Homeಮುಖಪುಟಗುರ್ಜರ್ ಜಮೀನಿಗೆ ನುಗ್ಗಿದ ಮೇಕೆಗಳು: ದಲಿತ ಮಹಿಳೆಯರಿಗೆ ಅಮಾನವೀಯವಾಗಿ ಥಳಿಸಿದ ಭೂ ಮಾಲೀಕ!

ಗುರ್ಜರ್ ಜಮೀನಿಗೆ ನುಗ್ಗಿದ ಮೇಕೆಗಳು: ದಲಿತ ಮಹಿಳೆಯರಿಗೆ ಅಮಾನವೀಯವಾಗಿ ಥಳಿಸಿದ ಭೂ ಮಾಲೀಕ!

- Advertisement -
- Advertisement -

ಮೇಕೆಗಳು ತಮ್ಮ ಜಮೀನಿಗೆ ನುಗ್ಗಿದವು ಎಂಬ ಕಾರಣಕ್ಕೆ ಗುರ್ಜರ್ ಸಮುದಾಯಕ್ಕೆ ಸೇರಿದ ಕೆಲವು ಪುರುಷರು ಮೂವರು ದಲಿತ ಮಹಿಳೆಯರಿಗೆ ದೊಣ್ಣೆಯಿಂದ ಅಮಾನವೀಯವಾಗಿ ಥಳಿಸಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಳೆದ ವಾರ ನಡೆದಿರುವ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ಬಾಲಕಿಯನ್ನು ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯಿಂದ ಕೋಲಿನಿಂದ ಥಳಿಸುತ್ತಿರುವ ದೃಶ್ಯವಿದೆ.

ಮಧ್ಯಪ್ರದೇಶದ ಉಜ್ಜಯಿನಿ ಸಮೀಪ ಈ ಘಟನೆ ನಡೆದಿದ್ದು, ಮಹಿಳೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಗುರ್ಜರ್ ಸಮುದಾಯದ ಪುರುಷರು ಕುಡಿದು ಬಂದಿದ್ದರು ಎನ್ನಲಾಗಿದೆ. ದಲಿತ ಮಹಿಯರ ಮೇಕೆಗಳು ಜಮೀನಿಗೆ ನುಗ್ಗಿದ್ದಕ್ಕೆ ಕುಪಿತಗೊಂಡ ಅವರು, ಮಹಿಳೆಯರಿಗೆ ಅಮಾನವೀಯವಾಗಿ ಥಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೇಕೆಗಳು ಜಮೀನಿಗೆ ನುಗ್ಗಿದ ಕಾರಣಕ್ಕೆ ಮೂವರು ದಲಿತ ಮಹಿಳೆಯರನ್ನು ಗುರ್ಜರ್ ಸಮುದಾಯದವರು ಥಳಿಸಿದ್ದಾರೆ. ಗುರ್ಜರ್ ವ್ಯಕ್ತಿಯೊಬ್ಬರ ಹೊಲಕ್ಕೆ ಮೇಕೆ ನುಗ್ಗಿದ ಬಗ್ಗೆ ಮೊಂಗಿಯಾ ಮತ್ತು ಗುರ್ಜರ್ ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಕೆಗಳು ಹೊಲಕ್ಕೆ ನುಗ್ಗಿದ ಪ್ರಕರಣದಲ್ಲಿ ಜಗದೀಶ್ ಗುರ್ಜರ್, ಅಜಯ್ ಗುರ್ಜರ್, ಹುಕುಮ್ ಸಿಂಗ್ ಗುರ್ಜರ್ ಮತ್ತು ಬದ್ರಿಲಾಲ್ ಗುರ್ಜರ್ ಅವರು ಮೇಕೆ ಮೇಯಿಸುತ್ತಿದ್ದ ಮಹಿಳೆಯಾದ ಲಾಲ್ ಕುನ್ವರ್ ಮತ್ತು ಅವರ ಪುತ್ರಿಯರಾದ ವಿಷ್ಣು ಮತ್ತು ಅನಿತಾ ಅವರನ್ನು ದೊಣ್ಣೆಗಳಿಂದ ಥಳಿಸಿದ್ದಾರೆ.

ಗುರ್ಜರ್ ಸಮುದಾಯದ ಕುರಿತು:

ಗುರ್ಜರ್, ಗುಜ್ಜರ್ ಅಥವಾ ಗುಜರ್ ಎಂದು ಕರೆಸಿಕೊಳ್ಳುವ ಈ ಸಮುದಾಯ ಉತ್ತರ ಭಾರತದ ಗುಜರಾತ್, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ದೇಶದ ವಿವಿಧ ಪ್ರದೇಶಗಳಲ್ಲಿ ಈ ಜನರು ಗುಂಪುಗಳಾಗಿ ಹಂಚಿಹೋಗಿದೆ. ಕೃಷಿ ಹಾಗೂ ಪಶುಪಾಲನೆ ಈ ಜನಾಂಗದ ಮೂಲ ಕಸುಬಾಗಿದ್ದು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿಯೂ ಈ ಸಮುದಾಯ ವಾಸಿಸುತ್ತಿದ್ದಾರೆ.

ಕೃಷಿ, ಪಶುಪಾಲನೆ ಮತ್ತು ಅಲೆಮಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕೆಲವು ಪ್ರದೇಶಗಳಲ್ಲಿ ರಾಜ್ಯಗಳು ಮತ್ತು ರಾಜವಂಶಗಳ ಸ್ಥಾಪಕರಾಗಿದ್ದಾರೆ. ಮತ್ತೊಂದು ಕಡೆ ಕೆಲವರು ತಮ್ಮದೇ ಆದ ಖಾಯಂ ನೆಲೆ ಇಲ್ಲದ ಅಲೆಮಾರಿಗಳಾಗಿದ್ದಾರೆ. ಗುರ್ಜರ್‌ಗಳನ್ನು ಭಾರತದ ಕೆಲವು ರಾಜ್ಯಗಳಲ್ಲಿ ‘ಇತರೆ ಹಿಂದುಳಿದ ವರ್ಗ’ಗಳ (OBC) ಅಡಿಯಲ್ಲಿ ವರ್ಗೀಕರಿಸಲಾಗಿದೆ. ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಇವರನ್ನು ಪರಿಶಿಷ್ಟ ಪಂಗಡ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದಲ್ಲೂ ಇವರನ್ನು ‘ಇತರೆ ಹಿಂದುಳಿದ ವರ್ಗ’ ಎಂದು ವರ್ಗೀಕರಿಸಲಾಗಿದೆ.

ಇದನ್ನೂ ಓದಿ; ಅರ್ಹತೆ, ಸಾಮರ್ಥ್ಯಗಳಿಂದ ಬಿಜೆಪಿಯಲ್ಲಿ ಯಾರೂ ಹುದ್ದೆ ಪಡೆಯುವುದಿಲ್ಲ; ಪ್ರತಿಪಕ್ಷ ನಾಯಕರ ಕಾಲೆಳೆದ ಆಡಳಿತ ಪಕ್ಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...