HomeದಿಟನಾಗರFact Check: ಭಾರತವನ್ನು ವಿರೋಧಿಸಿದ್ದಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಸಂಸದರು ಥಳಿಸಿದ್ರಾ?

Fact Check: ಭಾರತವನ್ನು ವಿರೋಧಿಸಿದ್ದಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಸಂಸದರು ಥಳಿಸಿದ್ರಾ?

- Advertisement -
- Advertisement -

ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೆ ಸಂಸದರು ಸಂಸತ್ ಭವನದಲ್ಲೇ ಥಳಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.

ಮುಯಿಝು ಅವರ ಭಾರತ ವಿರೋಧಿ ನಿಲುವಿನಿಂದ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮಾಲ್ಡೀವ್ಸ್‌ನ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಕಾರಣಕ್ಕೆ ಕೋಪಗೊಂಡ ಸಂಸದರು ಮುಯಿಝು ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಸುದ್ದಿ ಹಬ್ಬಿದೆ.

 

ಫ್ಯಾಕ್ಟ್‌ಚೆಕ್ : ನಾನುಗೌರಿ.ಕಾಂ ಮೇಲೆ ತಿಳಿಸಿದ ವೈರಲ್‌ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಿದೆ. ಇದಕ್ಕಾಗಿ ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ವಿಡಿಯೋ ಹುಡುಕಿದ್ದೇವೆ. ಈ ವೇಳೆ, ಜನವರಿ 28,2024ರಂದು ಇಂಡಿಯನ್ ಎಕ್ಸ್‌ಪ್ರೆಸ್‌ ಈ ವಿಡಿಯೋ ಕುರಿತು ಸುದ್ದಿ ಪ್ರಕಟಿಸಿರುವುದು ಕಂಡು ಬಂದಿದೆ.

“Maldives parliament proceedings halted as MPs fight each other” ಸಂಸದರ ನಡುವೆ ಜಗಳ ಏರ್ಪಟ್ಟ ಹಿನ್ನೆಲೆ ಮಾಲ್ಡೀವ್ಸ್‌ ಸಂಸತ್‌ನ ಕಲಾಪ ಸ್ಥಗಿತಗೊಂಡಿದೆ” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ “ಮಾಲ್ಡೀವಿಯನ್ ಡೆಮಾಕ್ರಾಟಿಕ್ ಪಾರ್ಟಿ (ಎಂಡಿಪಿ) ಸಂಸದ ಇಶಾ ಮತ್ತು ಆಡಳಿತ ಪಕ್ಷ ಪೀಪಲ್ಸ್‌ ನ್ಯಾಷನಲ್ ಕಾಂಗ್ರೆಸ್‌(ಪಿಎನ್‌ಸಿ) ನ ಸಂಸದರಾದ ಅಬ್ದುಲ್ಲಾ ಶಹೀಮ್, ಅಬ್ದುಲ್ ಹಕೀಂ ನಡುವಿನ ಜಗಳದ ಹಿನ್ನೆಲೆ ಮಾಲ್ಡೀವ್ಸ್‌ ಸಂಸತ್‌ ಕಲಾಪ ಸ್ಥಗಿತಗೊಂಡಿದೆ” ಎಂದು ತಿಳಿಸಿದೆ. ಅಧ್ಯಕ್ಷ ಮೊಹಮದ್ ಮುಯಿಝು ಅವರಿಗೆ ಥಳಿಸಿದ್ದಾರೆ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಸಿಲ್ಲ.

ವರದಿ ಲಿಂಕ್ ಇಲ್ಲಿದೆ.

ಜನವರಿ 28ರಂದು ಎನ್‌ಡಿ ಟಿವಿ ಕೂಡ ತನ್ನ ವೆಬ್‌ಸೈಟ್‌ನಲ್ಲಿ ಈ ಸುದ್ದಿ ಪ್ರಕಟಿಸಿದ್ದು, “ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ಹೊಡೆದಾಡಿಕೊಂಡ ಬಳಿಕ ಇಂದು ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನ ಕಲಾಪ ಸ್ಥಗಿತಗೊಂಡಿದೆ. ಚೀನಾ ಪರ ಅಧ್ಯಕ್ಷ ಮೊಹಮದ್ ಮುಯಿಝು ಅವರ ಹೊಸ ಸಚಿವ ಸಂಪುಟವನ್ನು ಅನುಮೋದಿಸುವ ಬಗ್ಗೆ ಭಿನ್ನಾಭಿಪ್ರಾಯಗಳ ಉಂಟಾಗಿ ಜಗಳ ನಡೆದಿದೆ ಎಂದು ವರದಿಗಳು ತಿಳಿಸಿವೆ. ಮುಯಿಝು ಅವರ “ಭಾರತ ವಿರೋಧಿ ನೀತಿಗಳ” ಬಗ್ಗೆ ಅನೇಕ ನಾಯಕರು ಕೋಪಗೊಂಡಿದ್ದರು. ಮಾಲ್ಡೀವ್ಸ್‌ನಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವದ ಬಗ್ಗೆ ವಿರೋಧ ಪಕ್ಷವು ಚಕಾರವೆತ್ತಿದೆ. ಭಾರತವನ್ನು ಮಾಲ್ಡೀವ್ಸ್‌ನ ಅಭಿವೃದ್ಧಿಯ ದೊಡ್ಡ ಪಾಲುದಾರ ಎಂದು ಅದು ಪರಿಗಣಿಸಿದೆ” ಎಂದು ವರದಿ ತಿಳಿಸಿದೆ. ಅಧ್ಯಕ್ಷ ಅಧ್ಯಕ್ಷ ಮೊಹಮದ್ ಮುಯಿಝು ಅವರಿಗೆ ಥಳಿಸಲಾಗಿದೆ ಎಂದು ಎಲ್ಲೂ ಹೇಳಿಲ್ಲ.

ವರದಿ ಲಿಂಕ್ ಇಲ್ಲಿದೆ

ಮಾಲ್ಡೀವ್ಸ್‌ ಸಂಸದ ಇಬ್ರಾಹಿಂ ಶರೀಫ್ ಕೂಡ ಜನವರಿ 28ರಂದು ಈ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಗಲಾಟೆಯ ನಂತರ ಸಂಸದ ಶಹೀಮ್‌ ಅವರು ಗಾಯಗೊಂಡಿರುವುದನ್ನು ಸ್ಪಷ್ಟವಾಗಿ ನೋಡಬಹುದು.

ಏಜೆನ್ಸ್ ಫ್ರಾನ್ಸ್‌ ಪ್ರೆಸ್‌ (ಎಎಫ್‌ಪಿ) ಅನ್ನು ಉಲ್ಲೇಖಿಸಿ barrons.com ಜನವರಿ 29ರಂದು “Maldives Parliament Rejects Three Cabinet Members After Brawl” ಎಂಬ ಶೀರ್ಷಿಕೆಯಲ್ಲಿ ಈ ಕುರಿತು ಸುದ್ದಿ ಪ್ರಕಟಿಸಿದ್ದು, ಮಾಲ್ಡೀವ್ಸ್ ಸಂಸತ್‌ನಲ್ಲಿ ಮೂವರು ಸಚಿವರನ್ನು ನೇಮಿಸುವುದರ ವಿರುದ್ದ ಸಂಸದರು ಮತ ಚಲಾಯಿಸಿದ್ದಾರೆ. ಅದಕ್ಕೂ ಮುನ್ನ ನಡೆದ ಸಂಸದರ ನಡುವಿನ ಗಲಾಟೆಯಲ್ಲಿ ಒಬ್ಬರು ಸಂಸದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಇಲ್ಲೂ ಅಧ್ಯಕ್ಷ ಮುಯಿಝು ಅವರಿಗೆ ಥಳಿಸಿದ ಬಗ್ಗೆ ಉಲ್ಲೇಖಿಸಿಲ್ಲ.

ಸುದ್ದಿ ಲಿಂಕ್

ವಿವಿಧ ಮೂಲಗಳನ್ನು ಪರಿಶೀಲಿಸಿದಾಗ, ವೈರಲ್‌ ಆಗುತ್ತಿರುವ ವಿಡಿಯೋ ಜನವರಿ 28ರಂದು ಮಾಲ್ಡೀವ್ಸ್‌ ಸಂಸತ್‌ನಲ್ಲಿ ಸಂಸದರ ನಡುವೆ ನಡೆದ ಗಲಾಟೆಯದ್ದು, ಅಲ್ಲದೆ ಭಾರತ ವಿರೋಧಿ ನಿಲುವು ಖಂಡಿಸಿ ಸಂಸದರು ಅಧ್ಯಕ್ಷ ಮುಝಿಝು ಅವರಿಗೆ ಥಳಿಸಿರುವುದು ಅಲ್ಲ ಎಂದು ಖಚಿತವಾಗಿದೆ.

ಇದನ್ನೂ ಓದಿ : Fact Check: ಆಸ್ತಿ ಜಗಳದ ವಿಡಿಯೋ ಹಿಂದೂಗಳ ಮೇಲೆ ಮುಸ್ಲಿಮರ ದಾಳಿಯೆಂದು ತಪ್ಪಾಗಿ ಹಂಚಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...