ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಸಚಿವ ವಿ.ಸೋಮಣ್ಣ ಎರಡೂ ಕ್ಷೇತ್ರಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ.
ಚಾಮರಾಜನಗರದಲ್ಲಿ 13ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ 13,000 ಮತಗಳ ಅಂತರದಿಂದ ಬೃಹತ್ ಮುನ್ನಡೆ ಸಾಧಿಸಿದ್ದಾರೆ. ವಿ.ಸೋಮಣ್ಣ ಸೋಲಿನ ಕಡೆ ಮುಖ ಮಾಡಿದ್ದಾರೆ.
Visuals of V Somanna leaving counting center in Varuna. pic.twitter.com/PLLCU4sWZo
— Imran Khan (@KeypadGuerilla) May 13, 2023
ಇನ್ನು ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯನವರು 6,000 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯೂ ವಿ.ಸೋಮಣ್ಣ ಹಿನ್ನಡೆ ಅನುಭವಿಸಿದ್ದು, ಬೇಸೆತ್ತು ಮತ ಕೇಂದ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯನವರನ್ನು ಸೋಲಿಸುವ ಸಲುವಾಗಿ ಬಿಜೆಪಿ ಎರಡೂ ಕಡೆ ಸೋಮಣ್ಣನವರನ್ನು ಕಣಕ್ಕಿಳಿಸಿತ್ತು. ಈ ಮೊದಲು ಅವರು ಬೆಂಗಳೂರಿನ ಗೋವಿಂದರಾಜನಗರವನ್ನು ಪ್ರತಿನಿಧಿಸುತ್ತಿದ್ದರು. ಸದ್ಯ ಆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಸತತ ಮೂರನೇ ಸುತ್ತಿನಲ್ಲಿಯೂ ಬಿಜೆಪಿಯ ಸಿ.ಟಿ ರವಿಗೆ ಹಿನ್ನಡೆ


