HomeದಿಟನಾಗರFact Check: ರಾಹುಲ್ ಗಾಂಧಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದು ಸುಳ್ಳು

Fact Check: ರಾಹುಲ್ ಗಾಂಧಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದು ಸುಳ್ಳು

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಲ್ವರು ಮಕ್ಕಳೊಂದಿಗೆ ನಿಂತಿರುವ ಫೋಟೋವೊಂದು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದು, “ರಾಹುಲ್ ಗಾಂಧಿ ರಹಸ್ಯವಾಗಿ ಮದುವೆಯಾಗಿದ್ದಾರೆ. ಫೋಟೊದಲ್ಲಿರುವ ಮಕ್ಕಳು ಅವರದ್ದೇ” ಎಂದು ಸುದ್ದಿ ಹರಿದಾಡಿದೆ.

ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಫೋಟೋ ಪೋಸ್ಟ್‌ ಮಾಡಿದ್ದು, “ರಾಹುಲ್ ಗಾಂಧಿಗೆ ಮದುವೆಯಾಗಿದೆ ಮಕ್ಕಳಿದೆ” ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಮೇಲಿನ ಫೋಟೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ‘ರಾಹುಲ್ ಗಾಂಧಿ ಜೊತೆಯಲ್ಲಿರುವ ನಾಲ್ವರು ಮಕ್ಕಳು ರಾಜಸ್ಥಾನದ ಬರಾನ್ ಜಿಲ್ಲೆಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಿಯಾಂಕಾ ನಂದ್ವಾನಾ ಅವರ ಮಕ್ಕಳಾಗಿದ್ದಾರೆ. ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕೆಂಬ ಪ್ರಿಯಾಂಕಾ ಅವರ ಬಯಕೆಯ ಬಗ್ಗೆ ತಿಳಿದುಕೊಂಡ ನಂತರ ರಾಹುಲ್, 2022ರಲ್ಲಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವರ ಮಕ್ಕಳನ್ನು ಹೆಲಿಕಾಪ್ಟರ್ ರೈಡ್‌ಗೆ ಕರೆದೊಯ್ದಿದ್ದರು’ ಎಂದು ತಿಳಿದು ಬಂದಿದೆ.

ಈ ಕುರಿತು ಒಂದು ವರ್ಷದ ಹಿಂದೆ ‘FirstKhaber’ಎಂಬ ಹಿಂದಿ ಯೂಟ್ಯೂಬ್ ಚಾನೆಲ್ ಸ್ಪಷ್ಟವಾದ ಸುದ್ದಿ ಪ್ರಕಟಿಸಿದೆ. ವರದಿಯ ಪ್ರಕಾರ, ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಗಾಂಧಿಯವರ ಜನ್ಮದಿನ ಆಚರಿಸಲು ರಾಜಸ್ತಾನದ ಬುಂದಿಯಲ್ಲಿರುವ ನೈನಾನಿ ಫಾರ್ಮ್‌ನಿಂದ ಸವಾಯಿ ಮಾಧೋಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಿಯಾಂಕಾ ನಂದ್ವಾನಾ ಭೇಟಿಗೆ ಕಾಯುತ್ತಿದ್ದ ವಿಷಯ ಅವರಿಗೆ ಗೊತ್ತಾಗಿದೆ. ಹಾಗಾಗಿ, ರಾಹುಲ್ ಪ್ರಿಯಾಂಕಾ ನಂದ್ವಾನಾ ಅವರನ್ನು ಭೇಟಿಯಾಗಿ, ಅವರ ನಾಲ್ವರು ಮಕ್ಕಳನ್ನು ಹೆಲಿಕಾಫ್ಟರ್ ರೈಡ್ ಕರೆದುಕೊಂಡು ಹೋಗಿದ್ದಾರೆ. ರಾಹುಲ್ ಜೊತೆ ಹೆಲಿಕಾಫ್ಟರ್ ಪ್ರಯಾಣ ಮಾಡಿದ ದಿನ ಪ್ರಿಯಾಂಕಾ ಅವರ ಮಗಳು ಕಾಮಾಕ್ಷಿ ನಂದ್ವಾನಾ ಅವರ 14 ನೇ ಹುಟ್ಟು ಹಬ್ಬವಾಗಿತ್ತು.

ಯೂಟ್ಯೂಬ್ ಲಿಂಕ್ ಇಲ್ಲಿದೆ

ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದ ವಿಚಾರವೇನೆಂದರೆ, ರಾಹುಲ್ ಗಾಂಧಿ ಜೊತೆ ನಿಂತಿರುವುದು ಅವರ ಪತ್ನಿ ಮತ್ತು ಮೂವರು ಮಕ್ಕಳು ಅಲ್ಲ. ಅದು ರಾಜಸ್ಥಾನದ ಬರಾನ್ ಜಿಲ್ಲೆಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಿಯಾಂಕಾ ನಂದ್ವಾನಾ ಅವರ ನಾಲ್ವರು ಮಕ್ಕಳು. ಫೋಟೋದಲ್ಲಿ ರಾಹುಲ್ ಜೊತೆ ನಿಂತಿರವ ಹುಡುಗಿ ಪ್ರಿಯಾಂಕಾ ನಂದ್ವಾನಾ ಅವರ 14 ವರ್ಷದ ಮಗಳು ಕಾಮಾಕ್ಷಿ ನಂದ್ವಾನಾ ಆಗಿದ್ದಾರೆ. ಹಾಗಾಗಿ ರಾಹುಲ್ ಗಾಂಧಿಗೆ ರಸಹ್ಯವಾಗಿ ಮದುವೆಯಾಗಿದೆ. ಮಕ್ಕಳಿದೆ ಎಂಬುವುದು ಎಲ್ಲವೂ ಸುಳ್ಳು ಸುದ್ದಿ.

ಇದನ್ನೂ ಓದಿ: Fact Check: ಅಧಿಕಾರಕ್ಕೆ ಬಂದರೆ 50% ಮೀಸಲಾತಿಯನ್ನು ರದ್ದುಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...