“ಈ ಪ್ರವಾಸೋದ್ಯಮ ಇಲಾಖೆ ಸಚಿವ ಅಂದ್ರೆ ನಾವೊಂಥರ ಟೂರಿಸ್ಟ್ ಗೈಡ್‍ಗಳು ಇದ್ದಂಗೆ ಅಷ್ಟೇ.. ಇದರಲ್ಲೇನು ಪ್ರಯೋಜನವಿಲ್ಲ” ಹೀಗಂತ ಹೇಳಿದ್ದವರು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಸಾ.ರಾ ಮಹೇಶ್..
ಈಗ ಅವರ ಮಾತನ್ನು ಪುನರುಚ್ಚರಿಸಿ ನನಗೆ ಆ ಖಾತೆ ಬೇಡ, ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ ಅಂತ ಅಳ್ತಾ ಇರೋದು ಬಿಜೆಪಿ ಸರ್ಕಾರ ಮಾನ್ಯ ಸಿ.ಟಿ ರವಿಯವರು.. ಏಕೆಂದರೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಸಿ.ಟಿ ರವಿಗೆ ಪ್ರವಾಸೋದ್ಯಮ ಇಲಾಖೆ ಸಚಿವ ನೀಡಲಾಗಿದೆ. ಇದು ಅವರ ಹೊಟ್ಟೆಯಲ್ಲಿ ಇಲಿಮರಿ ಓಡಾಡಿದ ಹಾಗೆ ಆಗುತ್ತಿದೆ. ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾನ ಕೊಟ್ಟಿದ್ದರೂ ಅದನ್ನು ಯಾವಾಗ ವಾಪಸ್ ಕಿತ್ತುಕೊಳ್ಳುತ್ತಾರೋ ಗೊತ್ತಿಲ್ಲ..
ಅವರಿಗೆ ಒಳ್ಳೆಯ ಖಾತೆ ಬೇಕಂತೆ. ಈ ಒಳ್ಳೇಯ ಪದಕ್ಕೆ ಏನು ಅರ್ಥ ಎಂಬುದು ಆ ಶಿವನೇ ಬಲ್ಲ. ಒಟ್ಟಿನಲ್ಲಿ ಅಂತೂ ಇಂತೂ ಯಡಿಯೂರಪ್ಪ ಸರ್ಕಾರದ ಖಾತೆ ಹಂಚಿಕೆಯಾಗಿದೆ. ಎಲ್ಲರೂ ತಮ್ಮ ಪಾಲಿಗೆ ಬಂದ ಪಂಚಾಮೃತ ಸೇವಿಸುತ್ತಿದ್ದರೆ ಸಿ.ಟಿ ರವಿ ಮಾತ್ರ ತಮ್ಮ ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದಾರೆ.
ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್.ನಾಗೇಶ್ ಮೈತ್ರಿ ಸರ್ಕಾರದಲ್ಲಿ ಕೊನೆ ಗಳಿಗೆಯಲ್ಲಿ ಸಣ್ಣ ಕೈಗಾರಿಕೆಯ ಸಚಿವನಾಗಿದ್ದರು. ಅವರಿಗೆ ಒಳ್ಳೆಯ ಸಚಿವ ಸ್ಥಾನ ಬೇಕೆಂದು ಆಪರೇಷನ್ ಕಮಲಕ್ಕೆ ಸ್ಪಂದಿಸಿದ್ದರಿಂದ ಅವರಿಗೆ ಅಬಕಾರಿ ಸಚಿವ ಸ್ಥಾನ ಸಿಕ್ಕಿದೆ. ಬಹುಶಃ ಸಿ.ಟಿ ರವಿಯವರು ಕೇಳುತ್ತಿರುವ ಒಳ್ಳೆಯ ಖಾತೆ ಅಂದ್ರೆ ಇದೇ ಇರಬಹುದೇನೋ?
ಸಿ.ಟಿ ರವಿಯವರು ಚಿಕ್ಕಮಗಳೂರಿನಲ್ಲಿ ಟೂರಿಸ್ಟ್ ಗೈಡ್ ಆಗಲು ಸುತಾರಂ ಒಪ್ಪುತ್ತಿಲ್ಲ. ನೋಡೋಣ ಅವರ ಬಂಡಾಯ ಶಮನವಾಗತ್ತೋ ಇಲ್ಲ ಉಲ್ಭಣಿಸುತ್ತೋ ಎಂದು…
ಇದನ್ನೂ ಓದಿ: ‘ನೀಲಿ’ ಕಣ್ಣಿನ ಹುಡುಗ ಸವದಿಗೆ ಸುಗ್ಗಿ: ಮೂವರು ಡಿಸಿಎಂ, ಸಿಎಂಗೆ ಮೂರುನಾಮ!



Istu speed aa