ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ ನಡೆದಿದ್ದು, 34ರ ಹರೆಯದ ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರೆಗೈದು ಬೆಂಕಿ ಹಚ್ಚಿದ ಘಟನೆ ಮೊರಾನಾ ಜಿಲ್ಲೆಯಲ್ಲಿ ನಡೆದಿದೆ.
ಅಂಬಾಹ್ ಪಟ್ಟಣದಿಂದ 3 ಕಿ.ಮೀ. ದೂರದ ಚಾಂದ್ ಕಾ ಪುರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಶೇ. 80ರಷ್ಟು ಸುಟ್ಟ ಗಾಯಗಳಿಂದ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಗ್ವಾಲಿಯರ್‌ನ ಜೆಎ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ದುಷ್ಕರ್ಮಿಗಳು ಕೃತ್ಯವನ್ನು ಎಸಗಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಗರ್ಭಿಣಿ ಮೇಲೆ ಬೆಂಕಿ ಹಚ್ಚಲಾಗಿದೆ. ಸಂತ್ರಸ್ತ ಮಹಿಳೆ ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ರಾಜಿ ಮಾಡಿಕೊಳ್ಳಲು ಚಾಂದ್‌ಪುರ ಗ್ರಾಮಕ್ಕೆ ಹೋಗಿದ್ದಳು. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ಮೂವರು ಆಕೆಯ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಅಂಬಾಹ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಲೋಕ್ ಪರಿಹಾರ್ ತಿಳಿಸಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಸಂತ್ರಸ್ತೆಯ ಪತಿ ಸುರೇಶ್ ಸಂಖ್ವಾರ್ ಮೊರೆನಾ ಜಿಲ್ಲೆಯ ಅಂಬಾಹ್ ಪಟ್ಟಣದ ಚಾಂದ್‌ಪುರ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ವಿಚ್ಛೇದನದ ನಂತರ ಅವಳನ್ನು ಮದುವೆಯಾಗಲು ಸುರೇಶ್ ನಿರಾಕರಿಸಿದಾಗ, ಅವಳು ಅವನ ಮೇಲೆ ಅತ್ಯಾಚಾರದ ಆರೋಪವನ್ನು ಹೊರಿಸಿದ್ದಳು. ಪ್ರಕರಣದಲ್ಲಿ ಸುರೇಶ್ ಜಾಮೀನು ಪಡೆದುಕೊಂಡಿದ್ದ. ಇದರಿಂದಾಗಿ ಸಂತ್ರಸ್ತ ಮಹಿಳೆ ತನ್ನ ಪತಿ ಸಂಬಂಧ ಹೊಂದಿದ್ದ ಮಹಿಳೆಯ ಜೊತೆ ಮಾತುಕತೆಗೆಂದು ತೆರಳಿದ್ದಳು. ಈ ವೇಳೆ ಘಟನೆ ನಡೆದಿದೆ ಆಕೆಯನ್ನು ಮೂವರು ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೆ, ಆಕೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಬೆಂಕಿ ಹಚ್ಚಿದ್ದಾರೆ.
ಕೃತ್ಯ ಎಸಗಿದ ಗೌತಮ್, ಮದನ್ ಮತ್ತು ರಾಕೇಶ್ ಎಂಬ ಮೂವರು ಆರೋಪಿಗಳು ಇನ್ನೂ ಪರಾರಿಯಾಗಿದ್ದಾರೆ. ಅಂಬಾಹ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗ್ವಾಲಿಯರ್‌ಗೆ ಆಂಬ್ಯುಲೆನ್ಸ್‌ನಲ್ಲಿ ಸಂತ್ರಸ್ತೆಯನ್ನು ಸ್ಥಳಾಂತರಿಸುವಾಗ ಸಂತ್ರಸ್ತೆಯ ಹೇಳಿಕೆಯನ್ನು ಮೊಬೈಲ್ ಫೋನ್‌ನಲ್ಲಿ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಡಿಒಪಿ (ಅಂಬಾ) ರವಿ ಭದೌರಿಯಾ ತಿಳಿಸಿದ್ದಾರೆ. ಇದಲ್ಲದೆ ಸಂತ್ರಸ್ತೆ ತಹಸೀಲ್ದಾರ್ ದಾಖಲಿಸಿದ ತನ್ನ ಪ್ರಾಥಮಿಕ ಹೇಳಿಕೆಯಲ್ಲಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಉಲ್ಲೇಖಿಸಿದ್ದಾಳೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ’10 ವರ್ಷಗಳಿಂದ ಮತ ಹಾಕಿದ ನಮಗಾಗಿ ನೀವು ಮಾಡಿದ್ದೇನು..?’: ಶೋಭಾ ಕರಂದ್ಲಾಜೆ ವಿರುದ್ಧ ಸಿಡಿದೆದ್ದ ಮತದಾರರು



Dear madam ,
These things are happening everytime everywhere , there is no proper punishment because of that people are committing this kind of things ,
People who are doing like this punish them infront of public and spread that in all news channel to create awareness, than only we can stop this .
Open a new organisation or office In the name “Female protection force” this Fpf should have rights to punish the criminal.