Homeಮುಖಪುಟಮೋದಿ ಟೀಕಾಕಾರನ್ನು ಗುರಿಯಾಗಿಸಿ ಭಾರತದಿಂದ ರಹಸ್ಯ ಕಾರ್ಯಾಚರಣೆ: ವಾಷಿಂಗ್ಟನ್ ಪೋಸ್ಟ್ ವರದಿ

ಮೋದಿ ಟೀಕಾಕಾರನ್ನು ಗುರಿಯಾಗಿಸಿ ಭಾರತದಿಂದ ರಹಸ್ಯ ಕಾರ್ಯಾಚರಣೆ: ವಾಷಿಂಗ್ಟನ್ ಪೋಸ್ಟ್ ವರದಿ

- Advertisement -
- Advertisement -

ನಿಷ್ಪಕ್ಷಪಾತ ಸಂಶೋಧನಾ ಸಂಸ್ಥೆಯಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಳ್ಳುತ್ತಿರುವ ಡಿಸಿನ್ಫೋ ಲ್ಯಾಬ್, (Disinfo Lab)ಯುಎಸ್‌ ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಮಾನವೀಯ ಗುಂಪುಗಳು ಮತ್ತು ಭಾರತೀಯ ಅಮೆರಿಕನ್ ಕಾರ್ಯಕರ್ತರನ್ನು ಭಾರತದ ವಿರುದ್ಧದ ಜಾಗತಿಕ ಪಿತೂರಿಯ ಭಾಗವಾಗಿ ಬಿಂಬಿಸಲು ಆಧಾರರಹಿತ ಸತ್ಯವನ್ನು ಬೆರೆಸಿದೆ ಎಂದು ಆರೋಪಿಸಲಾಗಿದೆ.

ಪ್ರಧಾನಿ ಮೋದಿ ಪರ ಪ್ರಭಾವಿಗಳ ಸಹಾಯದಿಂದ ಡಿಸಿನ್ಫೋ ಲ್ಯಾಬ್‌ನ ಅಧಾರ ರಹಿತ ಆರೋಪಗಳು ಭಾರತೀಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಮೋದಿ ಪರ ವ್ಯಕ್ತಿ, ಗುಂಪು, ಸಂಸ್ಥೆಗಳು ಕೆಲವೊಮ್ಮೆ ತಮ್ಮ ಸ್ವಂತ ಮೌಲ್ಯ ವರ್ಧಿಸಿಕೊಳ್ಳಲು ಡಿಸಿನ್ಫೋ ಲ್ಯಾಬ್‌ನ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಾಶಿಂಗ್ಟನ್‌ ಪೋಸ್ಟ್‌ನ ಗೆರ್ರಿ ಶಿಹ್, ಕ್ಲಾರಾ ಎನ್ಸ್ ಮೋರ್ಸ್ ಮತ್ತು ಪ್ರಾಂಶು ವರ್ಮಾ ಸಿದ್ಧಪಡಿಸಿದ ವರದಿ ಹೇಳಿದೆ.

ವಾಷಿಂಗ್ಟನ್ ಪೋಸ್ಟ್ ವರದಿ: Covert Indian operation seeks to discredit Modi’s critics in the U.S.

ಡಿಸಿನ್ಫೋ ಲ್ಯಾಬ್ ಸ್ಥಾಪಿಸಿರುವುದು ಮತ್ತು ಪ್ರಸ್ತುತ ಅದನ್ನು ನಡೆಸುತ್ತಿರುವುದು 39 ವರ್ಷದ ಗುಪ್ತಚರ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದಿಬ್ಯಾ ಸತ್ಪತಿ ಅವರು. ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW)ನೊಂದಿಗೆ ಈ ಸಂಸ್ಥೆಗೆ ಸಂಬಂಧವಿದೆ ಎಂದು ವರದಿ ಆರೋಪಿಸಿದೆ.

ಸರಿ ಸುಮಾರು ಹನ್ನೆರಡು ಖಾಸಗಿ ಗುತ್ತಿಗೆದಾರರನ್ನು ಒಳಗೊಂಡಿರುವ ಈ ಸಂಸ್ಥೆಯು ನವ ದೆಹಲಿಯಿಂದ ಕಾರ್ಯನಿರ್ವಹಿಸುತ್ತಿದೆ. ಮೋದಿ ಸರ್ಕಾರದ ವಿದೇಶಿ ವಿಮರ್ಶಕರನ್ನು ಅಪಖ್ಯಾತಿಗೊಳಿಸುವ ಗುರಿಯನ್ನು ಹೊಂದಿರುವ ರಹಸ್ಯ ಕಾರ್ಯಾಚರಣೆಗಳಲ್ಲಿ ಇದು ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ವರದಿ ಹೇಳಿದೆ.

ಡಿಸಿನ್ಫೋ ಲ್ಯಾಬ್ ಲ್ಯಾಬ್‌ನ ಚಟುವಟಿಕೆಗಳು ಹೆಚ್ಚಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಯೋಜಿಸಿರುವ ಆನ್‌ಲೈನ್ ಪ್ರಚಾರದ ಪರವಾಗಿದೆ. ಇದು ದೇಶಿಯ ಮಿತಿಯನ್ನು ಮೀರಿ ಕಾರ್ಯ ನಿರ್ವಹಿಸುತ್ತಿದೆ. ಬಿಜೆಪಿಯ ಪ್ರಮುಖ ಸದಸ್ಯರು, ಗುಪ್ತಚರ ಮತ್ತು ಮಿಲಿಟರಿ ಅಧಿಕಾರಿಗಳು ಸೇರಿದಂತೆ ಬಲಪಂಥೀಯ ಭಾರತೀಯ, ಹಿಂದೂ ರಾಷ್ಟ್ರೀಯತಾವಾದಿ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ಇದು ಹೆಚ್ಚಿನ ಪ್ರಭಾವ ಬೀರುತ್ತಿದೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಾದ ಎಕ್ಸ್ (ಟ್ವಿಟರ್) ಮೇಲೆ ಇದರ ಪ್ರಭಾವವನ್ನು ವರದಿ ಒತ್ತಿ ಹೇಳಿದೆ.

ವರದಿಯ ಪ್ರಕಾರ, ವಿಶ್ಲೇಷಕರು ಭಾರತದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಮತ್ತು ರಾಜಕೀಯ ಉದ್ದೇಶಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಶೀತಲ ಸಮರದ ಕಾಲದ ಕೆಜಿಬಿ (ರಷ್ಯಾದ ಗುಪ್ತಚರ ಸಂಸ್ಥೆ) ತಂತ್ರಗಳಿಗೆ ಇದು ಸಮಾನಾಂತರವಾಗಿದೆ ಎಂದಿದ್ದಾರೆ.

ವರದಿಯಲ್ಲಿ, ಭಾರತೀಯ ಗುಪ್ತಚರರು ಅಮೆರಿಕದ ವಿಮರ್ಶಕರನ್ನು ಅಪಖ್ಯಾತಿಗೊಳಿಸುವಲ್ಲಿ ನಿಜವಾಗಿಯೂ ತೊಡಗಿಸಿಕೊಂಡಿದ್ದರೆ, ಅದು ಭಿನ್ನಾಭಿಪ್ರಾಯದ ಬಗ್ಗೆ ಮೋದಿ ಸರ್ಕಾರದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ತಜ್ಞರು ಹೇಳಿರುವುದಾಗಿ ತಿಳಿಸಲಾಗಿದೆ.

ತನ್ನ 28 ಪ್ರಕಟಿತ ವರದಿಗಳಲ್ಲಿ, ಪಾಕಿಸ್ತಾನಿ ಗುಪ್ತಚರ, ಮುಸ್ಲಿಂ ಬ್ರದರ್‌ಹುಡ್ ಮತ್ತು ಬಿಲಿಯನೇರ್ ಜಾರ್ಜ್ ಸೊರೊಸ್‌ನಂತಹ ಘಟಕಗಳಿಂದ ಧನಸಹಾಯ ಪಡೆದಿರುವ ಮಹಾ ಜಾಲದಿಂದ ಭಾರತವು ದಾಳಿಗೆ ಒಳಗಾಗುತ್ತಿದೆ ಎಂದು ಡಿಸಿನ್ಫೋ ಲ್ಯಾಬ್ ಆಗಾಗ್ಗೆ ಚಿತ್ರಿಸಿದೆ.

ಈ ನಿಧಿಗಳು ಮತ್ತು ಡೆಮಾಕ್ರಟಿಕ್ ಪಕ್ಷದ ಸದಸ್ಯೆ, ಯುಎಸ್ ಪ್ರತಿನಿಧಿ ಪ್ರಮೀಳಾ ಜಯಪಾಲ್, ಇಂಡಿಯನ್ ಅಮೆರಿಕನ್ ಕಾರ್ಯಕರ್ತರು ಸೇರಿದಂತೆ ಮೋದಿಯವರನ್ನು ಟೀಕಿಸುವ ಯುಎಸ್ ಮೂಲದ ವಿವಿಧ ವ್ಯಕ್ತಿಗಳ ನಡುವೆ ಸಂಪರ್ಕ ಕಲ್ಪಿಸಿವೆ ಎಂದು ವರದಿ ಆರೋಪಿಸಿವೆ.

ಡಿಸಿನ್ಫೋ ಲ್ಯಾಬ್‌ನ ಆಧಾರ ರಹಿತ ವರದಿಗಳು ಮೋದಿ ಪರ ಪ್ರಭಾವಿಗಳ ಮೂಲಕ ದೂರದರ್ಶನ, ಮತ್ತು ಭಾರತೀಯ ಅಧಿಕಾರಿಗಳಿಂದ ಜಾಗತಿಕ ಮಟ್ಟದಲ್ಲಿ ಹಬ್ಬುತ್ತವೆ. ಪ್ರಮುಖ ಬಿಜೆಪಿ ಪರ ವ್ಯಕ್ತಿಗಳಾದ ತಜೀಂದರ್ ಬಗ್ಗಾ, ಸಂಜು ವರ್ಮಾ ಮತ್ತು ಕಪಿಲ್ ಮಿಶ್ರಾ ಅವರು ಡಿಸಿನ್ಫೋ ಲ್ಯಾಬ್ ವಿಷಯವನ್ನು ಹರಡಲು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ವರದಿಯು ಆರೋಪಿಸಿದೆ.

ಡಿಸಿನ್ಫೋ ಲ್ಯಾಬ್‌ನ ವರದಿಗಳು ಯುಎಸ್ ಸಂಸದರ ಮೇಲೆ ಪ್ರಭಾವ ಬೀರಿದ ನಿದರ್ಶನಗಳನ್ನು ವಾಷಿಂಗ್ಟನ್ ಪೋಸ್ಟ್ ಬಹಿರಂಗಪಡಿಸಿದೆ. ಭಾರತದ ಕೋವಿಡ್ ಸಾಂಕ್ರಾಮಿಕದ ಕುರಿತ ಪ್ರತಿಕ್ರಿಯೆ ಮತ್ತು ಜಾತಿ ಆಧಾರಿತ ತಾರತಮ್ಯದ ಶಾಸನದಂತಹ ವಿಷಯಗಳ ಮೇಲಿನ ಚರ್ಚೆಗಳನ್ನು ಇದು ಹುಟ್ಟು ಹಾಕಿದೆ. ಡಿಸಿನ್ಫೋ ಲ್ಯಾಬ್‌ನ ಕೆಲಸವು ಅಮೆರಿಕನ್ ನಾಗರಿಕರ ಮೇಲೆ ವಿದೇಶಿ ಪ್ರಭಾವ ಮತ್ತು ತಪ್ಪು ಮಾಹಿತಿಯ ಬಗ್ಗೆ ಕಳವಳವನ್ನು ಉಂಟುಮಾಡಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಅಕ್ರಮ ವಲಸಿಗರ ನಿಖರ ಮಾಹಿತಿ ಸಂಗ್ರಹ ಅಸಾಧ್ಯ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಾಮಾಜಿಕ ಮಾಧ್ಯಮದಲ್ಲಿ 200-500 ರೂ.ಗೆ ಮಾರಾಟ: ಆರು ಶಿಕ್ಷಕರು, ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಜಾಹೀರಾತು ಮಾಡಿ ಖಾಸಗಿ ಸಂದೇಶಗಳ ಮೂಲಕ 200 ರಿಂದ...

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...