ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಎಂಬ ಶಂಕೆಯ ಮೇಲೆ ಆತನನ್ನು ಹಿಂದುತ್ವ ಗುಂಪು ಹತ್ಯೆ ಮಾಡಿರುವ ಘಟನೆ ಬಿಹಾರದ ಬಿಹಾರದ ಸರನ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮೊಹಮ್ಮದ್ ಅಹಿರುದ್ದೀನ್ (55) ಎನ್ನವವರು ಹತ್ಯೆಗೀಡಾದ ವ್ಯಕ್ತಿ ತಿಳಿದುಬಂದಿದೆ. ಇವರು ಮೂಳೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ”ಮೊಹಮ್ಮದ್ ಜಹಿರುದ್ದೀನ್ ಅವರು ಬುಧವಾರ ರಾತ್ರಿ ಕೆಲಸಕ್ಕೆ ಹೋಗುತ್ತಿದ್ದಾಗ ಅವರ ವಾಹನ ಕೆಟ್ಟುಹೋಯಿತು. ಆಗ ಅವರಿಗೆ ಸಹಾಯ ಮಾಡಲು ಪುರುಷರ ಗುಂಪೊಂದು ಬಂದಿತು. ವಾಹನದಿಂದ ಮಾಂಸದ ವಾಸನೆ ಬಂದಿತು ಎಂದು ಅದು ಗೋಮಾಂಸ ಎಂದು ಹೇಳಿ ಆತನ ವಾಹನದೊಳಗೆ ನುಗ್ಗಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
”ಆ ವ್ಯಕ್ತಿಗಳು ವಾಹನದೊಳಗೆ ಕೆಲವು ಮೂಳೆಗಳನ್ನು ಕಂಡು ಜಹೀರುದ್ದೀನ್‌ನನ್ನು ದನದ ಮಾಂಸ ಸಾಗಿಸುತ್ತಿದ್ದನೆಂದು ಶಂಕಿಸಿ ಥಳಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆ ಬಳಿಕ ಜಹಿರುದ್ದೀನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆ ವೇಳೆ ಅವರು ಮೃತಪಟ್ಟರು ಎಂದು ಬಿಹಾರ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜಹಿರುದ್ದೀನ್ ಅವರ ಸಂಬಂಧಿಕರು ಆರು ಜನರ ಹೆಸರಿನ ಜೊತೆಗೆ 25 ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
In Bihar's Saran, Mohammad Zahiruddin Miyan, a 55-year-old Muslim truck driver, was lynched to death. In his truck, Zahiruddin was transporting dry bones to the bone factory.
He was brutally beaten and suffered serious injuries as a result. Meanwhile, due to the bad… pic.twitter.com/3lzpY8CAWU
— Meer Faisal (@meerfaisal01) June 29, 2023
ಆರೋಪಿಗಳ ವಿರುದ್ಧ ಕೊಲೆ, ಅಕ್ರಮ ಬಂಧನ, ಗಲಭೆ ಮತ್ತು ಕಾನೂನುಬಾಹಿರ ಸಭೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸರನ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗಳಾ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಗೋಮಾಂಸ ಸಾಗಣೆ ಶಂಕೆ ಮೇಲೆ ಮುಸ್ಲಿಂ ವ್ಯಕ್ತಿಯನ್ನು ಕೊಂದ ಹಿಂದುತ್ವ ಸಂಘಟನೆಯ ಗುಂಪು


