HomeದಿಟನಾಗರFact Check: ಅಧಿಕಾರಕ್ಕೆ ಬಂದರೆ 50% ಮೀಸಲಾತಿಯನ್ನು ರದ್ದುಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ರಾ?

Fact Check: ಅಧಿಕಾರಕ್ಕೆ ಬಂದರೆ 50% ಮೀಸಲಾತಿಯನ್ನು ರದ್ದುಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ರಾ?

- Advertisement -
- Advertisement -

ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ’50 ಶೇ.ಮೀಸಲಾತಿಯನ್ನು ತೆಗೆದು ಹಾಕಲಾಗುವುದು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವುದಾಗಿ ಸುದ್ದಿಯೊಂದು ಹಬ್ಬಿದೆ.

‘Students Facts’ಎಂಬ ಹೆಸರಿನಲ್ಲಿ ಹರಿದಾಡುತ್ತಿರುವ ಪೋಸ್ಟರ್‌ನಲ್ಲಿ ಮೇಲಿನಂತೆ ಹೇಳಲಾಗಿದೆ.

ಫ್ಯಾಕ್ಟ್‌ಚೆಕ್‌ : ಮೀಸಲಾತಿ ಹೆಚ್ಚಳದ ಬಗ್ಗೆ ಸದಾ ಮಾತನಾಡುವ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಮೀಸಲಾತಿಯನ್ನು ತೆಗೆದು ಹಾಕುವ ಬಗ್ಗೆ ಮಾತನಾಡಿದ್ದಾರೆಯೇ? ಎಂಬ ಬಗ್ಗೆ ನಾನುಗೌರಿ.ಕಾಂ ಫ್ಯಾಕ್ಟ್ ಚೆಕ್ ಮಾಡಿದೆ.

ರಾಹುಲ್ ಗಾಂಧಿಯವರ ಹೇಳಿಕೆಯ ಕುರಿತು ಫೆಬ್ರವರಿ 6,2024ರಂದು ನಾವು (ನಾನುಗೌರಿ) ‘ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 50% ಮೀಸಲಾತಿ ಮಿತಿ ಕಿತ್ತೆಸೆಯುತ್ತೇವೆ: ರಾಹುಲ್ ಗಾಂಧಿ‘ ಸುದ್ದಿಯನ್ನು ಪ್ರಕಟಿಸಿದ್ದೇವೆ. ಆ ಸುದ್ದಿಯ ಪ್ರಕಾರ, ‘50% ಮೀಸಲಾತಿ ಮಿತಿಯನ್ನು ತೆಗೆದು ಹಾಕುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ ಹೊರತು 50% ಮೀಸಲಾತಿಯನ್ನೇ ರದ್ದುಪಡಿಸುತ್ತೇವೆ ಎಂದಿಲ್ಲ.

ಮಣಿಪುರದಿಂದ-ಮುಂಬೈಗೆ ರಾಹುಲ್ ಗಾಂಧಿ ಕೈಗೊಂಡಿರುವ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಫೆ.5ರಂದು ಜಾರ್ಖಂಡ್‌ನ ರಾಂಚಿಗೆ ತಲುಪಿತ್ತು. ಅಲ್ಲಿ ಬುಡಕ್ಕಟ್ಟು ಮತ್ತು ಹಿಂದುಳಿದ ಸಮುದಾಯಗಳ ಜನರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, 50% ಮೀಸಲಾತಿ ಮಿತಿಯನ್ನು ತೆಗೆದುಹಾಕಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಮೀಸಲಾತಿಯನ್ನು ರದ್ದುಪಡಿಸುವ ಬಗ್ಗೆ ಹೇಳಿಕೆ ಕೊಟ್ಟಿಲ್ಲ.

ರಾಹುಲ್ ಗಾಂಧಿಯವರ ಹೇಳಿಕೆಯ ವಿಡಿಯೋವನ್ನು ಫೆ.6,2024ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಹಿಂದಿ ಭಾಷಣದ ಕನ್ನಡ ಭಾಷಾಂತರವೂ ಅಕ್ಷರ ರೂಪದಲ್ಲಿದೆ. ಯಾರೂ ಬೇಕಾದರು ನೋಡಿ ಅರ್ಥೈಸಿಕೊಳ್ಳಬಹುದು.

ವಿಡಿಯೋದ ಜೊತೆಗೆ “ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡುವ ಮೊದಲ ಕೆಲಸವೇ ‘ಮೀಸಲಾತಿಗೆ ಇರುವ ಮಿತಿ’ಯನ್ನು ಕಿತ್ತೆಸೆಯುವುದು ಎಂದು ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದರು.

ಹಾಗಾಗಿ, ರಾಹುಲ್ ಗಾಂಧಿ ಮೀಸಲಾತಿ ‘ಮಿತಿ’ಯನ್ನು ಕಿತ್ತೆಸೆಯುತ್ತೇವೆ ಎಂದಿದ್ದಾರೆಯೇ ಹೊರತು ಮೀಸಲಾತಿಯನ್ನೇ ತೆಗೆದು ಹಾಕುತ್ತೇವೆ ಎಂದಿಲ್ಲ. ವೈರಲ್ ಪೋಸ್ಟರ್‌ನಲ್ಲಿ ತಪ್ಪು ಮಾಹಿತಿಯನ್ನು ಹರಡಲಾಗಿದೆ.

ಇದನ್ನೂ ಓದಿ: Fact Check: ಮುಸ್ಲಿಮರು ನಮಾಝ್ ಮುಗಿಸಿ ಬರುವ ಹಳೆಯ ವಿಡಿಯೋ ತಪ್ಪಾಗಿ ಹಂಚಿಕೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...