Homeಮುಖಪುಟರಾಮಮಂದಿರ ಉದ್ಘಾಟನೆ: ದೆಹಲಿ ಏಮ್ಸ್‌ಗೆ ಅರ್ಧದಿನ ರಜೆ, ಒಪಿಡಿ ಸೇವೆ ಬಂದ್?

ರಾಮಮಂದಿರ ಉದ್ಘಾಟನೆ: ದೆಹಲಿ ಏಮ್ಸ್‌ಗೆ ಅರ್ಧದಿನ ರಜೆ, ಒಪಿಡಿ ಸೇವೆ ಬಂದ್?

- Advertisement -
- Advertisement -

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಗೆ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿದ ನಂತರ, ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಕೂಡ ಸೋಮವಾರ ಮಧ್ಯಾಹ್ನ 2.30 ರವರೆಗೆ ಮುಚ್ಚಲಾಗುವುದು ಎಂದು ಆದೇಶ ಹೊರಡಿಸಿದೆ.

‘22.01.2024 ರಂದು ಮಧ್ಯಾಹ್ನ 02.30 ಗಂಟೆಗಳವರೆಗೆ ಸಂಸ್ಥೆಯು ಅರ್ಧ ದಿನ ಮುಚ್ಚಿರುತ್ತದೆ ಎಂದು ಎಲ್ಲಾ ಉದ್ಯೋಗಿಗಳ ಮಾಹಿತಿಗಾಗಿ ಸೂಚಿಸಲಾಗಿದೆ. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಘಟಕಗಳು ಮತ್ತು ಶಾಖಾ ಅಧಿಕಾರಿಗಳು, ತಮ್ಮ ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಗಮನಕ್ಕೆ ತರಬೇಕು’ ಎಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಆದರೆ, ಹೊರರೋಗಿ ವಿಭಾಗ (OPD) ಸೇವೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತ್ರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿಲ್ಲ.

ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ:

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನವರಿ 22 ರಂದು ದೇಶದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಿಸಿರುವ ಕೇಂದ್ರ ಸಿಬ್ಬಂದಿ ಸಚಿವಾಲಯ, ಈ ಬಗ್ಗೆ ಕಳೆದ ಗುರುವಾರವೆ ಆದೇಶ ಹೊರಡಿಸಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಂದು ದೇಶದಾದ್ಯಂತ ಸಂಭ್ರಮಿಸುವಂತೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಈಗಾಗಲೇ ಕ್ಯಾಂಪೇನ್ ನಡೆಸುತ್ತಿದೆ. ಕೇಂದ್ರ ಸರ್ಕಾರಿ ನೌಕರರು ಸಹ ಈ ಸಂಭ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ದೇಶಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳ ನೌಕರರಿಗೆ ಅರ್ಧ ದಿನ ರಜೆ ನೀಡಲು ನಿರ್ಧರಿಸಲಾಗಿದೆ.’ 2024 ರ ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ರಜೆ ನೀಡಲಾಗಿದೆ” ಎಂದು ಕೇಂದ್ರ ಸರ್ಕಾರವು ತನ್ನ ಸಚಿವಾಲಯ -ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ; ರಾಮಮಂದಿರ ಉದ್ಘಾಟನೆಗೆ ದಲಿತರು ಕೊಟ್ಟ ದೇಣಿಗೆ ‘ಅಶುದ್ಧ’ವೆಂದು ವಾಪಸ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!

0
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು...