Homeಮುಖಪುಟತನಗಾಗಿ ಏನನ್ನಾದರು ಕೇಳುವುದಕ್ಕಿಂತ ಸಾಯುವುದೇ ಮೇಲು: ಶಿವರಾಜ್ ಸಿಂಗ್ ಚೌಹಾಣ್

ತನಗಾಗಿ ಏನನ್ನಾದರು ಕೇಳುವುದಕ್ಕಿಂತ ಸಾಯುವುದೇ ಮೇಲು: ಶಿವರಾಜ್ ಸಿಂಗ್ ಚೌಹಾಣ್

- Advertisement -
- Advertisement -

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಅವರನ್ನು ಸೋಮವಾರ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಈ ಬೆನ್ನಲ್ಲೇ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರಿಗೆ ಸಲ್ಲಿಸಿದ್ದಾರೆ.

ಸೋಮವಾರ ಭೋಪಾಲ್‌ನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೋಹನ್‌ ಯಾದವ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಶಿವರಾಜ್‌ ಸಿಂಗ್ ಚೌಹಾಣ್ ಅವರು ನೂತನ ಸಿಎಂಗೆ ಹೂಗುಚ್ಚ ನೀಡಿ ಅಭಿನಂದಿಸಿದ್ದರು.

ಶಿವರಾಜ್ ಸಿಂಗ್ ಸಿಎಂ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಚುನಾವಣಾ ಪೂರ್ವ ಮತ್ತು ನಂತರ ಚೌಹಾಣ್ ಅವರೇ ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗ್ತಿತ್ತು. ಆದರೆ, ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್‌ ಅಚ್ಚರಿಯ ಹೆಸರನ್ನು ಸಿಎಂ ಸ್ಥಾನಕ್ಕೆ ಘೋಷಣೆ ಮಾಡಿ ಶಿವರಾಜ್ ಸಿಂಗ್ ಸೇರಿದಂತೆ ಬಿಜೆಪಿ ರಾಜ್ಯ ನಾಯಕರಿಗೆ ಶಾಕ್ ನೀಡಿದೆ.

ಕಣ್ಣೀರಿಟ್ಟ ಮಹಿಳೆಯರು :

ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಸ್ಥಾನದಿಂದ ಕೆಳಗಿಳಿದಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಂದು(ಡಿ.12) ಚೌಹಾಣ್ ಅವರನ್ನು ಭೇಟಿಯಾದ ಮಹಿಳಾ ಅಭಿಮಾನಿಗಳು ಚೌಹಾಣ್ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಶಿವಾರಾಜ್ ಸಿಂಗ್ ಅವರನ್ನು ಸಮಾಧಾನಪಡಿಸಿದ್ದಾರೆ. “ನನ್ನ ರಾಜೀನಾಮೆ ನಿರ್ಧಾರ ನನಗೆ ತೃಪ್ತಿ ತಂದಿದೆ” ಎಂದಿದ್ದಾರೆ.

ಸಾಯುವುದೇ ಮೇಲೂ..

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಸಿಂಗ್, “ನನ್ನ ರಾಜೀನಾಮೆ ನಿರ್ಧಾರದಿಂದ ನಾನು ಸಂಪೂರ್ಣ ತೃಪ್ತನಾಗಿದ್ದೇನೆ. 2005ರಲ್ಲಿ ನಾನು ಮುಖ್ಯಮಂತ್ರಿಯಾದಾಗ ಉಮಾ ಭಾರತಿಯವರ ಕಠಿಣ ಪರಿಶ್ರಮದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ನಾನು ಈಗ ಏನನ್ನಾದರು ಕೇಳುವುದಕ್ಕಿಂತ ಸಾಯುವುದೇ ಮೇಲೂ” ಎಂದಿದ್ದಾರೆ. ಈ ಮಾತನ್ನು ಸಿಎಂ ಸ್ಥಾನ ಕೈ ತಪ್ಪಿದ್ದಕ್ಕೆ ಹೈಕಮಾಂಡ್ ನಾಯಕರ ಮೇಲೆ ಮುನಿಸಿಕೊಂಡು ಹೇಳಿದ್ದಾರಾ? ಇಲ್ಲ, ನನಗೆ ಪಕ್ಷದಿಂದ ಏನೂ ಬೇಡ, ಪಕ್ಷ ಎಲ್ಲವೂ ಕೊಟ್ಟಿದೆ ಎಂಬ ದಾಟಿಯಲ್ಲಿ ಹೇಳಿದ್ದಾರಾ? ಗೊತ್ತಿಲ್ಲ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ರಾಜೀನಾಮೆಯನ್ನು ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸಲಾಗ್ತಿದೆ. ಹರ್ಷವರ್ಧನ್ ತಿವಾರಿ ಎಂಬ ಎಕ್ಸ್ ಬಳಕೆದಾರರೊಬ್ಬರು ಶಿವರಾಜ್ ಸಿಂಗ್ ಮಹಿಳಾ ಅಭಿಮಾನಿಗಳನ್ನು ಸಮಾಧಾನಪಡಿಸಿದ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಜೊತೆಗೆ, “ಇದು ದೆಹಲಿಗೆ ಸವಾಲೆಸೆಯುತ್ತಿರುವ ಶಿವರಾಜ್ ಸಿಂಗ್ ಚೌಹಾಣ್ ಅವರ ಸ್ಟಂಟ್. ಅವರು ದೆಹಲಿಗೆ ಹೋಗುತ್ತಿಲ್ಲ ಎಂದಿದ್ದಾರೆ. ಯಾರೋ ಒಬ್ಬರು ಸಿಎಂ ಆಗಿರುವಾವ ಅವರು ಮಧ್ಯಪ್ರದೇಶದಲ್ಲಿ ನಿಂತು ಏನು ಮಾಡುತ್ತಾರೆ?. ಎಲ್ಲಾ ಉತ್ತರಗಳು ಈ ಪ್ರಶ್ನೆಯಲ್ಲಿವೆ. ಶಿವರಾಜ್ ಸಿಂಗ್ ಮಧ್ಯಪ್ರದೇಶದಲ್ಲಿ ಏನೋ ದೊಡ್ಡ ಪ್ಲಾನ್ ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜಸ್ಥಾನದಲ್ಲಿ ವಸುಂಧರ ರಾಜೇ ಸಿಎಂ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಎರಡೂ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಇವರ ಪಾತ್ರ ಬಹಳಷ್ಟಿದೆ. ಆದರೆ, ಇಬ್ಬರಿಗೂ ಸಿಎಂ ಸ್ಥಾನ ಕೈ ತಪ್ಪಿದೆ. ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪ ಅವಧಿಗೂ ಮುನ್ನ ಸಿಎಂ ಸ್ಥಾನದಿಂದ ಕೆಳಗಿಳಿದ ರೀತಿಯ ಪರಿಸ್ಥಿತಿ ಈ ಇಬ್ಬರು ಕೇಸರಿ ನಾಯಕರಿಗೂ ಆಗಿದೆ. ಹೀಗಿರುವಾಗ ಇಬ್ಬರ ಮುಂದಿನ ನಡೆ ಏನು? ಎಂಬುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ರಾಜಸ್ಥಾನದ ಮುಖ್ಯಮಂತ್ರಿಯಾಗಿ ಭಜನ್‌ ಲಾಲ್ ಶರ್ಮಾ ಆಯ್ಕೆ: ಮೊದಲ ಬಾರಿಯ ಶಾಸಕನಿಗೆ ಸಿಎಂ ಪಟ್ಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...