Homeಮುಖಪುಟಬಿಜೆಪಿಯಲ್ಲಿ ವಿಲೀನಗೊಂಡ ಕೇರಳ ಜನಪಕ್ಷಂ

ಬಿಜೆಪಿಯಲ್ಲಿ ವಿಲೀನಗೊಂಡ ಕೇರಳ ಜನಪಕ್ಷಂ

- Advertisement -
- Advertisement -

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಕರ್ನಾಟಕದಲ್ಲಿ ಜೆಡಿಎಸ್‌, ಬಿಹಾರದಲ್ಲಿ ಜೆಡಿಯು ಸೇರಿದಂತೆ ಅನೇಕ ಪಕ್ಷಗಳು ಈಗಾಗಲೇ ಬಿಜೆಪಿಯ ತೆಕ್ಕೆಗೆ ಬಿದ್ದಿವೆ. ಇದರ ಮುಂದಿವರಿದ ಭಾಗವಾಗಿ ಕೇರಳದ ಜನಪಕ್ಷಂ (ಜಾತ್ಯತೀತ) ಬಿಜೆಪಿ ಜೊತೆ ವಿಲೀನಗೊಂಡಿದೆ.

ಏಳು ಬಾರಿಯ ಕೇರಳ ಶಾಸಕ ಪಿಸಿ ಜಾರ್ಜ್ ನೇತೃತ್ವದ ಕೇರಳ ಜನಪಕ್ಷಂ (ಜಾತ್ಯತೀತ) ಬುಧವಾರ ನವದೆಹಲಿಯಲ್ಲಿ ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ಪಕ್ಷ ವಿಲೀನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬೆಂಬಲಿಸಬೇಕು ಎಂಬುವುದು ಪಕ್ಷದ ಕಾರ್ಯಕರ್ತರ ಸಾಮಾನ್ಯ ಭಾವನೆಯಾಗಿದೆ. ಹೀಗಾಗಿ, ನಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದೇವೆ ಎಂದಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಕೈ ಬಲಪಡಿಸುವ ಸಲುವಾಗಿ ಕೇರಳ ಜನಪಕ್ಷಂ (ಜಾತ್ಯತೀತ) ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ಈ ಮೂಲಕ ಕೇರಳದಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಬೆಂಬಲಕ್ಕೆ ಪ್ರಬಲ ತಂಡವೊಂದು ಸೃಷ್ಟಿಯಾಗಿದೆ ಎಂದು ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಹೇಳಿದ್ದಾರೆ.

ಪಿಸಿ ಜಾರ್ಜ್ ಅವರ ಪಕ್ಷವನ್ನು ಎನ್‌ಡಿಎ ಒಕ್ಕೂಟಕ್ಕೆ ಸೇರಿಸಿಕೊಳ್ಳುವುದು ಬಿಜೆಪಿಯ ಯೋಜನೆಯಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಜಾರ್ಜ್‌ ಒಕ್ಕೂಟ ತೊರೆದರೆ ಸಮಸ್ಯೆಯಾಗಲಿದೆ. ಅವರು ಆಗಾಗ ಪಕ್ಷದಿಂದ ಪಕ್ಷಕ್ಕೆ ಬೆಂಬಲವನ್ನು ಬದಲಾಯಿಸುತ್ತಿರುತ್ತಾರೆ. ಹಾಗಾಗಿ, ಪಕ್ಷವನ್ನೇ ವಿಲೀನ ಮಾಡಲು ಬಿಜೆಪಿ ಆಯ್ಕೆ ನೀಡಿತ್ತು. ಅದರಂತೆ, ಜಾರ್ಜ್‌ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ಜಾರ್ಜ್ ಅವರು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಸಿಪಿಎಂ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್ ಫ್ರಂಟ್ ಎರಡರ ಭಾಗವಾಗಿದ್ದ ಪ್ರಾದೇಶಿಕ ಪಕ್ಷಗಳಾದ ಕೇರಳ ಕಾಂಗ್ರೆಸ್ (ಮಣಿ) ಮತ್ತು ಕೇರಳ ಕಾಂಗ್ರೆಸ್ (ಜೋಸೆಫ್) ನ ಪ್ರಮುಖ ನಾಯಕರಾಗಿದ್ದರು.

ನಂತರ ಅವರು ಎರಡೂ ರಂಗಗಳಿಂದ ದೂರವಿದ್ದರು. 2016 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಕೊಟ್ಟಾಯಂ ಜಿಲ್ಲೆಯ ತಮ್ಮ ತವರು ಪೂಣಜಾರ್‌ನಿಂದ ಸ್ಪರ್ಧಿಸಿದ್ದ ಅವರು ಯಶಸ್ಸು ಗಳಿಸಿದ್ದರು. ಆದರೆ 2021ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು.

2000 ಇಸವಿಯ ಆರಂಭದಲ್ಲಿ ಕೇರಳ ಕಾಂಗ್ರೆಸ್ (ಜೋಸೆಫ್) ನಿಂದ ಬೇರ್ಪಟ್ಟ ನಂತರ ಕೇರಳ ಕಾಂಗ್ರೆಸ್ (ಜಾತ್ಯತೀತ) ಪಕ್ಷವನ್ನು ಪಿಸಿ ಜಾರ್ಜ್ ಸ್ಥಾಪಿಸಿದ್ದರು. ಜಾರ್ಜ್ ಅವರ ಪಕ್ಷದ ವಿಲೀನವನ್ನು ಬಿಜೆಪಿಯ ಕ್ರಿಶ್ಚಿಯನ್ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಪರಿಗಣಿಸಬಹುದು ಎಂದು ಮಾಧ್ಯಮಗಳು ಹೇಳಿವೆ.

ಇದನ್ನೂ ಓದಿ: ಭಾರತ್‌ ಜೋಡೋ ನ್ಯಾಯ ಯಾತ್ರೆ: ಪ.ಬಂಗಾಳದಲ್ಲಿ ರಾಹುಲ್‌ ಗಾಂಧಿಯ ಕಾರಿನ ಮೇಲೆ ಕಲ್ಲು ತೂರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...