Homeಮುಖಪುಟತಮಿಳುನಾಡು: ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮಾಂಸಹಾರಿ ಹೋಟೆಲ್: ರಾಜ್ಯಪಾಲರಿಂದ ಆಕ್ಷೇಪ

ತಮಿಳುನಾಡು: ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮಾಂಸಹಾರಿ ಹೋಟೆಲ್: ರಾಜ್ಯಪಾಲರಿಂದ ಆಕ್ಷೇಪ

- Advertisement -
- Advertisement -

ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಹೋಗುವ ಗಿರಿವಳಂ ರಸ್ತೆಯಲ್ಲಿ ಮಾಂಸಾಹಾರಿ ರೆಸ್ಟೋರೆಂಟ್‌ಗಳಿದೆ ಎಂದು ತಮಿಳುನಾಡು ಗವರ್ನರ್ ಆರ್ ಎನ್ ರವಿ  ಹೇಳಿದ್ದು, ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ರಾಜಭವನದಿಂದ ಹೊರಡಿಸಿದ ಹೇಳಿಕೆಯಲ್ಲಿ, ರಾಜ್ಯಪಾಲ ರವಿ, ಪವಿತ್ರ ಗಿರಿವಲಯದಲ್ಲಿ ಮತ್ತು ಅದರ  ಸಮೀಪದಲ್ಲಿ  ಶೌಚಾಲಯಗಳು ಇಲ್ಲ. ಬದಲಾಗಿ ಮಾಂಸ ಮಾರಾಟ  ಅಂಗಡಿಗಳು ಮತ್ತು ಮಾಂಸಾಹಾರಿ ಹೊಟೇಲ್ ಗಳು  ಮತ್ತು ರೆಸ್ಟೋರೆಂಟ್‌ಗಳು ಇರುವುದನ್ನು ಕಂಡು ಬೇಸರಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಈ ಕುರಿತು ಭಕ್ತರು ನೋವನ್ನು ಹಂಚಿಕೊಂಡಿದ್ದಾರೆ. ಆಹಾರ ಸೇವನೆಯು ಸಂಪೂರ್ಣವಾಗಿ ವೈಯಕ್ತಿಕವಾದ ಆಯ್ಕೆ ಎಂಬುದನ್ನು ನಾನು ನಂಬುತ್ತೇನೆ. ಆದರೆ, ಅರುಣಾಚಲೇಶ್ವರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರ ಭಾವನೆಗಳನ್ನೂ ನಾವು ಗೌರವಿಸಬೇಕು’ ಎಂದೂ ರವಿ ಅವರು ಹೇಳಿದ್ದಾರೆ.

ಗಿರಿವಳಂ ರಸ್ತೆಯಲ್ಲಿ ವಿಶೇಷವಾಗಿ ಹುಣ್ಣಿಮೆಯಂದು ಕಾಲ್ನಡಿಗೆಯಲ್ಲಿ ಭಕ್ತರು ಸಂಚರಿಸುತ್ತಾರೆ. ತಮಿಳುನಾಡು ಮತ್ತು ಇತರೆಡೆಗಳಿಂದ ಸಾವಿರಾರು ಭಕ್ತರು ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ತಿರುವಣ್ಣಾಮಲೈಗೆ ಈ ದಾರಿಯಲ್ಲಿ ನಡೆದುಕೊಂಡು ತೆರಳುತ್ತಾರೆ.

ಇದನ್ನು ಓದಿ:ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣ: ಪತಿ ಸಾಹು ಬಂಧನ, ಮೃತ ದೇಹಕ್ಕಾಗಿ ಪೊಲೀಸರ ಹುಡುಕಾಟ

 

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...