HomeದಿಟನಾಗರFact Check: ಉತ್ತರ ಪ್ರದೇಶದಲ್ಲಿ 21 ಬಿಲಿಯನ್ ವರ್ಷ ಹಳೆಯ ಸನಾತನ ಡ್ರೋಣ್ ಸಿಕ್ಕಿದೆ ಎಂಬುವುದು...

Fact Check: ಉತ್ತರ ಪ್ರದೇಶದಲ್ಲಿ 21 ಬಿಲಿಯನ್ ವರ್ಷ ಹಳೆಯ ಸನಾತನ ಡ್ರೋಣ್ ಸಿಕ್ಕಿದೆ ಎಂಬುವುದು ಸುಳ್ಳು

- Advertisement -
- Advertisement -

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಉತ್ಖತನ ಮಾಡುವಾಗ 21 ಬಿಲಿಯನ್ ವರ್ಷದಷ್ಟು ಹಳೆಯ ಸನಾತನ ಡ್ರೋನ್ ಪತ್ತೆಯಾಗಿದೆ ಎಂದು ಪೋಟೋವೊಂದು ವೈರಲ್ ಆಗಿದೆ. ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.

‘श्रमिकस्य पुत्री | ಶ್ರಮಜೀವಿಯ ಮಗಳು’ ಎಂಬ ಎಕ್ಸ್ ಖಾತೆಯೊಂದರಲ್ಲಿ”ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಉತ್ಖತನ ಮಾಡುವಾಗ 21 ಬಿಲಿಯನ್ ವರ್ಷದಷ್ಟು ಹಳೆಯ ಸನಾತನ ಡ್ರೋನ್ ಪತ್ತೆಯಾಗಿದೆ. ಜಗತ್ತಿನ ಅತ್ಯಂತ ಹಳೆಯ ಮತ್ತು ಮೂಲ ನಾಗರಿಕತೆ ಸನಾತನ ಆರ್ಯ ನಾಗರಿಕತೆ, ಜೈ ಸನಾತನ” ಎಂದು ಬರೆದುಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ 

‘kesari samrat’ಫೇಸ್‌ಬುಕ್‌ ಖಾತೆಯಲ್ಲಿ ವೈರಲ್ ಫೋಟೋ ಹಂಚಿಕೊಂಡು “ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಉತ್ಖತನ ಮಾಡುವಾಗ 21 ಬಿಲಿಯನ್ ವರ್ಷದಷ್ಟು ಹಳೆಯ ಸನಾತನ ಡ್ರೋನ್ ಪತ್ತೆಯಾಗಿದೆ. ಜಗತ್ತಿನ ಅತ್ಯಂತ ಹಳೆಯ ಮತ್ತು ಮೂಲ ನಾಗರಿಕತೆ ಸನಾತನ ಆರ್ಯ ನಾಗರಿಕತೆ, ಜೈ ಸನಾತನ” ಎಂದು ಬರೆದುಕೊಳ್ಳಲಾಗಿದೆ.

ಫೋಸ್ಟ್ ಲಿಂಕ್ ಇಲ್ಲಿದೆ 

ಕೆಲವರು “ಚೀನಾದ ಪ್ರಾಚೀನ ನಗರವಾದ Sanxingduiಯ ಪುರಾತತ್ವ ಪ್ರದೇಶದಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಡ್ರೋನ್ ಎಂದು ಪ್ರತಿಪಾದಿಸಿದ್ದಾರೆ. ಇನ್ನೂ ಕೆಲವರು ಇದು ಪ್ರಾಚೀನ ಈಜಿಪ್ಟ್‌ನಲ್ಲಿ ದೊರಕಿದೆ. ಬಹು ಹಿಂದೆಯೇ ನಮ್ಮ ನಾಗರೀಕತೆಗಳು ಉನ್ನತಿಯನ್ನು ಸಾಧಿಸಿದ್ದವು” ಎಂದು ಹೇಳಿದ್ದಾರೆ.

ಫ್ಯಾಕ್ಟ್‌ಚೆಕ್‌ : ವೈರಲ್ ಫೋಟೊದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಗೂಗಲ್ ರಿವರ್ಸ್ ಇಮೇಜ್ ಬಳಸಿ ಹುಡುಕಾಡಿದ್ದೇವೆ. ಈ ವೇಳೆ ವಿವಿಧ ತಲೆ ಬರಹಗಳನ್ನು ಕೊಟ್ಟು ಈ ಫೋಟೋ ಹಂಚಿಕೊಂಡಿರುವುದು ಕಂಡು ಬಂದಿದೆ.

ಆದರೆ, ಚೀನಾದ ಇಕ್ಸಿಗುವಾ ವೀಡಿಯೋ ಚಾನೆಲ್‌ನಲ್ಲಿ ಮಾರ್ಚ್ 7,2024ರಂದು ಅಪ್ಲೋಡ್ ಆದ ವಿಡಿಯೋ ಒಂದರಲ್ಲಿ ನೀಡಿದ ಶೀರ್ಷಿಕೆ ಪ್ರಕಾರ, ‘ಈ ಕಂಚಿನ ಡ್ರೋಣ್ ಎಐ(AI)ಸೃಷ್ಟಿಯಾಗಿದ್ದು, ಸಂಪೂರ್ಣ ಕಾಲ್ಪನಿಕವಾಗಿದೆ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಬೇಡಿ” ಎಂದಿದೆ.

ಪೋಸ್ಟ್ ಲಿಂಕ್ ಇಲ್ಲಿದೆ

‘Convomf’ಎಂಬ ಎಕ್ಸ್ ಖಾತೆಯಲ್ಲಿ ಮಾರ್ಚ್ 7, 2024ರಂದು ವೈರಲ್ ಫೋಟೋ ಹಂಚಿಕೊಳ್ಳಲಾಗಿದ್ದು, “ಇದು ಎಐಯಿಂದ ರಚಿಸಲಾದ ಚಿತ್ರ” ಎಂದು ಇಂಡೋನ್ಯಾಷ್ಯಾ ಭಾಷೆಯಲ್ಲಿ ಬರೆದುಕೊಳ್ಳಲಾಗಿದೆ.

ಪೋಸ್ಟ್‌ ಲಿಂಕ್ 

ಫೋಟೋ ಕುರಿತು ಇನ್ನಷ್ಟು ಖಚಿತಪಡಿಸಿಕೊಳ್ಳಲು ನಾವು ಅದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಫೋಟೋನಾ ಎಂದು ನಾವು ಗೂಗಲ್ ಟೂಲ್ ಬಳಸಿ ಪರಿಶೀಲಿಸಿದ್ದೇವೆ. ಈ ವೇಳೆ ಇದು ಎಐ ಎಂದೇ ತಿಳಿದು ಬಂದಿದೆ.

ಇದನ್ನೂ ಓದಿ: Fact Check: ರಂಝಾನ್‌ ಪ್ರಯುಕ್ತ ಸರ್ಕಾರಿ ಶಾಲೆಗಳ ಸಮಯ ಬದಲಾವಣೆ ಮಾಡಲಾಗಿದೆಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...