Homeಮುಖಪುಟವಿವಾದಿತ ದೆಹಲಿ ಸೇವಾ ಮಸೂದೆ ಸೇರಿ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ವಿವಾದಿತ ದೆಹಲಿ ಸೇವಾ ಮಸೂದೆ ಸೇರಿ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

- Advertisement -
- Advertisement -

ವಿವಾದಿತ ದೆಹಲಿ ಸೇವಾ ಮಸೂದೆ ಸೇರಿ ಒಟ್ಟು ನಾಲ್ಕು ಪ್ರಮುಖ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ (ಆ.11) ಸಹಿ ಹಾಕಿದ್ದಾರೆ.

ಉಭಯ ಸದನಗಳಲ್ಲಿ ಅಂಗೀಕಾರವಾದ ಪ್ರಮುಖ ಮಸೂದೆಗಳು- ದೆಹಲಿ ಸೇವಾ ಮಸೂದೆ ಮತ್ತು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ​​ಗೆ (ಡಿಪಿಡಿಪಿ) ರಾಷ್ಟ್ರಪತಿಗಳು ಶುಕ್ರವಾರ ತಡರಾತ್ರಿ ಸಹಿ ಹಾಕಿದ್ದಾರೆ. ಇದರ ಜತೆಗೆ ಇಂದು ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಗೂ ಕೂಡ ಸಹಿ ಹಾಕಿದ್ದು, ಕಾನೂನನಾಗಿ ಜಾರಿಗೆ ಬರಲಿದೆ.

ದೆಹಲಿ ಸೇವಾ ಮಸೂದೆ

ಆಮ್ ಆದ್ಮಿ ನೇತೃತ್ವದ ದೆಹಲಿ ಸರ್ಕಾರ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಈ ಸೇವಾ ಮಸೂದೆಯನ್ನು ವಿರೋಧಿಸಿದ್ದವು. ”ಕೇಂದ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಮಸೂದೆಯನ್ನು ತಂದಿದೆ. ನಮ್ಮ ಸರ್ಕಾರದ ಮೇಲೆ ಹಿಡಿತವನ್ನು ಸಾಧಿಸಿಲು ಪ್ರಯತ್ನ ಮಾಡುತ್ತಿದೆ” ಎಂದು ಆಪ್‌ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರತಿಪಕ್ಷಗಳ ವಿರೋಧದ ನಡುವೆಯೇ ದೆಹಲಿ ಸೇವಾ ಮಸೂದೆಗೆ ಲೋಕ ಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಇದೀಗ ಈ ಮಸೂದೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಮಸೂದೆ

ಮಣಿಪುರ ಹಿಂಸಾಚಾರ ವಿಚಾರವಾಗಿ ಸದನದಲ್ಲಿ ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷದ ನಡುವಿನ ಗದ್ದಲದ ಮಧ್ಯೆಯೇ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (ಡಿಪಿಡಿಪಿ) ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಈ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಯಿತು. ಪ್ರತಿಪಕ್ಷಗಳು ಅದನ್ನು ಹೆಚ್ಚಿನ ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಉಲ್ಲೇಖಿಸಲು ಒತ್ತಾಯಿಸಿದಾಗ, ಧ್ವನಿ ಮತದ ಮೂಲಕ ಇದನ್ನು ಅಂಗೀಕರಿಸಲಾಗಿದೆ. ಈ ಮಸೂದೆಯನ್ನು ರಾಜ್ಯಸಭೆಯಲ್ಲೂ ಸೋಮವಾರ (ಆಗಸ್ಟ್ 7) ಅಂಗೀಕರಗೊಳಿಸಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಷ್ಟ್ರಪತಿಗಳು ಶುಕ್ರವಾರ ರಾತ್ರಿ ಈ ಮಸೂದೆಗೆ ಸಹಿ ಹಾಕಿದ್ದಾರೆ.

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆ

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆಯು ಡಿಜಿಟಲ್ ಜನನ ಪ್ರಮಾಣಪತ್ರಗಳನ್ನು ಪಡೆಯಲು ದಾರಿ ಮಾಡಿಕೊಡುತ್ತದೆ. ಇದನ್ನು ಅನೇಕ ಉದ್ದೇಶಗಳಿಗಾಗಿ ಒಂದೇ ದಾಖಲೆಯಾಗಿ ಬಳಸಬಹುದು. ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ನೀಡುವುದು, ಮದುವೆ ನೋಂದಣಿ, ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮತ್ತು ಆಹಾರ ಕಲ್ಯಾಣ ಯೋಜನೆಗಳನ್ನು ಪಡೆಯಲು ಜನ್ಮ ಪ್ರಮಾಣಪತ್ರವನ್ನು ಬಳಸಲು ಅನುಮತಿಸುವ ನಿಬಂಧನೆಗಳನ್ನು ಈ ಕಾಯ್ದೆ ಹೊಂದಿದೆ. ಇದಕ್ಕೂ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ

ರಾಜ್ಯಸಭೆಯಲ್ಲಿ ಗುರುವಾರ ಕೇಂದ್ರ ಸರ್ಕಾರವು ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ 2023 ಅನ್ನು ಪರಿಚಯಿಸಿತು. ಇದು ಸಣ್ಣ ಅಪರಾಧಗಳನ್ನು ಸಾಬೀತುಪಡಿಸುವ ಮೂಲಕ ವ್ಯವಹಾರವನ್ನು ಸುಲಭಗೊಳಿಸಲು 42 ಕಾಯಿದೆಗಳಲ್ಲಿ 183 ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಈ ಮಸೂದೆಯನ್ನು ಮಾಡಲಾಗಿದೆ. ಈ ಮಸೂದೆಗೂ ಕೂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಇದನ್ನೂ ಓದಿ: ಅದಾನಿ ಪೋರ್ಟ್ಸ್ ಆಡಿಟರ್ ರಾಜೀನಾಮೆ ನೀಡಲಿದ್ದಾರೆ, ಹೂಡಿಕೆದಾರರು ಹುಷಾರಾಗಿರಿ: ಮೊಯಿತ್ರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read