Homeಮುಖಪುಟವಿವಿಗಳಲ್ಲಿ ಮೋದಿಯ ಭಾಷಣ ಪ್ರಸಾರ ಮಾಡುವಂತೆ, ಪೊಸ್ಟರ್ ಹಾಕುವಂತೆ ಯುಜಿಸಿ ನಿರ್ದೇಶನ

ವಿವಿಗಳಲ್ಲಿ ಮೋದಿಯ ಭಾಷಣ ಪ್ರಸಾರ ಮಾಡುವಂತೆ, ಪೊಸ್ಟರ್ ಹಾಕುವಂತೆ ಯುಜಿಸಿ ನಿರ್ದೇಶನ

- Advertisement -
- Advertisement -

ಗುಜರಾತ್ ಮತ್ತು ಅಸ್ಸಾಂನಲ್ಲಿ ನಾಳೆ ಪ್ರಧಾನಿ ಮೋದಿ ನೆರವೇರಿಸಿ ಕೊಡಲಿರುವ ವಿವಿಧ ಸೆಮಿಕಂಡಕ್ಟರ್‌ ಫ್ಯಾಕ್ಟರಿಗಳ ಶಂಕುಸ್ಥಾಪನೆ ಕಾರ್ಯಕ್ರಮಗಳ ಭಾಷಣವನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ ಎಂದು ದಿ ವೈರ್‌ ವರದಿ ಮಾಡಿದೆ.

ಗುಜರಾತ್‌ನ ಧೋಲೇರಾ ಮತ್ತು ಸನಂದ್ ಹಾಗೂ ಅಸ್ಸಾಂನ ಮೋರಿಗಾಂವ್‌ನಲ್ಲಿ ಸೆಮಿಕಂಡಕ್ಟರ್‌ ಫ್ಯಾಕ್ಟರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. ಇದನ್ನು “ಪ್ರಚಾರ ಕಾರ್ಯಕ್ರಮ” ಎಂದು ಕರೆದ ಕೆಲವು ಶಿಕ್ಷಣ ತಜ್ಞರು, ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಮತದಾರರನ್ನು ತಲುಪುವ  ಬಿಜೆಪಿಯ ಕೊನೆಯ ಪ್ರಯತ್ನದ ಭಾಗವಾಗಿದೆ ಎಂದು ಹೇಳಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಮೋದಿಯ ಚಿತ್ರವಿರುವ ‘ವಿಕಸಿತ್‌ ಭಾರತ್’ ಪೋಸ್ಟರ್‌ಗಳನ್ನು ಹಾಕುವಂತೆ ಶಿಕ್ಷಣ ಸಚಿವಾಲಯ ಸಂಸ್ಥೆಗಳಿಗೆ ಸೂಚಿಸಿದೆ. ಕಾರ್ಯಕ್ರಮದ ನಂತರ ತನ್ನ ನಿಯಂತ್ರಣದಲ್ಲಿರುವ ಸಂಸ್ಥೆಗಳು ತಮ್ಮ ಈ ಆದೇಶದ ಅನುಸರಣೆ ವರದಿಗಳನ್ನು ಕಳುಹಿಸಬೇಕೆಂದು ಸಚಿವಾಲಯ ಬಯಸುತ್ತದೆ ಎಂದು ಟೆಲಿಗ್ರಾಫ್ ವರದಿ ಉಲ್ಲೇಖಿಸಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ರಾಜ್ಯ ಮಟ್ಟದ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಈ ಬಗ್ಗೆ ಸೂಚನೆಯನ್ನು ಬಿಡುಗಡೆ ಮಾಡಿದೆ.

ಈ ಕುರಿತು ಸಂಸ್ಥೆಗಳ ಉಪಕುಲಪತಿಗಳಿಗೆ ಕಳುಹಿಸಲಾದ ಪತ್ರದ ಜೊತೆಗೆ ಕಾರ್ಯಕ್ರಮದ ಸ್ಥಳಗಳಲ್ಲಿ ಅಳವಡಿಸಬೇಕಾದ ಐದು ಪೋಸ್ಟರ್‌ಗಳ ವಿನ್ಯಾಸಗಳನ್ನು ಲಗತ್ತಿಸಲಾಗಿದೆ. ಪೋಸ್ಟರ್‌ಗಳಲ್ಲಿ ವಿಕಸಿತ್‌ ಭಾರತ್ ಎಂದು ಉಲ್ಲೇಖಿಸಲಾಗಿದೆ ಮತ್ತು ಸೆಮಿಕಂಡಕ್ಟರ್ ಪ್ಯಾಕಟರಿಗಳಿಗೆ ಮೋದಿ ಅಡಿಗಲ್ಲು ಹಾಕುತ್ತಿರುವ ಪೋಟೋಗಳು ಕೂಡ ಅದರಲ್ಲಿ ಕಂಡು ಬರುತ್ತಿದೆ. ಈವೆಂಟ್‌ಗೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಲಗತ್ತಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಪ್ರಚಾರ ಮಾಡಲು ಮತ್ತು ವಿಕಸಿತ್‌ ಭಾರತ್‌ನ ದೃಷ್ಟಿಗೆ ಕಾರಣವಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಲು ವಿನಂತಿಸಲಾಗಿದೆ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಈ ಪ್ರಯತ್ನದ ಪ್ರಮುಖ ಪಾಲುದಾರರಾಗಿದ್ದಾರೆ, ಆದ್ದರಿಂದ, ಎಲ್ಲಾ ವಿಶ್ವವಿದ್ಯಾನಿಲಯಗಳು ಅಗತ್ಯ ವ್ಯವಸ್ಥೆಯನ್ನು ಮಾಡಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳು, ವಿಶೇಷವಾಗಿ STEM ಮತ್ತು ತಾಂತ್ರಿಕ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಿರಾಂಡಾ ಹೌಸ್ ಕಾಲೇಜಿನ ಅಧ್ಯಾಪಕ ಸದಸ್ಯ ಅಭಾ ದೇವ್ ಹಬೀಬ್, ಇದು ಶಿಕ್ಷಣ ಸಂಸ್ಥೆಗಳ ಮೇಲಿನ ಸರಕಾರದ ಹಸ್ತಕ್ಷೇಪವಾಗಿದೆ. ಇದು ಸಂಪೂರ್ಣವಾಗಿ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮವಾಗಿದೆ. ಸಂಶೋಧಕರು ಮತ್ತು ಅಧ್ಯಾಪಕರು ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಬೇಕು. ಆದರೆ ಅವರು ಪ್ರಚಾರ ಮಾಡಬೇಕೆಂದು ಸರ್ಕಾರ ಬಯಸುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯ ಅಶೋಕ್ ಅಗರವಾಲ್, ನಿರ್ದೇಶನಗಳನ್ನು ರಾಜಕೀಯ ಪ್ರೇರಿತ ಮತ್ತು ತಪ್ಪು ಎಂದು ಕರೆದಿದ್ದಾರೆ.  ವಿಶ್ವವಿದ್ಯಾನಿಲಯಗಳು ಸ್ವಾಯತ್ತವಾಗಿವೆ. ಅಂತಹ ನಿರ್ದೇಶನಗಳನ್ನು ನಿರ್ಲಕ್ಷಿಸುವ ಶಕ್ತಿ ಅವರಿಗೆ ಇದೆ. ಆದರೆ ಸರ್ಕಾರವು ಅವರನ್ನು ಬಲಿಪಶು ಮಾಡುವುದರಿಂದ ಸಂಸ್ಥೆಗಳು ನಿರ್ಲಕ್ಷಿಸುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ, ಯುಜಿಸಿ ದೇಶದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಮೋದಿ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ (BBBP) ಲಾಂಛನವನ್ನು ಆವರಣದಲ್ಲಿ ಸ್ಥಾಪಿಸುವಂತೆ ಕೇಳಿಕೊಂಡಿತ್ತು. ಮೋದಿ ಪೋಟೋ ಹಿನ್ನೆಲೆಗೆ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಳಿಕೊಂಡಿತ್ತು. ಇದಕ್ಕೆ ಪ್ರತಿಪಕ್ಷಗಳು ತೀವ್ರವಾದ ವಿರೋಧನ್ನು ವ್ಯಕ್ತಪಡಿಸಿದ್ದವು.

ಇದನ್ನು ಓದಿ: CAA: ಕಾನೂನು ಸವಾಲು ಏನಾಯ್ತು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...