Homeಮುಖಪುಟಬಿಹಾರದಲ್ಲಿ ಆನಂದ್ ಮೋಹನ್ ಅವರ ಬಿಡುಗಡೆ ಮತ್ತು ರಾಜಕಾರಣಿಗಳ ಹುಸಿ ಸಾಮಾಜಿಕ ನ್ಯಾಯ

ಬಿಹಾರದಲ್ಲಿ ಆನಂದ್ ಮೋಹನ್ ಅವರ ಬಿಡುಗಡೆ ಮತ್ತು ರಾಜಕಾರಣಿಗಳ ಹುಸಿ ಸಾಮಾಜಿಕ ನ್ಯಾಯ

- Advertisement -
- Advertisement -

ಬಿಹಾರ ಸರಕಾರವು ಆನಂದ ಮೋಹನ್ ಎಂಬ ಗೂಂಡಾ ರಾಜಕಾರಣಿಯನ್ನು ಜೈಲಿನಿಂದ ಬಿಡುಗಡೆಗೊಳಿಸಿರುವುದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತೇವೆ ಎಂದು ಹೇಳುವ ರಾಜಕಾರಣಿಗಳ ಇಬ್ಬಗೆ ನೀತಿಯನ್ನು ಎತ್ತಿತೋರಿಸುತ್ತದೆ. ಆತನನ್ನು ಬಿಡುಗಡೆ ಮಾಡುವ ಸರಕಾರದ ನಿರ್ಧಾರವು ಸಾಮಾಜಿಕ ಬಹುಸಂಖ್ಯಾತವಾದದ ಅಪಾಯಗಳನ್ನು ಅನಾವರಣಗೊಳಿಸಿದೆ.

******

ಸಾಮಾಜಿಕ ನ್ಯಾಯದ ಮಹಾನ್ ಪ್ರತಿಮೆಯಾದ ಲಾಲೂ ಪ್ರಸಾದ್ ಯಾದವ್ ಬಿಹಾರವನ್ನು ಆಳುತ್ತಿದ್ದಾಗ, ಡಿಸೆಂಬರ್ 5, 1994ರಂದು ಗೋಪಾಲ್ ಗಂಜ್‌ನ ಕಲೆಕ್ಟರ್ ಜಿ. ಕೃಷ್ಣಯ್ಯ ಅವರನ್ನು ರಾಜಕಾರಣಿಯಾಗಿ ಬದಲಾದ ಗೂಂಡಾ- ಆನಂದ ಮೋಹನ್ ಎಂಬಾತನ ನೇತೃತ್ವದಲ್ಲಿ ಗುಂಪೊಂದು ಕಲ್ಲು ಹೊಡೆದು ಕೊಂದಿತ್ತು. ಸಾಮಾಜಿಕ ನ್ಯಾಯದ ಇನ್ನೊಂದು ಪ್ರತಿಮೆಯಾಗಿರುವ, ಈಗ ಬಿಹಾರದ ಮುಖ್ಯಮಂತ್ರಿಯೂ ಆಗಿರುವ ನಿತೀಶ್ ಕುಮಾರ್ ಅವರು, ಕೃಷ್ಣಯ್ಯ ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈ ಆನಂದ ಮೋಹನ್‌ನ ಬಿಡುಗಡೆಗೆ ದಾರಿ ಮಾಡಿಕೊಟ್ಟಿದ್ದಾರೆ. ಆತನನ್ನು ಬಿಡುಗಡೆಗೊಳಿಸಿಯೂ ಆಗಿದೆ.

ಕೃಷ್ಣಯ್ಯ ಅವರು ದಾಳಿಯ ವೇಳೆ ಕಲ್ಲುಗಳೇಟಿನಿಂದ ಸಾವಿಗೀಡಾದರು. ಈ ದಾಳಿಯ ಹಿಂದಿನ ಸಾಂಕೇತಿಕತೆಯು ಒಂದು ಕಾಲಘಟ್ಟಗಳನ್ನು ಮೀರುವ ಸಾಧ್ಯತೆಯಿದೆ. ಸಂವಿಧಾನವು ಆಧುನಿಕತೆಯ ಒಂದು ಯುಗವನ್ನು ಪ್ರವರ್ತಿಸಿದೆ. ಕಾನೂನಿನ ಆಡಳಿತ ಎಂಬ ಮೆಕಾಲೆಯ ಬೀಜವನ್ನು ಸೂಟುಬೂಟುಗಳಲ್ಲಿ ಅಲಂಕೃತರಾದ ಬ್ರಿಟಿಷ್ ರಾಣಿಯ ಮಕ್ಕಳು ಸೂಲಗಿತ್ತಿಯರಾಗಿ ಬೆಳೆಸಿದರು. ಆದುದರಿಂದ ಒಬ್ಬ “ಅಸ್ಪೃಶ್ಯ” ಕಾನೂನೇ ಇಲ್ಲದ ಗೋಪಾಲ್ ಗಂಜ್‌ನ ಕಲೆಕ್ಟರ್ ಆದ; ಮತ್ತು ಶಿಲಾಯುಗದ ಒಂದು ಸಾಮಾಜಿಕ ನೈತಿಕತೆಯು ಆತನನ್ನು ಕಲ್ಲೆಸೆದು ಕೊಂದಿತು.

ಕೃಷ್ಣಯ್ಯ ಅವರು ಭಾರತದ ಗಣರಾಜ್ಯವನ್ನು ಗೋಪಾಲ್ ಗಂಜ್‌ನಲ್ಲಿ ಪ್ರತಿನಿಧಿಸುತ್ತಿದ್ದ ವ್ಯಕ್ತಿ. ಡಿ.ಸಿಗಳು ಈ ಗಣರಾಜ್ಯದ ತಳಮಟ್ಟದಲ್ಲಿನ ರಾಯಭಾರಿಗಳು. ಸರಕಾರವು ತಳಮಟ್ಟದಲ್ಲಿ ಒಂದು ಪ್ರಾತಿನಿಧ್ಯವನ್ನು ಹೊಂದಿದ್ದೇ ಆಗಿದ್ದಲ್ಲಿ- ಅದು ಕಲೆಕ್ಟರ್ ಅಥವಾ ಜಿಲ್ಲಾಧಿಕಾರಿ ಕಚೇರಿ ಆಗಿರುತ್ತದೆ. ಆದುದರಿಂದ, ಜಿಲ್ಲಾಧಿಕಾರಿಯನ್ನು ಕೊಲೆ ಮಾಡುವುದೆಂದರೆ, ಭಾರತೀಯ ಗಣರಾಜ್ಯದ ಮೇಲೆ ದಾಳಿ ಮಾಡಿದಂತೆಯೇ. ಕೊಲೆಗಡುಕರನಿಗೆ ಖಂಡಿತವಾಗಿಯೂ ಈ ಜಿಲ್ಲಾಧಿಕಾರಿಯ ಸಾಮಾಜಿಕ ಹಿನ್ನೆಲೆ ಗೊತ್ತಿರಲೇಬೇಕು. ಕಾನೂನುಪ್ರಕಾರ ಕೊಲೆಗಡುಕನಿಗೆ ಗಲ್ಲಾಗಲೇಬೇಕು. ಬದಲಾಗಿ ಭಾರತೀಯ ಗಣರಾಜ್ಯದ ಶತ್ರುವಿಗೆ ಈಗ ಸ್ವಾತಂತ್ರ್ಯ ನೀಡಲಾಗಿದೆ.

ಲಾಲೂ ಪ್ರಸಾದ್ ಯಾದವ್

ಗಣರಾಜ್ಯದ ಮೇಲಿನ ಈ ದಾಳಿಯು ಸಾಮಾಜಿಕ ನ್ಯಾಯದ ಆಡಳಿತದ ಅಡಿಯಲ್ಲಿ ನಡೆಯಿತು. ಆಗಿನಿಂದ ಸಾಮಾಜಿಕ ನ್ಯಾಯದ ಸಿದ್ಧಾಂತಿಗಳೆಲ್ಲಾ ಅಡಗಿ ಕುಳಿತಿದ್ದಾರೆ. ದಿವಂಗತ ಪತ್ರಕರ್ತ ಚಂದನ್ ಮಿತ್ರಾ ಅವರ ಮಾತುಗಳಲ್ಲಿ ಹೇಳುವುದಾದರೆ, ದಲಿತ ಚಿಂತನೆಯ ಮುಖಂಡರ ಮೌನವು ಶೋಷಕರಿಗೆ ಬಹುಮಾನ ನೀಡುವುದಕ್ಕೆ ಸಮನಾಗಿರುತ್ತದೆ. ದಲಿತರು ಬಹಳ ಕಾಲದಿಂದ ಲಾಲೂ ಪ್ರಸಾದ್ ಯಾದವ್ ಅವರನ್ನು ಬಹುಮಾನಿಸುತ್ತಾ ಬಂದಿದ್ದಾರೆ.

ಸಮಕಾಲೀನ ಭಾರತವು ಎರಡು ಬಗೆಯ ಕಠೋರ ಸತ್ಯಗಳನ್ನು ಎದುರಿಸಲು ನಿರಾಕರಿಸುತ್ತಲೇಬಂದಿದೆ. ಒಂದನೆಯದು: ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಯಾವುದೇ ಸಾಮಾಜಿಕ ಲೆಕ್ಕತಪಾಸಣೆಯಿಲ್ಲ. ಎರಡನೆಯದು: ತಮ್ಮ ಸಾವಿಗೆ ಕಾರಣವಾಗುವ ಬೀದಿ ದೀಪಗಳಿಂದ ಆಕರ್ಷಿತವಾಗುವ ಮಳೆಗಾಲದ ಈಚಲ ಹುಳುಗಳಂತೆ ದಲಿತ ಚಿಂತನೆಯ ನಾಯಕರು ವರ್ತಿಸುತ್ತಾರೆ. ಒಬಿಸಿಗಳು ಬೀದಿದೀಪಗಳಂತೆ.

ಮಂಡಲ್ ಆಯೋಗದ ಅನುಷ್ಠಾನದ ತನಕ- ನನ್ನ ವಿವೇಕ ನನಗೆ ಹೇಳುತ್ತದೆ, ಭಾರತೀಯ ಸಮಾಜವು ದಲಿತ-ಆದಿವಾಸಿ ಹಕ್ಕುಗಳ ಬಗ್ಗೆ ರಾಜಿ ಮಾಡಿಕೊಂಡಿತ್ತು ಮತ್ತು ಸಕಾರಾತ್ಮಕ ಕಾರ್ಯದಲ್ಲಿ ತೊಡಗಿತ್ತು. ಮಂಡಲ್ ಆಯೋಗವು ಆ ಒಮ್ಮತವನ್ನು ನುಚ್ಚುನೂರು ಮಾಡಿತು. ಮಂಡಲ್ ಆಯೋಗದ ಅಧ್ಯಕ್ಷರಾಗಿದ್ದ ಪಿ.ಬಿ. ಮಂಡಲ್ ಅವರು ಆಯೋಗದ ಏಕೈಕ ದಲಿತ ಸದಸ್ಯರಾಗಿದ್ದ ಎಲ್.ಆರ್. ನಾಯ್ಕ್ ಅವರನ್ನು ಅಪಮಾನಿಸಿದ್ದರು ಎಂಬುದನ್ನು ಈಚಲ ಹುಳ್ಳಿಗಳು ಕಡೆಗಣಿಸುತ್ತವೆ. ನಾಯ್ಕ್ ಅವರು ಒಬಿಸಿ ಕೋಟಾವನ್ನು ಎರಡು ಕ್ರಮಗಳಲ್ಲಿ- ಒಂದನೆಯದಾಗಿ, ತೀರಾ ಹಿಂದುಳಿದವರು (ಕುಶಲಕರ್ಮಿಗಳು) ಮತ್ತು ಎರಡನೆಯದಾಗಿ, ಹಿಂದುಳಿದವರು (ರೈತ ಒಬಿಸಿಗಳು)- ವಿಭಜಿಸಬೇಕು ಎಂದು ಆಯೋಗಕ್ಕೆ ಸಲಹೆ ಮಾಡಿದ್ದರು. ಅವರ ಸಲಹೆಯನ್ನು ತಿರಸ್ಕರಿಸಲಾಯಿತು ಮತ್ತು ಅವರು ಆಯೋಗದ ಶಿಫಾರಸ್ಸುಗಳಿಗೆ ಸಹಿ ಹಾಕಲು ನಿರಾಕರಿಸಿದರು. ಬದಲಾಗಿ ಅವರು ಭಿನ್ನಮತದ ಟಿಪ್ಪಣಿಯೊಂದನ್ನು ಸಲ್ಲಿಸಿದರು. ಮಂಡಲ್ ಆಯೋಗದ ಶಿಫಾರಸ್ಸುಗಳಿಗೆ ದಲಿತರ ಒಪ್ಪಿಗೆ ಇಲ್ಲ ಎಂಬುದು ದಲಿತ ಚಿಂತನೆಯ ನಾಯಕರನ್ನು ಎಂದಾದರೂ ಬಾಧಿಸಿದೆಯೆ? ಸವರ್ಣೀಯ/ಮೇಲ್ಜಾತಿ ಭಯವಿರುವ ಚಿಂತನಾಶೀಲ ದಲಿತರು- ಒಬಿಸಿಗಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಬಯಸುತ್ತಾರೆಯೆ?

ಇದನ್ನೂ ಓದಿ: ಉಪಶಮನ ನೀತಿಯಡಿ ಗ್ಯಾಂಗ್‌ಸ್ಟರ್‌ ರಾಜಕಾರಣಿ ಆನಂದ್‌ ಬಿಡುಗಡೆ; ನ್ಯಾಯದ ಅಣಕ ಎಂದ ಐಎಎಸ್ ಸಂಘ

ದಲಿತರು ಲಾಲೂ ಪ್ರಸಾದರ “ಬುರಾ ಬಲಾ” (ಒಳ್ಳೆಯ-ಕೆಟ್ಟ) ಪ್ರಮೇಯದಿಂದ ಉತ್ತೇಜಿತರಾದರೆ? ಕೇವಲ ಸವರ್ಣೀಯರ ವಿನಾಶದಿಂದ ದಲಿತರ ಉದ್ಧಾರವಾಗುವುದು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇವೆಯೇ? ದಶಕಗಳ ಹಿಂದೆ ಬ್ರಾಹ್ಮಣ ಅಧಿಪತ್ಯವನ್ನು ಮುರಿದ ತಮಿಳುನಾಡಿನಲ್ಲಿ ದಲಿತರ ಪರಿಸ್ಥಿತಿ ಏನು? ದಲಿತರ ಬ್ರಾಹ್ಮಣ ವಿರೋಧಿ ಮಾತಿನ ಮಳೆಯ ಕುರಿತ ಮೋಹಕ್ಕೆ ಯಾವುದೇ ತಾರ್ಕಿಕ ವಿವರಣೆಯನ್ನು ಕಂಡುಕೊಳ್ಳಲು ನಾನಂತೂ ವಿಫಲನಾಗಿದ್ದೇನೆ.

ದಲಿತರು ಕಂಡುಕೊಳ್ಳದ್ದು ಮತ್ತು ಸಾಮಾಜಿಕ ನ್ಯಾಯದ ಸಮರ್ಥಕರು ವಿವರಿಸದೇ ಇರುವಂತದ್ದು ಇದು: ಮೇಲೇಳುತ್ತಿರುವ ಎರಡು ಸಾಮಾಜಿಕ ಶಕ್ತಿಗಳು ಒಂದು ಇನ್ನೊಂದರೊಂದಿಗೆ ಸ್ಪರ್ಧಿಸಲು ಬಯಸುತ್ತವೆಯೇ ಹೊರತು ಪರಸ್ಪರ ಸಹಕರಿಸಲು ಅಲ್ಲ. ಈ ಸ್ಪರ್ಧೆಯು ಸುಲಭವಾಗಿ ಸಂಘರ್ಷವಾಗಿ ಪರಿಣಮಿಸಿ ಅವನತಿ ಹೊಂದಬಹುದು. ದಲಿತರು ಮತ್ತು ಒಬಿಸಿಗಳು ಗಣರಾಜ್ಯದ ಸಂಕಲ್ಪದಿಂದ ಅತ್ಯಂತ ಹೆಚ್ಚು ಲಾಭ ಪಡೆದವರು. ದಲಿತ ಬುದ್ಧಿಜೀವಿ ಸಂಪ್ರದಾಯವು ಜಾತಿಪದ್ಧತಿಯನ್ನು ತೊಡೆದುಹಾಕಲು ಬಯಸಿದರೆ, ಒಬಿಸಿ ಸಂಪ್ರದಾಯವು ರಾಜಕೀಯ ಅಧಿಕಾರ ವ್ಯವಸ್ಥೆ ಮತ್ತು ಸಾರ್ವಜನಿಕ ಸಂಸ್ಥೆಗಳಿಂದ ಸವರ್ಣೀಯರನ್ನು ತೊಲಗಿಸಿ, ತಮ್ಮದೇ ಅಧಿಪತ್ಯವನ್ನು ಹೇರಲು ಬಯಸುತ್ತದೆ. ಒಮ್ಮೆ ಆಧಿಕಾರ ಪಡೆದರೆ, ಒಬಿಸಿಗಳು (ಆಳಬೇಕಾದ) ಪ್ರಜೆಗಳಿಗಾಗಿ ಹುಡುಕಲಾರಂಭಿಸುತ್ತಾರೆ ಮತ್ತು ದಲಿತರು ಅವರ ಗುರಿಯಾಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ದಲಿತರು ವಿಫಲರಾಗಿದ್ದಾರೆ. “ನವ ಠಾಕೂರರು” ಠಾಕೂರರಾಗಲು ಬಯಸುತ್ತಾರೆ- ಠಾಕೂರರ ರೀತಿಯ ಔದಾರ್ಯ ಇಲ್ಲದೆಯೇ. ಸಶಕ್ತೀಕರಣಗೊಂಡ ಒಬಿಸಿಗಳು ಸಲಾಮು ಬಯಸುತ್ತಾರೆ, ದಲಿತರು ಅದನ್ನು ನಿರಾಕರಿಸುತ್ತಾರೆ. ದಲಿತರ ಈ ಸ್ಥಿತಿಯು ಅವರನ್ನು ಒಬಿಸಿಗಳ ಜೊತೆ ಸಂಘರ್ಷಕ್ಕೆ ತಳ್ಳುತ್ತದೆ.

ನಿತೀಶ್ ಕುಮಾರ್

ನನ್ನ ಜೀವನದ ಅನುಭವವು ಕಂಡುಕೊಂಡಿರುವಂತೆ, ಒಬಿಸಿಗಳು ಒಂದು ಸಾಮಾಜಿಕ ವರ್ಗವಾಗಿ ಕನಿಷ್ಟ ತರ್ಕಶೀಲರು. ಎಲ್.ಆರ್. ನಾಯ್ಕ್ ಅವರನ್ನು ಉಲ್ಲೇಖಿಸಿ ಹೇಳುವುದಾದರೆ, ಒಬಿಸಿ ಚಿಂತಕರು ತಕ್ಷಣವೇ ನಿಮ್ಮ ಕುರಿತು ಸಂಶಯಪಡುತ್ತಾರೆ. ಯುಪಿ ಗೆಸ್ಟ್‌ಹೌಸ್ ಪ್ರಕರಣವನ್ನು ಉಲ್ಲೇಖಿಸಿ; ಅವರ ಕಣ್ಣು ಕೆಂಪಾಗುತ್ತದೆ. ಅಖಿಲೇಶ್ ಯಾದವ್ ಅವರು ಹಲವಾರು ದಲಿತ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸಿದ ಆರೋಪದ ವಿಷಯ ಉಲ್ಲೇಖಿಸಿ; ಅವರು ದೂರ ನಡೆದೇಬಿಡುತ್ತಾರೆ.

ಈಗ ನಾವು ಒಂದು ಸಾಮಾಜಿಕ ನ್ಯಾಯದ ಲೆಕ್ಕ ತಪಾಸಣೆ ಮಾಡೋಣ. 1984ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಮಂತ್ರಿ ಆದಾಗ ಲಾಲೂ ಪ್ರಸಾದ್ ಯಾದವ್ ಅವರು ಕೇವಲ 36 ವರ್ಷ ವಯಸ್ಸಿನವರಾಗಿದ್ದರು. ಅಧಿಕಾರದಲ್ಲಿ ರಾಜೀವ್ ಗಾಂಧಿಯವರ ಮೊದಲ ಕ್ರಮವೆಂದರೆ, ಉಪಗ್ರಹ ಆಧರಿತ ದೂರ ಶಿಕ್ಷಣವಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಭಾರೀ ಗಾತ್ರದ ಆಂಟೆನಾ ಮತ್ತು ತರಗತಿಗಳಲ್ಲಿ ಟಿವಿ ಸೆಟ್ಟುಗಳನ್ನು ಅಳವಡಿಸಲಾಯಿತು. ವಿದ್ಯುತ್ ಇಲ್ಲದೆ ಯೋಜನೆ ವಿಫಲವಾಯಿತು. ನಂತರ ಅವರು ವಿಶ್ವದಲ್ಲೇ ಅತ್ಯಂತ ದೊಡ್ಡದಾದ ದೂರ ಶಿಕ್ಷಣ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯ ದೂರ ಶಿಕ್ಷಣ ವಿಶ್ವವಿದ್ಯಾಲಯ (IGNOU) ಸ್ಥಾಪಿಸಿದರು. ಜವಾಹರ್ ನವೋದಯ ವಿದ್ಯಾಲಯಗಳು ಗ್ರಾಮೀಣ ಭಾರತದ ಪ್ರತಿಭೆಗಳನ್ನು ಬೆಳೆಸುವಲ್ಲಿ ಅತ್ಯಂತ ಯಶಸ್ವಿ ಪ್ರಯೋಗಗಳಲ್ಲಿ ಒಂದು. ಈ ಶಾಲೆಗಳ ವಿದ್ಯಾರ್ಥಿಗಳು ಇಂದು ವಿಶ್ವದಾದ್ಯಂತ ಹರಡಿದ್ದಾರೆ. ರಾಜೀವ್ ಗಾಂಧಿಯವರು ಆರಂಭಿಸಿದ ಐಟಿ ಕ್ರಾಂತಿಯ ಬಗ್ಗೆ ಹೇಳುವ ಆಗತ್ಯವೇ ಇಲ್ಲ.

ಹೀಗಿರುವಾಗ, ಸಾಮಾಜಿಕ ನ್ಯಾಯದ ರಾಜಕಾರಣಿಗಳು ಆರಂಭಿಸಿದ ಕ್ರಮಗಳಾದರೂ ಯಾವುವು? ಚಾರ್ವಾಹ ವಿದ್ಯಾಲಯ. ಒಬಿಸಿ ಪ್ರತಿಮೆಗಳು ತಮ್ಮ “ಬಫೆಲೋ ರಾಷ್ಟ್ರೀಯತೆ”ಯ ಪ್ರಮೇಯಕ್ಕಿಂತ ಮೇಲೇರಲು ಸಾಧ್ಯವಾಗಲೇ ಇಲ್ಲ. ಈ ಪ್ರಮೇಯ ಸುಲಭ: ಹಿಂದೆ ಎಷ್ಟು ಉತ್ಪಾದನೆ ಇತ್ತೋ ಅಷ್ಟನ್ನೇ ತಿನ್ನಿರಿ, ಹೊಸದೇನನ್ನೂ ಉತ್ಪಾದಿಸಬೇಡಿ. ಈಗ ಕಾಂಗ್ರೆಸ್ ಕೂಡಾ ಈ ಸಾಮಾಜಿಕ ನ್ಯಾಯದ ರಾಜಕಾರಣಿಗಳಿಗೆ ಕೈಚಾಚಿರುವುದರಿಂದ ದೇಶದ ನಾಶವನ್ನು ನಿಲ್ಲಿಸಲಾಗದು. ಸಾಮಾಜಿಕ ಬಹುಸಂಖ್ಯಾತವಾದ ಕೂಡಾ ಧಾರ್ಮಿಕ ಬಹುಸಂಖ್ಯಾತವಾದದಷ್ಟೇ ಭಯಾನಕವಾಗಬಲ್ಲದು ಎಂಬುದನ್ನು ಕಾಂಗ್ರೆಸ್ ಗಮನಿಸಬೇಕು.

ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಚಂದ್ರ ಭಾನ್ ಪ್ರಸಾದ್
(ಲೇಖಕರು ಯುಎಸ್‌ಎಯ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಮೆರ್ಕಟಸ್ ಸೆಂಟರ್‌ನಲ್ಲಿ ಸಹಯೋಗಿ ವಿದ್ವಾಂಸರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...