Homeಮುಖಪುಟಮಹಿಳೆಯರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ? ಇಲ್ಲಿದೆ ಡೀಟೈಲ್ಸ್

ಮಹಿಳೆಯರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ? ಇಲ್ಲಿದೆ ಡೀಟೈಲ್ಸ್

- Advertisement -
- Advertisement -

ಆಕಾಸದ ಅರ್ಧ ನಕ್ಷತ್ರಗಳು ನಾವು, ಸಿಡಿದರೆ ಬೆಂಕಿಯ ಕಿಡಿಗಳಾಗುವೆವು – ಇದು ಮಹಿಳಾ ಚಳವಳಿಯ ಜನಪ್ರಿಯ ಘೋಷಣೆ. ರಾಜ್ಯದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಯಾವ ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ ಎಂಬ ಅಂಕಿ ಅಂಶಗಳನ್ನು ನೋಡಿದರೆ ನಿರಾಸೆ ಕಾಡುತ್ತದೆ. ಏಕೆಂದರೆ ಮಹಿಳೆಯರಿಗೆ ಟಿಕೆಟ್ ನೀಡಲು ಮೂರು ಪ್ರಮುಖ ಪಕ್ಷಗಳು ಹಿಂದೇಟು ಹಾಕಿವೆ. ಇನ್ನು ಆಮ್ ಆದ್ಮಿ ಪಕ್ಷ 20 ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಇರುವ ಪಕ್ಷಗಳಲ್ಲಿಯೇ ಉತ್ತರ ಸಾಧನೆ ಮಾಡಿದೆ. ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ ಎಂಬುದರ ಡೀಟೈಲ್ಸ್ ಇಲ್ಲಿದೆ.

ಬಿಜೆಪಿ: 11

ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅದರಲ್ಲಿ 11 ಮಹಿಳೆಯರಿಗೆ ಟಿಕೆಟ್ ನೀಡಿದೆ.

  1. ನಿಪ್ಪಾಣಿ: ಶಶಿಕಲಾ ಜೊಲ್ಲೆ
  2. ಸವದತ್ತಿ ಯಲ್ಲಮ್ಮ: ರತ್ನ ವಿಶ್ವನಾಥ್‌ ಮಾಮನಿ
  3. ಗುರುಮಠಕಲ್: ಲಲಿತಾ ಅನಾಪುರ್‌
  4. ಕೊಪ್ಪಳ: ಮಂಜುಳಾ ಅಮರೇಶ್‌ ಕರಡಿ
  5. ಕಾರವಾರ : ರೂಪಾಲಿ ನಾಯ್ಕ್‌
  6. ಹಿರಿಯೂರು: ಪೂರ್ಣಿಮಾ ಶ್ರೀನಿವಾಸ್‌
  7. ಕೆಜಿಎಫ್: ಅಶ್ವಿನಿ ಸಂಪಂಗಿ
  8. ಮಹದೇವಪುರ: ಮಂಜುಳಾ ಅರವಿಂದ್‌ ಲಿಂಬಾವಳಿ
  9. ನಾಗಮಂಗಲ: ಸುಧಾ ಶಿವರಾಮೇಗೌಡ
  10. ಪುತ್ತೂರು: ಆಶಾ ತಿಮ್ಮಪ್ಪ
  11. ಸುಳ್ಯ : ಭಾಗೀರಥಿ ಮುರುಳ್ಯ

ಕಾಂಗ್ರೆಸ್: 11

ಪ್ರತಿಪಕ್ಷ ಕಾಂಗ್ರೆಸ್ 223 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು ಅದರಲ್ಲಿ 11 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ.

  1. ಬೆಳಗಾವಿ ಗ್ರಾಮೀಣ: ಲಕ್ಷ್ಮೀ ಹೆಬ್ಬಾಳ್ಕರ್
  2. ಬೆಳಗಾವಿ ದಕ್ಷಿಣ: ಪ್ರಭಾವತಿ ಮಾಸ್ತಮರ್ಡಿ
  3. ಖಾನಪುರ: ಅಂಜಲಿ ನಿಂಬಾಳ್ಕರ್
  4. ಗುಲ್ಬರ್ಗ ಉತ್ತರ: ಕನೀಝ್‌ ಪತಿಮಾ
  5. ದೇವದುರ್ಗ: ಶ್ರೀದೇವಿ ಆರ್.ನಾಯಕ್
  6. ಶಿರಹಟ್ಟಿ: ಸುಜಾತ ಎನ್ ದೊಡ್ಡಮನಿ
  7. ಕುಂದಗೋಳ: ಕುಸುಮವತಿ ಶಿವಳ್ಳಿ
  8. ಮೂಡಿಗೆರೆ: ನಯನ ಜ್ಯೋತಿ
  9. ಕೆಜಿಎಫ್: ರೂಪಕಲಾ ಎಂ.
  10. ರಾಜರಾಜೇಶ್ವರಿ ನಗರ: ಎಚ್.ಕುಸುಮಾ
  11. ಜಯನಗರ: ಸೌಮ್ಯ ರೆಡ್ಡಿ
Photo Courtesy: Feminism in India

ಜೆಡಿಎಸ್ – 13

ಮತ್ತೊಂದು ಪ್ರತಿಪಕ್ಷ ಜೆಡಿಎಸ್ 208 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು 13 ಮಹಿಳೆಯರಿಗೆ ಟಿಕೆಟ್ ನೀಡಿದೆ.

  1. ಕಿತ್ತೂರು: ಅಶ್ವಿನಿ ಪೂಜೇರ್
  2. ಸಿಂದಗಿ: ವಿಶಾಲಾಕ್ಷಿ ಶಿವಾನಂದ
  3. ಆಳಂದ: ಮಹೇಶ್ವರಿ ವಾಲೆ
  4. ದೇವದುರ್ಗ: ಕರೆಮ್ಮಾ ಜಿ ನಾಯಕ್
  5. ಕಾರವಾರ: ಚೈತ್ರಾ ಕೋಟಕಾರ್
  6. ಬ್ಯಾಡಗಿ: ಸುನೀತಾ ಎಂ ಪೂಜಾರ್
  7. ಶಿವಮೊಗ್ಗ ಗ್ರಾಮೀಣ: ಶಾರಾದ ಪೂರ್ಯ ನಾಯಕ್
  8. ಭದ್ರಾವತಿ: ಶಾರದ ಅಪ್ಪಾಜಿಗೌಡ
  9. ಕಾಪು: ಸಬೀನಾ ಸಮದ್
  10. ಪುಲಿಕೇಶಿನಗರ: ಅನುರಾಧ
  11. ಮೂಡಬಿದರೆ: ಅಮರಶ್ರೀ
  12. ಮಂಗಳೂರು ನಗರ ದಕ್ಷಿಣ: ಸುಮತಿ ಹೆಗಡೆ
  13. ಪುತ್ತೂರು: ದಿವ್ಯಾಪ್ರಭಾ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು 199 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು 13 ಮಹಿಳೆಯರಿಗೆ ಟಿಕೆಟ್ ನೀಡಿದೆ.

ಆಮ್ ಆದ್ಮಿ ಪಕ್ಷವು 212 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು 20 ಮಹಿಳೆಯರಿಗೆ ಟಿಕೆಟ್ ನೀಡಿದೆ. ಆ ಮೂಲಕ ಅತಿ ಹೆಚ್ಚು ಮಹಿಳೆಯರಿಗೆ ಟಿಕೆಟ್ ನೀಡಿದ ಪಕ್ಷ ಎನಿಸಿಕೊಂಡಿದೆ.

ಇದನ್ನೂ ಓದಿ: ವರುಣಾ: ಸೋಮಣ್ಣನವರಿಗೆ ಘೇರಾವ್, ಸಿದ್ದರಾಮಯ್ಯನವರಿಗೆ ಜೈಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read