Homeಮುಖಪುಟಎಲ್ಲಾ ಸರ್ಕಾರಿ ಶಾಲೆಗಳಿಗೂ 'ಉಪಹಾರ ಯೋಜನೆ' ಜಾರಿ ಮಾಡಿದ ತಮಿಳುನಾಡು ಸರ್ಕಾರ

ಎಲ್ಲಾ ಸರ್ಕಾರಿ ಶಾಲೆಗಳಿಗೂ ‘ಉಪಹಾರ ಯೋಜನೆ’ ಜಾರಿ ಮಾಡಿದ ತಮಿಳುನಾಡು ಸರ್ಕಾರ

- Advertisement -
- Advertisement -

ತಮಿಳುನಾಡು ಸರ್ಕಾರವು ಶಾಲಾ ಮಕ್ಕಳಿಗಾಗಿ ಜಾರಿಗೆ ತಂದಿದ್ದ ‘ಉಪಹಾರ ಯೋಜನೆ’ಯನ್ನು ಇದೀಗ ರಾಜ್ಯದಾದ್ಯಂತ ಎಲ್ಲಾ 31,000 ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ. ಈ ಯೋಜನೆಯು ರಾಜ್ಯದ 17 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿದೆ.

ರಾಜ್ಯದ ವಿದ್ಯಾರ್ಥಿಗಳು ಹಸಿವಿನಿಂದ ಶಾಲೆಗೆ ಬರುತ್ತವೆ ಎಂದು ಸೆಪ್ಟೆಂಬರ್ 15ರಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಸರ್ಕಾರವು ಈ ಉಪಹಾರ ಯೋಜನೆಯನ್ನು ಪ್ರಾರಂಭಿಸಿತು. ಆ ಸಮಯದಲ್ಲಿ, ಈ ಯೋಜನೆಯು 1,545 ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 1 ಮತ್ತು 5 ನೇ ತರಗತಿಯ 1.14 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು.

”ಮಕ್ಕಳು ಹಸಿವಿನಿಂದ ಇರಬಾರದು, ಅಪೌಷ್ಟಿಕತೆಯನ್ನು ತಡೆಗಟ್ಟುವುದು, ಮಕ್ಕಳ ದೈಹಿಕ ಎತ್ತರ, ತೂಕ ಹೆಚ್ಚಿಸುವುದು ಮತ್ತು ರಕ್ತಹೀನತೆ, ವಿಟಮಿನ್ ಬಿ 12 ಕೊರತೆಯನ್ನು ತಡೆಗಟ್ಟುವ ಗುರಿಯೊಮದಿಗೆ ಈ ಯೋಜನೆಯನ್ನು ತಮಿಳುನಾಡು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಈ ಯೋಜನೆ ಪ್ರಾರಂಭವಾದಾಗಿನಿಂದ ಫಲಾನುಭವಿ ಶಾಲೆಗಳು ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಸುಧಾರಣೆಯನ್ನು ಕಂಡಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಪ್ರತಿ ದಿನ ನೀಡಬೇಕಾದ ಆಹಾರದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರತಿ ಮಗುವಿಗೆ ದಿನಕ್ಕೆ ಐವತ್ತು ಗ್ರಾಂ ಧಾನ್ಯಗಳಾದ ರವೆ (ರವೆ), ಗೋಧಿ, ಅಕ್ಕಿ ಮತ್ತು ರಾಗಿ, 15 ಗ್ರಾಂ ಉದ್ದು ಮತ್ತು ಸ್ಥಳೀಯವಾಗಿ ಲಭ್ಯವಿರುವ ತರಕಾರಿಗಳನ್ನು ನೀಡಲಾಗುತ್ತದೆ ಮತ್ತು 150 ರಿಂದ 200 ಗ್ರಾಂ ಬೇಯಿಸಿದ ಆಹಾರ ಮತ್ತು 60 ಗ್ರಾಂ ಸಾಂಬಾರ್‌ನ್ನು ತರಕಾರಿಗಳೊಂದಿಗೆ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ತಮಿಳುನಾಡು: ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮಾಂಸಹಾರಿ ಹೋಟೆಲ್: ರಾಜ್ಯಪಾಲರಿಂದ ಆಕ್ಷೇಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...