Homeಮುಖಪುಟಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣ: ಪತಿ ಸಾಹು ಬಂಧನ, ಮೃತ ದೇಹಕ್ಕಾಗಿ ಪೊಲೀಸರ...

ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣ: ಪತಿ ಸಾಹು ಬಂಧನ, ಮೃತ ದೇಹಕ್ಕಾಗಿ ಪೊಲೀಸರ ಹುಡುಕಾಟ

- Advertisement -
- Advertisement -

ನಾಗ್ಪುರ ಬಿಜೆಪಿ ನಾಯಕಿ ಸನಾ ಖಾನ್ ನಾಪತ್ತೆಯಾದ ಹತ್ತು ದಿನಗಳ ನಂತರ, ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಕೆಯ ಪತಿ ಅಮಿತ್ ಸಾಹು ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮಿತ್ ಸಾಹು ಅವರು ತಮ್ಮ ಪತ್ನಿಯ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ನಾಗ್ಪುರ ಪೊಲೀಸರ ತಂಡವು ಜಬಲ್ಪುರದ ಘೋರಾ ಬಜಾರ್ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ”ಸಾಹು ಅವರು ತಮ್ಮ ಪತ್ನಿ ಸನಾ ಖಾನ್ ಅವರ ದೇಹವನ್ನು ನದಿಗೆ ಎಸೆದಿದ್ದಾರೆ. ಆದರೆ, ಸಂತ್ರಸ್ತೆಯ ದೇಹ ಇನ್ನೂ ಪತ್ತೆಯಾಗಿಲ್ಲ” ಎಂದು ತಿಳಿಸಿದ್ದಾರೆ.

ನಾಗ್ಪುರ ನಿವಾಸಿ ಮತ್ತು ಬಿಜೆಪಿ ಅಲ್ಪಸಂಖ್ಯಾತ ಸೆಲ್ ಸದಸ್ಯೆ ಸನಾ ಖಾನ್ ಅವರು ಜಬಲ್ಪುರಕ್ಕೆ ಭೇಟಿ ನೀಡಿದ ನಂತರ ನಾಪತ್ತೆಯಾಗಿದ್ದಾರೆ. ಆಕೆಯ ಕುಟುಂಬಸ್ಥರು ಹೇಳುವ ಪ್ರಕಾರ ಸನಾ ಖಾನ್ ಅವರು ಆಗಸ್ಟ್ 1 ರಂದು ಕೊನೆಯದಾಗಿ ಜಬಲ್ಪುರದಲ್ಲಿದ್ದರು. ಅಲ್ಲಿ ಅವರ ಗಂಡ ಾಮಿತ್ ಸಾಹು ಅವರನ್ನು ಭೇಟಿಯಾಗಲು ಹೋಗಿದ್ದರು ಎಂದು ಹೇಳಿದ್ದಾರೆ..

ಸನಾ ಖಾನ್ ಅವರು ನಾಗ್ಪುರದಿಂದ ಖಾಸಗಿ ಬಸ್‌ನಲ್ಲಿ ಜಬಲ್ಪುರ ನಗರವನ್ನು ತಲುಪಿದ್ದರು. ಮರುದಿನ ತನ್ನ ತಾಯಿಗೆ ಕರೆ ಮಾಡಿದರು. ಆದರೆ, ಸ್ವಲ್ಪ ಸಮಯದ ನಂತರ ಆಕೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ನಾಗ್ಪುರ ಪೊಲೀಸ್ ತಂಡ ಜಬಲ್ಪುರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರನ್ನು ಮಹಾರಾಷ್ಟ್ರಕ್ಕೆ ಕರೆತಂದಿದ್ದಾರೆ. ಇಂದು ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಹವಣಿಕೆ; ಧರ್ಮಸ್ಥಳದ “ಮಾತಾಡುವ ಮಂಜುನಾಥ”ನ ಭಕ್ತರ ಬಾಯಲ್ಲಿ ಕಡಿಯುವ-ಕೊಲ್ಲುವ ಭಾಷೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...