ದೆಹಲಿಯ ಇಂದರ್‌ಲೋಕ್ ಪ್ರದೇಶದ ರಸ್ತೆಯಲ್ಲಿ ಕಳೆದ ಶುಕ್ರವಾರ (ಮಾ.8) ಜುಮಾ ನಮಾಝ್ ಮಾಡುತ್ತಿದ್ದ ವ್ಯಕ್ತಿಗೆ ಪೊಲೀಸ್ ಅಧಿಕಾರಿ ಬೂಟುಗಾಲಿನಿಂದ ಒದ್ದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಸ್ತುತ, ಆ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತೋಮರ್ ಅವರನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಅಧಿಕಾರಿ ನಮಾಝ್ ಮಾಡುತ್ತಿದ್ದ ವ್ಯಕ್ತಿಗೆ ಒದ್ದ ವಿಡಿಯೋ ವೈರಲ್ ಆದ ಬಳಿಕ, ಬಲ ಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋದಲ್ಲಿ ‘ವ್ಯಕ್ತಿಯೊಬ್ಬರು ಬುರ್ಖಾ ಧರಿಸಿ ಬಂದಿರುವುದು ಸೆರೆಯಾಗಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ನಮಾಝ್‌ಗೆ ಬರುವಾಗ ಪುರುಷ ಬುರ್ಖಾ ಧರಿಸಿ ಬಂದದ್ದು ಯಾಕೆ? ಮುಸಲ್ಮಾನರು ಏನೋ ಮಾಡಲು ಸಂಚು ರೂಪಿಸಿದ್ದರು’ ಎಂಬರ್ಥದಲ್ಲಿ ಸುದ್ದಿ ಹಬ್ಬಿಸಲಾಗಿದೆ.
ಪತ್ರಕರ್ತ ಎಂದು ಹೇಳಿಕೊಂಡಿರುವ ‘Abhijit Majumder’ಎಂಬ ಎಕ್ಸ್ ಬಳಕೆದಾರ 30 ನಿಮಿಷದ ವಿಡಿಯೋದ 16ನೇ ಸೆಕೆಂಡ್‌ನಲ್ಲಿ ವ್ಯಕ್ತಿಯೊಬ್ಬ ಕಪ್ಪು ಬಟ್ಟೆ ಧರಿಸಿರುವುದು ಕಾಣುತ್ತಿದೆ. ಆ ವ್ಯಕ್ತಿ ಬುರ್ಖಾ ಧರಿಸಿ ಬಂದಿದ್ರಾ? ಆತ ಅಲ್ಲಿ ರಸ್ತೆಯಲ್ಲಿ ಏನು ಮಾಡುತ್ತಿದ್ದ ಎಂದು ಅನುಮಾನ ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ.
Is that a MAN IN A BURQA at 00:16?
What was he doing there on the road?#DelhiPolice #Namaz pic.twitter.com/GAWjWC0Qz1
— Abhijit Majumder (@abhijitmajumder) March 8, 2024
ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ, ‘Mr Sinha’ ಕೂಡ ವಿಡಿಯೋ ಹಂಚಿಕೊಂಡಿದ್ದು, “ಇದು ಅತ್ಯಂತ ಗಂಭೀರ ವಿಚಾರ. ಈ ಘಟನೆಯನ್ನು ಇನ್ನಷ್ಟು ಅನುಮಾನಾಸ್ಪದವಾಗಿಸಿದೆ. ಅಲ್ಲಿ ಬುರ್ಖಾ ತೊಟ್ಟ ವ್ಯಕ್ತಿ ಏನು ಮಾಡುತ್ತಿದ್ದ? ಈ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ” ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
This is serious & makes this incident even more suspicious. What was a man doing in Burqa at that place???
A deep investigation is needed.. @HMOIndia @DelhiPolice, pic.twitter.com/DR4hnxd3I1
— Mr Sinha (Modi's family) (@MrSinha_) March 8, 2024
ಮತ್ತೊಂದು ಬಲಪಂಥೀಯ ಎಕ್ಸ್ ಖಾತೆ ‘MeghUpdates’ಕೂಡ ವಿಡಿಯೋ ಹಂಚಿಕೊಂಡಿದ್ದು, ವ್ಯಕ್ತಿಯೊಬ್ಬ ಬುರ್ಖಾ ಹಾಕಿಕೊಂಡು ಬಂದಿದ್ದರು ಎಂದು ಪ್ರತಿಪಾದಿಸಿದೆ.
Viral video of man spotted in Hijab ! at Inderlok as policemen were clearing road for traffic.
Even the other guy looked surprised… pic.twitter.com/l7VS4XLl7p— Megh Updates 🚨™ (@MeghUpdates) March 8, 2024
ಫ್ಯಾಕ್ಟ್ ಚೆಕ್ : ಪೊಲೀಸ್ ಅಧಿಕಾರಿ ನಮಾಝ್ ಮಾಡುತ್ತಿದ್ದ ವ್ಯಕ್ತಿಗೆ ಬೂಟುಗಾಲಿನಿಂದ ಒದ್ದ ಘಟನೆಗೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಮಗೆ ದೊರೆತ ವಿಡಿಯೋದಲ್ಲಿ ಕೂಡ ಬುರ್ಖಾ ಧರಿಸಿ ಬಂದಿದ್ದಾರೆ ಎನ್ನಲಾದ ವ್ಯಕ್ತಿ ಇದ್ದಾರೆ.
ಒಟ್ಟು 1 ನಿಮಿಷ 29 ಸೆಕೆಂಡ್‌ನ ವಿಡಿಯೋದಲ್ಲಿ 11 ನಿಮಿಷ ಆಗುವಾಗ ಕಪ್ಪು ಬಣ್ಣದ ಬಟ್ಟೆ ಧರಿಸಿರುವ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ ಆ ವ್ಯಕ್ತಿ ಕಪ್ಪು ಪ್ಯಾಂಟ್, ಕಡು ಕಪ್ಪು ಬಣ್ಣದ ಟೀ ಶರ್ಟ್ ಅಥವಾ ಹೂಡಿ ಮತ್ತು ತಲೆಯಲ್ಲಿ ಕಪ್ಪು ಬಣ್ಣದ ಟೋಪಿ ಧರಿಸಿರುವುದನ್ನು ಕಾಣಬಹುದು. ಅವರ ಕೈಯಲ್ಲಿ ಮತ್ತೊಂದು ಬಟ್ಟೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ.
ವಿಡಿಯೋದ 30 ನಿಮಿಷದಲ್ಲಿ ಆ ವ್ಯಕ್ತಿ ಕ್ಯಾಮರಾ ಕಡೆ ಬೆನ್ನು ಹಾಕಿ ಮತ್ತೊಬ್ಬರ ಜೊತೆ ಮಾತನಾಡಿದ್ದಾರೆ. ಈ ವೇಳೆ ಹೂಡಿಯ ಸ್ಕಲ್ಪ್ (ತಲೆ ಮುಚ್ಚುವ ಭಾಗ) ಕೂಡ ಕಾಣುತ್ತಿದೆ. ಹಾಗಾಗಿ, ಆ ವ್ಯಕ್ತಿ ಧರಿಸಿರುವುದು ಬುರ್ಖಾ ಅಲ್ಲ ಎಂಬುವುದು ಸ್ಪಷ್ಟ.

ವಿಡಿಯೋದಲ್ಲಿ ಕಾಣುವಂತೆ ರಸ್ತೆಯಲ್ಲಿ ನಮಾಝ್ ಮಾಡಲು ಬಂದ ಹೆಚ್ಚಿನ ಜನರು ನಮಾಝ್ ಮ್ಯಾಟ್ ಅಥವಾ ಮುಸಲ್ಲೆಯನ್ನು ತಂದಿದ್ದರು. ಅದೇ ರೀತಿ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿ ಕೂಡ ಕೈಯಲ್ಲಿ ನಮಾಝ್ ಮ್ಯಾಟ್ ಹಿಡಿದಿರಬಹುದು. ಅಲ್ಲದೆ ಅವರು ಬುರ್ಖಾ ಧರಿಸಿ ಬಂದಿದ್ದಾರೆ ಎಂಬುವುದು ಸುಳ್ಳು
ಇದನ್ನೂ ಓದಿ : Fact Check: ಉತ್ತರ ಪ್ರದೇಶದಲ್ಲಿ 21 ಬಿಲಿಯನ್ ವರ್ಷ ಹಳೆಯ ಸನಾತನ ಡ್ರೋಣ್ ಸಿಕ್ಕಿದೆ ಎಂಬುವುದು ಸುಳ್ಳು


