Homeಕರ್ನಾಟಕಅರ್ಹತೆ, ಸಾಮರ್ಥ್ಯಗಳಿಂದ ಬಿಜೆಪಿಯಲ್ಲಿ ಯಾರೂ ಹುದ್ದೆ ಪಡೆಯುವುದಿಲ್ಲ; ಪ್ರತಿಪಕ್ಷ ನಾಯಕರ ಕಾಲೆಳೆದ ಆಡಳಿತ ಪಕ್ಷ

ಅರ್ಹತೆ, ಸಾಮರ್ಥ್ಯಗಳಿಂದ ಬಿಜೆಪಿಯಲ್ಲಿ ಯಾರೂ ಹುದ್ದೆ ಪಡೆಯುವುದಿಲ್ಲ; ಪ್ರತಿಪಕ್ಷ ನಾಯಕರ ಕಾಲೆಳೆದ ಆಡಳಿತ ಪಕ್ಷ

- Advertisement -
- Advertisement -

ಬಿಜೆಪಿಯಲ್ಲಿ ಅರ್ಹತೆ, ಸಾಮರ್ಥ್ಯಗಳಿಂದ ಯಾರೂ ಹುದ್ದೆ ಪಡೆಯುವುದಿಲ್ಲ. ಅಡ್ಡದಾರಿಯಲ್ಲಿ ಹೋಗುವವರಿಗೆ ಮಾತ್ರ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಈ ಮೂಲಕ ಸಾಬೀತಾಗಿದೆ ಎಂದು ವಿಪಕ್ಷ ನಾಯಕರನ್ನು ಆಡಳಿತ ಪಕ್ಷ ಕಾಂಗ್ರೆಸ್ ಲೇವಡಿ ಮಾಡಿದೆ.

ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ಯತ್ನಾಳ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಎಸ್. ಆರ್ ವಿಶ್ವನಾಥ್ ಕಿಡಿಕಾರುತ್ತಿದ್ದಾರೆ. ಬಿಜೆಪಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ಕಾಲೆಳೆಯುತ್ತಿದೆ.

ಬಿಜೆಪಿ ಅಂತರ್ಯುದ್ಧದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ಆರ್. ಅಶೋಕ್ ಅವರು ಬಕೆಟ್ ಹಿಡಿದು ವಿರೋಧ ಪಕ್ಷದ ನಾಯಕರಾಗಿದ್ದಾರೆ-ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್. ಬಿ.ವೈ. ವಿಜಯೇಂದ್ರ ಅವರು ಬ್ಲಾಕ್ಮೇಲ್ ಮಾಡಿ ಅಧ್ಯಕ್ಷರಾಗಿದ್ದಾರೆ-ಬಿಜೆಪಿ ಶಾಸಕ ಯತ್ನಾಳ್. ಕರ್ನಾಟಕ ಬಿಜೆಪಿಯಲ್ಲಿ ಅರ್ಹತೆ, ಸಾಮರ್ಥ್ಯಗಳಿಂದ ಯಾರೂ ಹುದ್ದೆ ಪಡೆಯುವುದಿಲ್ಲ. ಅಡ್ಡದಾರಿಯಲ್ಲಿ ಹೋಗುವವರಿಗೆ ಮಾತ್ರ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಈ ಮೂಲಕ ಸಾಬೀತಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ.

‘ಬೊಮ್ಮಾಯಿಯವರನ್ನು ಸೋಲಿಸಲು ವಿಜಯೇಂದ್ರ ಹಣ ಚೆಲ್ಲಿದ್ದಾರೆ. ವಿ. ಸೊಮ್ಮಣ್ಣನವರ ರಾಜಕೀಯ ಜೀವನ ಅಂತ್ಯಗೊಳಿಸಲು ಷಡ್ಯಂತ್ರ ರೂಪಿಸಿದ್ದು ವಿಜಯೇಂದ್ರ. ಪಂಚಮಸಾಲಿ ಹೋರಾಟ ಹತ್ತಿಕ್ಕಲು ವಿಜಯೇಂದ್ರ ಹಲವು ಷಡ್ಯಂತ್ರ ರೂಪಿಸಿದ್ದರು. ಹೈಕಮಾಂಡ್ ನಾಯಕರಿಗೆ ಬ್ಲಾಕ್ಮೇಲ್ ಮಾಡಿ ರಾಜ್ಯಾಧ್ಯಕ್ಷ ಹುದ್ದೆ ಪಡೆದಿದ್ದಾರೆ. ಇದಿಷ್ಟೂ ಬಿಜೆಪಿ ಶಾಸಕ ಯತ್ನಾಳ್ ಬಹಿರಂಗಪಡಿಸಿದ ಸಂಗತಿಗಳು. ಬಿಜೆಪಿ ರಾಜ್ಯಾಧ್ಯಕ್ಷ ನಿಮ್ಮ ಪಕ್ಷಕ್ಕೆ ಹಾಗೂ ಲಿಂಗಾಯತ ಸಮುದಾಯಕ್ಕೆ ಮುಳುವಾಗಿರುವ ಮುಳ್ಳು!. ಹೀಗಿರುವಾಗ ಬಿಜೆಪಿಯನ್ನು ಉಳಿಸುವುದಕ್ಕೆ ಯಾವ ದೇವರಿಂದಲೂ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ವ್ಯಂಗ್ಯವಾಡಿದೆ.

‘ಒಂದೆಡೆ ಆರ್. ಅಶೋಕ್ ಅವರನ್ನು ಬಿಟ್ಟು ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಪ್ರತ್ಯೇಕ ಸಭೆ. ಇನ್ನೊಂದೆಡೆ ವಿಜಯೇಂದ್ರರನ್ನು ಬಿಟ್ಟು ಆರ್ ಅಶೋಕ್ ಪ್ರತ್ಯೇಕ ಸಭೆ. ಮತ್ತೊಂದೆಡೆ ಇವರೆಲ್ಲರನ್ನೂ ಬಿಟ್ಟು ವಿಜಯೇಂದ್ರರ ಕಸರತ್ತು. ಇನ್ನೊಂದೆಡೆ ಹಿರಿಯ ಶಾಸಕರ ಸಲಹಾ ಸಮಿತಿ ಮಾಡಿ ಆರ್ ಅಶೋಕ್ ಅವರು ಅಪಕ್ವ, ಅನನುಭವಿ ಎಂದು ಬಿಂಬಿಸುವ ಪ್ರಯತ್ನ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಏನಾಗುತ್ತಿದೆ ಎಂದು ಬಿಜೆಪಿ ನಾಯಕರಿಗೇ ತಿಳಿಯುತ್ತಿಲ್ಲ’ ಎಂದು ಹೇಳಿದೆ.

ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿ:

‘ಆ’ಶೋಕ’ ಗೀತೆ!, ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕ ಅಭಿನಂದಿಸಲು ಒಪ್ಪಲಿಲ್ಲ. ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ. ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್. ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ. ಸಭಾತ್ಯಾಗ ಮಾಡಿರುವುದಕ್ಕೆ ಸ್ವಪಕ್ಷದ ಶಾಸಕರಿಂದಲೇ ತರಾಟೆ. ಬಕೆಟ್ ರಾಜಕಾರಿಣಿ ಎಂದು ಬಿಜೆಪಿಗರಿಂದಲೇ ಬಿರುದು. ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಸ್ವಪಕ್ಷದ ನಾಯಕರಿಂದಲೇ ಸದನದಲ್ಲಿ ಮಾತನಾಡಲು ಅಡ್ಡಿ. ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿರುವಾಗ ಅಶೋಕರ ಶೋಕ ರಾಗವನ್ನು ಕೇಳುವವರು ಯಾರು’ ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಪ್ರಶ್ನಿಸಿದೆ.

ಇದನ್ನೂ ಓದಿ; ‘ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದರು; ಬಿಎಸ್‌ವೈಗೆ ಹೈಕಮಾಂಡ್ ಹೆದರಿದೆ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...