ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ (ಎಎಂಯು) ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಇಂದು ತನ್ನ ತೀರ್ಪು ಕಾಯ್ದಿರಿಸಿದೆ ಎಂದು live law ವರದಿ ಮಾಡಿದೆ. ಪೀಠವು 8 ದಿನಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದೆ.
The #SupremeCourt Constitution Bench of 7 Judges led by Chief Justice DY Chandrachud today reserved its decision on the issue of granting minority status to Aligarh Muslim University (#AMU). The bench heard the arguments from both sides for 8 days.
Read more:… pic.twitter.com/jFXbCoCmt7— Live Law (@LiveLawIndia) February 1, 2024
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸೂರ್ಯ ಕಾಂತ್, ಜೆಬಿ ಪರ್ದಿವಾಲಾ, ದೀಪಂಕರ್ ದತ್ತಾ, ಮನೋಜ್ ಮಿಶ್ರಾ ಮತ್ತು ಎಸ್‌ಸಿ ಶರ್ಮಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಎಎಂಯು ಅಲ್ಪಸಂಖ್ಯಾತ ಸಂಸ್ಥೆ ಅಲ್ಲ ಎಂಬ ಅಲಹಾಬಾದ್ ಹೈಕೋರ್ಟ್‌ನ 2006ರ ತೀರ್ಪಿನ ವಿರುದ್ದದ ಮೇಲ್ಮನವಿಯನ್ನು ಆಲಿಸುತ್ತಿದೆ.
2019ರಲ್ಲಿ, ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು, ಪ್ರಕರಣವನ್ನು 7 ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತ್ತು. ಈ ಪ್ರಕರಣದಲ್ಲಿ ಉದ್ಭವಿಸುವ ಸಮಸ್ಯೆಗಳೆಂದರೆ, ಒಂದು ಶಾಸನದಿಂದ (ಎಎಂಯು ಕಾಯಿದೆ-1920) ಸ್ಥಾಪಿಸಲ್ಪಟ್ಟ ಮತ್ತು ಆಡಳಿತ ನಡೆಸುವ ವಿಶ್ವವಿದ್ಯಾಲಯವು ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆದುಕೊಳ್ಳಬಹುದೇ ಎಂಬುವುದಾಗಿದೆ.
ಎಎಂಯು ಮತ್ತು ಎಎಂಯು ಓಲ್ಡ್ ಬಾಯ್ಸ್ ಅಸೋಸಿಯೇಷನ್ ಪರ ಹಿರಿಯ ವಕೀಲರಾದ ಡಾ ರಾಜೀವ್ ಧವನ್ ಮತ್ತು ಕಪಿಲ್ ಸಿಬಲ್ ವಾದಿಸುತ್ತಿದ್ದಾರೆ. ಸಲ್ಮಾನ್ ಖುರ್ಷಿದ್, ಶಾದನ್ ಫರಾಸತ್ ಮಧ್ಯಸ್ಥಗಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ನೀರಜ್ ಕಿಶನ್ ಕೌಲ್, ಗುರು ಕೃಷ್ಣ ಕುಮಾರ್, ವಿನಯ್ ನವರೆ, ಯತೀಂದರ್ ಸಿಂಗ್, ವಿಕ್ರಮಜಿತ್ ಬ್ಯಾನರ್ಜಿ (ಎಎಸ್‌ಜಿ) ಮತ್ತು ಕೆ ಎಂ ನಟರಾಜ್ (ಎಎಸ್‌ಜಿ) ಸೇರಿದಂತೆ ಹಲವಾರು ಇತರ ಹಿರಿಯ ವಕೀಲರು ಸಹ ಪ್ರತಿವಾದಿಗಳು ಮತ್ತು ಮಧ್ಯಸ್ಥಗಾರರ ಪರವಾಗಿ ವಾದ ಮಂಡಿಸಿದ್ದಾರೆ.
8 ದಿನಗಳ ಸುದೀರ್ಘ ವಿಚಾರಣೆಯಯಲ್ಲಿ ನ್ಯಾಯಪೀಠದ ಮುಂದೆ ಹಲವಾರು ಪ್ರಮುಖ ಅಂಶಗಳು ಚರ್ಚೆಯಾಗಿವೆ. ಭಾರತೀಯ ಸಂವಿಧಾನದ 30ನೇ ವಿಧಿಯ ವ್ಯಾಖ್ಯಾನದಿಂದ ಹಿಡಿದು, ಲಿಸ್ಟ್ 1 ರ ಎಂಟ್ರಿ 63 ಎಎಂಯುನ ಕಾರ್ಯ ನಿರ್ವಹಣೆ, ಇತಿಹಾಸ ಮತ್ತು 1951 ರಿಂದ 1981 ರವರೆಗೆ ಮೂಲ 1920 ಎಎಂಯು ಕಾಯಿದೆಗೆ ತಂದ ವಿವಿಧ ತಿದ್ದುಪಡಿಗಳ ವಿಶ್ಲೇಷಣೆಯೂ ನ್ಯಾಯಾಲಯದಲ್ಲಿ ನಡೆದಿದೆ.
ಇದನ್ನೂ ಓದಿ: ಪೂಜೆಗೆ ಅವಕಾಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ ಜ್ಞಾನವಾಪಿ ಮಸೀದಿ ಸಮಿತಿ


