Homeಮುಖಪುಟತೆಲಂಗಾಣ: ಎತ್ತು ಹೊಲಕ್ಕೆ ನುಗ್ಗಿದ್ದಕ್ಕೆ ದಂಡವಾಗಿ ದಲಿತನನ್ನು ಕಂಬಕ್ಕೆ ಕಟ್ಟಿ ಥಳಿತ

ತೆಲಂಗಾಣ: ಎತ್ತು ಹೊಲಕ್ಕೆ ನುಗ್ಗಿದ್ದಕ್ಕೆ ದಂಡವಾಗಿ ದಲಿತನನ್ನು ಕಂಬಕ್ಕೆ ಕಟ್ಟಿ ಥಳಿತ

- Advertisement -
- Advertisement -

ಮಂಚೇರಿಯಾ ಜಿಲ್ಲೆಯ ಕೋಟಪಲ್ಲಿ ಮಂಡಲದ ಶಂಕರಪುರಂನಲ್ಲಿ ದಲಿತ ಸಮುದಾಯದ ವ್ಯಕ್ತಿಗೆ ಸೇರಿದ ಎತ್ತು ಹೊಲಕ್ಕೆ ನುಗ್ಗಿ ಬೆಳೆದಿದ್ದ ಬೆಳೆಯನ್ನು ಹಾಳು ಮಾಡಿದೆ ಎಂದು ದಂಡವಾಗಿ ರೈತ ಎಸ್.ರಾಮ್ ರೆಡ್ಡಿ ಅವರು ದಲಿತನನ್ನು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ನಡೆದಿದೆ. ಈ ಘಟನೆಯನ್ನು ದಲಿತ ಸಂಘಟನೆಗಳು ಖಂಡಿಸಿವೆ.

ಬಾಪು ಎನ್ನುವ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಈ ದೌರ್ಜನ್ಯ ನಡೆದಿದೆ. ಗ್ರಾಮಸ್ಥರು ಮಧ್ಯಪ್ರವೇಶಿಸಿದ ನಂತರ ರೈತ ರಾಮರೆಡ್ಡಿ ಅವರು ಬಾಪು ಅವರನ್ನು ಬಿಡುಗಡೆ ಮಾಡಿದರು.

ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೂಳಿ ತನ್ನ ಕೃಷಿ ಹೊಲಗಳಿಗೆ ನುಗ್ಗುವಾಗ ಅದನ್ನ ತಡೆದಿಲ್ಲ ಎಂದು ರೈತ ರಾಮ್ ರೆಡ್ಡಿ ಅವರು ದಲಿತ ವ್ಯಕ್ತಿಯನ್ನು ನಿಂದಿಸಿ, ಕಂಬಕ್ಕೆ ಕಟ್ಟಿದ ನಂತರ ಥಳಿಸಿದ್ದಾರೆ. ”ಉದ್ದೇಶಪೂರ್ವಕವಾಗಿ ಅವರ ಹೊಲಕ್ಕೆ ಗೂಳಿಯನ್ನು ಬಿಡಲಾಗಿದೆ ಎಂದು ರಾಮರೆಡ್ಡಿ ಆರೋಪಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಬಾಪು, ”ರಾಮ್ ರೆಡ್ಡಿ ಅವರು ನನ್ನ ಎತ್ತನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ಇರಿಸಿಕೊಂಡಿದ್ದರು. ಆ ಬಳಿಕ ನಾನು ರಾಮ್ ರೆಡ್ಡಿಯವರ ಮನೆಗೆ ಹೋಗಿದ್ದೇನು ಆದರೆ ಆ ಸಮಯದಲ್ಲಿ ರಾಮ್ ರೆಡ್ಡಿ ಇರಲಿಲ್ಲ. ನಾನು ನನ್ನ ಜಾನುವಾರುಗಳನ್ನು ಮನೆಗೆ ಕರೆದೊಯ್ದೆ” ಎಂದು ಹೇಳಿದರು.

”ಆ ಬಳಿಕ ರಾಮ್ ರೆಡ್ಡಿ ಅವರು ನನ್ನನ್ನು ರಾಮ್ ರೆಡ್ಡಿ ಅವರ ಮನೆಗೆ ಎಳೆದೊಯ್ದು ಥಳಿಸಿದರು ಮತ್ತು ಅವರ ವಿರುದ್ಧ ಪೊಲೀಸರಿಗೆ ಯಾವುದೇ ದೂರು ನೀಡದಂತೆ ಬೆದರಿಕೆ ಹಾಕಿದರು” ಎಂದು ದುರ್ಗಂ ಬಾಪು ಹೇಳಿದರು.

ಈ ಘಟನೆಯ ಬಳಿಕ ದಲಿತ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ, ರಾಮ್ ರೆಡ್ಡಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಸಂತ್ರಸ್ತರಾದ ಬಾಪು ಅವರನ್ನು ಭೇಟಿಯಾಗಿ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

ಸಿಪಿಎಂ ಕಾರ್ಯಕರ್ತರು ಶುಕ್ರವಾರ ಪೊಲೀಸ್ ಠಾಣೆ ವರೆಗೆ ರ್ಯಾಲಿ ನಡೆಸಿ ರಾಮರೆಡ್ಡಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ಸ್ಥಳೀಯ ಪೊಲೀಸರು ರಾಮ್ ರೆಡ್ಡಿ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಅಂಬೇಡ್ಕರ್ ಪ್ರತಿಮೆ ಧ್ವಂಸ, ದಲಿತರ ಮೇಲೆ ಹಲ್ಲೆ; ಬಜರಂಗದಳ ಸದಸ್ಯ ಸೇರಿ ಮೂವರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...