Homeಮುಖಪುಟಅಕ್ರಮ ವಲಸಿಗರ ನಿಖರ ಮಾಹಿತಿ ಸಂಗ್ರಹ ಅಸಾಧ್ಯ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿಕೆ

ಅಕ್ರಮ ವಲಸಿಗರ ನಿಖರ ಮಾಹಿತಿ ಸಂಗ್ರಹ ಅಸಾಧ್ಯ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿಕೆ

- Advertisement -
- Advertisement -

1955ರ ಪೌರತ್ವ ಕಾಯ್ದೆಯ ವಿಧಿ 6ಎ ಅಡಿಯಲ್ಲಿ ಪೌರತ್ವ ಪಡೆದ ಅಕ್ರಮ ವಲಸಿಗರ ವಿವರಗಳನ್ನು ಒದಗಿಸುವ ಕುರಿತು ಮಂಗಳವಾ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಮಾರ್ಚ್ 25, 1971 ರ ನಂತರ (ಬಾಂಗ್ಲಾದೇಶದ ಸ್ವಾತಂತ್ರ್ಯದ ಘೋಷಣೆಯ ನಂತರ) ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಬಂದ ಅಕ್ರಮ ವಲಸಿಗರ ಕುರಿತು ಮಾಹಿತಿ ಒದಗಿಸುವಂತೆ ಡಿಸೆಂಬರ್ 7 ರಂದು ಸುಪ್ರೀಂ ಕೋರ್ಟ್‌ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿತ್ತು.

1955ರ ಪೌರತ್ವ ಕಾಯ್ದೆಯ ವಿಧಿ 6ಎ ಅಡಿಯಲ್ಲಿ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವುದನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಈ ನಿರ್ದೇಶನ ನೀಡಿತ್ತು.

ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ, ಜನರು ಗುಪ್ತವಾಗಿ ದೇಶದೊಳಗೆ ಅಕ್ರಮ ಪ್ರವೇಶ ಮಾಡಿರುವ ಹಿನ್ನೆಲೆ, ಈ ಕುರಿತು ನಿಖರವಾದ ಮಾಹಿತಿ ಒದಗಿಸುವುದು ಅಸಾಧ್ಯ ಎಂದಿದೆ.

ಸರ್ಕಾರದ ಪರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ಒದಗಿಸಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಕುಮಾರ್ ಬಲ್ಲ, 1966-1971ರ ಅವಧಿಗೆ ಸಂಬಂಧಿಸಿ ವಿದೇಶಿ ನ್ಯಾಯಾಧಿಕರಣ ನೀಡಿದ ಆದೇಶದ ಅಡಿಯಲ್ಲಿ 32,381 ಜನರನ್ನು ವಿದೇಶಿಯರೆಂದು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

1971 ಮಾರ್ಚ್ 25ರ ನಂತರ ಭಾರತ ಪ್ರವೇಶಿಸಿದ ಅಕ್ರಮ ವಲಸಿಗರ ಸಂಖ್ಯೆ ಕುರಿತ ನ್ಯಾಯಾಲಯಕ್ಕೆ ಉತ್ತರಿಸಿದ ಅಜಯ್ ಕುಮಾರ್ ಬಲ್ಲ, ಅಕ್ರಮ ವಲಸಿಗರು ಯಾವುದೇ ದಾಖಲೆಗಳಿಲ್ಲದೆ ರಹಸ್ಯವಾಗಿ ದೇಶ ಪ್ರವೇಶಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

2017ರಿಂದ 2022ರ ವರೆಗೆ 14,346 ವಿದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ್ದಾರೆ.

ಅಸ್ಸಾಂನಲ್ಲಿ ಪ್ರಸ್ತುತ 100 ವಿದೇಶಿ ನ್ಯಾಯಾಧಿಕರಣಗಳು ಕಾರ್ಯ ನಿರ್ವಹಿಸುತ್ತಿವೆ. 2023 ಅಕ್ಟೋಬರ್ 31ರ ವರೆಗೆ 3.34 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅಕ್ಟೋಬರ್ 31ರ ವರೆಗೆ 7,714 ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಕೇಂದ್ರ ಸರ್ಕಾರದ ಪರವಾಗಿ ಅಜಯ್ ಕುಮಾರ್ ಬಲ್ಲ ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಹಾಂಗ್‌ಕಾಂಗ್: ‘ದೇಶ ಪ್ರೇಮಿಗಳಿಗೆ’ ಸೀಮಿತ ಚುನಾವಣೆಯಲ್ಲಿ ಕನಿಷ್ಠ ಮತದಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯಾರಿಗೂ ಹೆದರುವುದಿಲ್ಲ, 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಅಭ್ಯರ್ಥಿಗಳ ನಿರ್ಧಾರ: ಕಾಂಗ್ರೆಸ್

0
ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ಪ್ರತಿಷ್ಠಿತ ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳ ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಇದ್ದ ಕುತೂಹಲಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಸಜ್ಜಾಗಿದ್ದು, ಪಕ್ಷದ ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ)...