HomeUncategorizedನೌಕಾಪಡೆ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ

ನೌಕಾಪಡೆ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ

- Advertisement -
- Advertisement -

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವನ್ನು ಕೊಚ್ಚಿ ನೌಕಾ ನೆಲೆಯ ವಿಮಾನ ನಿಲ್ದಾಣದಲ್ಲಿ ಇಳಿಸಲು ರಕ್ಷಣಾ ಸಚಿವಾಲಯ ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.

ರಕ್ಷಣಾ ಸಚಿವಾಲಯವೇ ವಿಮಾನ ಇಳಿಸಲು ಮೊದಲು ಅನುಮತಿ ನೀಡಿ, ಬಳಿಕ ಉದ್ದೇಶಪೂರ್ಕವಾಗಿ ನಿರಾಕರಿಸಿದೆ ಎಂದು ಎರ್ನಾಕುಲಂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಿಯಾಸ್ ಹೇಳಿದ್ದಾರೆ.

ನೌಕಾ ನೆಲೆಯಲ್ಲಿ ಅನುಮತಿ ನಿರಾಕರಣೆ ಹಿನ್ನೆಲೆ ಕಣ್ಣೂರಿನಿಂದ ರಾಹುಲ್ ಗಾಂಧಿಯನ್ನು ಹೊತ್ತು ಹೊರಟಿದ್ದ ವಿಮಾನ ನಡುಂಬಶ್ಶೇರಿ ಸಮೀಪದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ತಿಳಿದು ಬಂದಿದೆ.

ರಾಹುಲ್ ಗಾಂಧಿಯ ಜೆಟ್ ವಿಮಾನ ಕೊಚ್ಚಿ ನೌಕಾ ನೆಲೆಯಲ್ಲಿ ಇಳಿಸಲು ರಕ್ಷಣಾ ಸಚಿವಾಲಯವೇ ಅನುಮತಿ ನೀಡಿತ್ತು ಎಂದು ವರದಿಗಳು ಖಚಿತಪಡಿಸಿವೆ. ರಾಹುಲ್ ಗಾಂಧಿ ಇಂದು (ಡಿ.1) ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಕೇರಳ ಪ್ರವಾಸ ಕೈಗೊಂಡಿದ್ದಾರೆ.

ಇದನ್ನೂ ಓದಿ : ಲೋಗೋ ಬದಲಾಯಿಸಿದ ಎನ್‌ಎಂಸಿ: ರಾಷ್ಟ್ರೀಯ ಲಾಂಚನ ಕೈ ಬಿಟ್ಟು ‘ಧನ್ವಂತರಿ’ ಚಿತ್ರ ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...