ಅಭ್ಯರ್ಥಿಗಳ ಸರಾಸರಿ ವಯಸ್ಸು 45.3 ಆಗಿದೆ. ಕರ್ನಾಟಕಕ್ಕೆ ನಿಜ ಅರ್ಥದ ಜನಪರ ಪರ್ಯಾಯ ರಾಜಕಾರಣ ನೀಡಲು ನಾವು ಎಲ್ಲಾ ಶ್ರಮ ಹಾಕಿದ್ದೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮಹಿಳೆಯರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ? ಇಲ್ಲಿದೆ ಡೀಟೈಲ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read