Homeಮುಖಪುಟಮಧ್ಯಪ್ರದೇಶ: ಅಂಬೇಡ್ಕರ್ ಪ್ರತಿಮೆ ಧ್ವಂಸ, ದಲಿತರ ಮೇಲೆ ಹಲ್ಲೆ; ಬಜರಂಗದಳ ಸದಸ್ಯ ಸೇರಿ ಮೂವರ ಬಂಧನ

ಮಧ್ಯಪ್ರದೇಶ: ಅಂಬೇಡ್ಕರ್ ಪ್ರತಿಮೆ ಧ್ವಂಸ, ದಲಿತರ ಮೇಲೆ ಹಲ್ಲೆ; ಬಜರಂಗದಳ ಸದಸ್ಯ ಸೇರಿ ಮೂವರ ಬಂಧನ

- Advertisement -
- Advertisement -

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾನಿ ಮಾಡಿದ ಮತ್ತು ದಲಿತರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಜರಂಗದಳದ ಸದಸ್ಯ ಸೇರಿದಂತೆ ಮೂವರನ್ನು ಗುರುವಾರ ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಈ ಆರೋಪಿಗಳ ಗುಂಪು ಕಳೆದ ತಿಂಗಳು ಪಾದ್ರಿಯೊಬ್ಬರ ಮೇಲೆ ಹಲ್ಲೆಗೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

”ಸುಮಾರು ಎಂಟು ದಿನಗಳ ಹಿಂದೆ, ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಜಗಳ ನಡೆದಿತ್ತು. ಗ್ರಾಮಸ್ಥನೊಬ್ಬ ಕುಡಿದ ಅಮಲಿನಲ್ಲಿ ಹನುಮಾನ್ ಧ್ವಜವನ್ನು ಹಿಡಿದಿದ್ದ ಅರ್ಚಕನಿಗೆ ಕೋಲಿನಿಂದ ಹೊಡೆದನು. ಧ್ವಜದ ಮೇಲೆ ಹನುಮಂತನ ಛಾಯಾಚಿತ್ರವನ್ನು ಅಳವಡಿಸಲಾಗಿದ್ದು, ಅದು ಹಾನಿಗೊಳಗಾಗಿದೆ. ಆ ಕಾರಣದಿಂದ ಈಗಿನ ಘಟನೆ ನಡೆದಿದೆ” ಎಂದು ಇಚ್ಹಾವರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಉಷಾ ಮರಾವಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಈ ವಿಚಾರವಾಗಿ ಕನ್ಹಯ್ಯಾ ಲಾಲ್ ಎಂಬ ದಲಿತ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಮಂಗಳವಾರ, ಈ ಗುಂಪು ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಿತು ಮತ್ತು ಕನ್ಹಯ್ಯಾ ಲಾಲ್ ಅವರ ಮನೆಯನ್ನು ಧ್ವಂಸಗೊಳಿಸಿತು. ಐದು ಜನರು – ಅಜಯ್ ರಾಥೋಡ್, ಶೇರು ವರ್ಮಾ, ಸುಕ್ಕಾ ವರ್ಮಾ, ರವಿ ಮಾಲಿ ಮತ್ತು ಕುಲದೀಪ್ ವರ್ಮಾ – ದೂರುದಾರ ಮನೋಜ್ ಮಾಳವಿಯಾ ಅವರನ್ನು ತಡೆಯಲು ಪ್ರಯತ್ನಿಸಿದಾಗ ಥಳಿಸಿದ್ದಾರೆ ಎಂದು ಎಫ್‌ಐಆರ್ ನಲ್ಲಿ ದಾಖಲಿಸಲಾಗಿದೆ.

ಪ್ರತಿಮೆಗೆ ಹಾನಿಯಾಗದಂತೆ ತಡೆಯಲು ಯತ್ನಿಸಿದ ಗ್ರಾಮಸ್ಥರ ಮೇಲೆ ಈ ಬಜರಂಗದಳದ ಸದಸ್ಯನ ಗುಂಪು  ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದೆ.

”ಅವರು ಕೇಸರಿ ಧ್ವಜವನ್ನು ನೆಟ್ಟರು ಮತ್ತು ಛಾವಣಿಗೆ ಹಾನಿ ಮಾಡಿದ ನಂತರ ಹೊರಟುಹೋದರು. ಘಟನೆ ನಡೆದಾಗ ನನ್ನ ಮಗ ಕುಡಿದಿದ್ದನು. ಅವರು ನನ್ನ ಮನೆಯ ಮೇಲೆ ದಾಳಿ ಮಾಡಬಾರದಿತ್ತು ಎಂದು ಲಾಲ್ ಅವರ ತಂದೆ ದುರ್ಗಾ ಪ್ರಸಾದ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಬಜರಂಗದಳದ ಸದಸ್ಯನ ಗುಂಪಿನ ವಿರುದ್ಧ ಕ್ರಿಮಿನಲ್ ಬೆದರಿಕೆ, ನೋವುಂಟು ಮಾಡಿದ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಹಾನಿಯನ್ನುಂಟುಮಾಡುವ ಕಿಡಿಗೇಡಿತನಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿಯೂ ಸಹ ಪ್ರಕರಣ ದಾಖಲಿಸಲಾಗಿದೆ.

ಏಪ್ರಿಲ್‌ನಲ್ಲಿ, ಬಜರಂಗದಳದ ಸದಸ್ಯ ಮತ್ತು ಪ್ರಕರಣದ ಪ್ರಮುಖ ಆರೋಪಿ ರಾಥೋಡ್, ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

”ಅವರು ಮೆರವಣಿಗೆಯೊಂದಿಗೆ ಡಿಜೆ ನುಡಿಸುತ್ತಾ ಪ್ರತಿಮೆಗೆ ಹಾನಿ ಮಾಡಲು ಪ್ರಾರಂಭಿಸಿದಾಗ, ನಾನು ಅದನ್ನು ವಿರೋಧಿಸಿ ಜನಸಮೂಹದ ವಿರುದ್ಧ ಹೋರಾಡಿದೆ. ಅವರಲ್ಲಿ ಹೆಚ್ಚಿನವರು ಹೊರಗಿನವರಾಗಿದ್ದರು. ಅಂಬೇಡ್ಕರ್ ವಿರುದ್ಧ ನಮಗೆ ಏನೂ ದ್ವೇಷವಿಲ್ಲ” ಎಂದು ಆರ್‌ಎಸ್‌ಎಸ್ ಸದಸ್ಯ ಧೀರಜ್ ಪಾಟಿದಾರ್ ಪತ್ರಿಕೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಸೌಟು ಪೊರಕೆ ಹಿಡಿಯುವ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯಬೇಕು: ಶರಣ್ ಪಂಪ್ವೆಲ್ ಪ್ರಚೋದನಕಾರಿ ಹೇಳಿಕೆ; ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...