HomeದಿಟನಾಗರFact Check : ಮಣಿಪುರದಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಕ್ಕೆ ಚೀನಾ ಅಧ್ಯಕ್ಷ ರಾಹುಲ್ ಗಾಂಧಿಗೆ...

Fact Check : ಮಣಿಪುರದಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಕ್ಕೆ ಚೀನಾ ಅಧ್ಯಕ್ಷ ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದ್ರಾ?

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅರುಣಾಚಲ ಪ್ರದೇಶದ ಬದಲು ಮಣಿಪುರದಿಂದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಆರಂಭಿಸಿದ್ದಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಧನ್ಯವಾದ ಹೇಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

“ರಾಹುಲ್ ಗಾಂಧಿ ಭಾರತ ಆಕ್ರಮಿತ ಅರುಣಾಚಲ ಪ್ರದೇಶದ ಬದಲು ಮಣಿಪುರದಿಂದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಆರಂಭಿಸುವ ಮೂಲಕ ಚೀನಾದ ಸಾರ್ವಭೌಮತ್ವವನ್ನು ಗೌರವಿಸಿದ್ದಾರೆ. ಇದಕ್ಕೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ತಿಳಿಸಿದ್ದಾರೆ” ಎಂದು ಚೀನಾದ ಗ್ಲೋಬಲ್ ಟೈಮ್ಸ್ ಎಂಬ ಪತ್ರಿಕೆ ಎಕ್ಸ್ ಖಾತೆಯಲ್ಲಿ ಸುದ್ದಿ ಪೋಸ್ಟ್ ಮಾಡಿರುವುದಾಗಿ ಹಲವರು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.

ಅರುಣಾಚಲ ಪ್ರದೇಶ ಚೀನಾದ ಭಾಗವಾಗಿದೆ. ಅದನ್ನು ಭಾರತ ಆಕ್ರಮಿಸಿದೆ ಎಂದು ಚೀನಾ ಪ್ರತಿಪಾದಿಸುತ್ತಾ ಬಂದಿದೆ. ರಾಹುಲ್ ಗಾಂಧಿ ಚೀನಾದ ಸಾರ್ವಭೌಮತ್ವ ಗೌರವಿಸುವ ಸಲುವಾಗಿ, ಅಂದರೆ ಚೀನಾ ಪರವಾಗಿ ಅರುಣಾಚಲ ಪ್ರದೇಶದ ಬದಲು ಮಣಿಪುರದಿಂದ ಯಾತ್ರೆ ಆರಂಭಿಸಿದ್ದಾರೆ ಎಂಬ ಅರ್ಥದಲ್ಲಿ ಗ್ಲೋಬಲ್ ಟೈಮ್ಸ್ ಸುದ್ದಿ ಪ್ರಕಟಿಸಿರುವುದಾಗಿ ಹೇಳಲಾಗಿದೆ.

ಬರೋಬ್ಬರಿ 1ಲಕ್ಷದ 4 ಸಾವಿರ ಫಾಲೋವರ್ಸ್ ಹೊಂದಿರುವ ‘Pradhan Gaurav’ ಎಂಬವರ ಫೇಸ್‌ಬುಕ್‌ ಖಾತೆಯಲ್ಲಿ ಗ್ಲೋಬಲ್ ಟೈಮ್ಸ್ ಪ್ರಕಟಿಸಿರುವುದು ಎನ್ನಲಾದ ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡು ” ನಾನು ನಿಮಗೆ ಈ ಹಿಂದೆ ಏನು ಹೇಳಿದ್ದೆ, ನೋಡಿ ಅರುಣಾಚಲವನ್ನು ಹೊರಗಿಡಲಾಗಿದೆ. ಕಾಂಗ್ರೆಸ್ ಎಂದರೆ ಚೈನೀಸ್ ಫ್ರಾಂಚೈಸಿ” ಎಂದು ಬರೆಯಲಾಗಿದೆ.

ಪೋಸ್ಟ್ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

‘Minni Razdan’ ಎಂಬ ಎಕ್ಸ್ ಖಾತೆಯಲ್ಲೂ ಗ್ಲೋಬಲ್ ಟೈಮ್ಸ್ ಸುದ್ದಿಯದ್ದು ಎನ್ನಲಾದ ಸ್ಕ್ರೀನ್ ಶಾಟ್ ಹಂಚಿಕೊಂಡು ” ಭಾರತ ಆಕ್ರಮಿತ ಅರುಣಾಚಲದ (ಚೀನಾ ಪ್ರಕಾರ) ಬದಲಾಗಿ ಮಣಿಪುರದಿಂದ ನ್ಯಾಯ್ ಯಾತ್ರೆಯನ್ನು ಆರಂಭಿಸಿದ್ದಕ್ಕಾಗಿ ರಾಹುಲ್ ಗಾಂಧಿಗೆ ಚೀನಾ ಧನ್ಯವಾದಗಳನ್ನು ಅರ್ಪಿಸಿದೆ?. ಬೇರೆ ರೀತಿಯಲ್ಲಿ ಹೇಳುವುದಾದರೆ ಕಾಂಗ್ರೆಸ್ ಚೀನಾ ಒಂದೇ ಪುಟದಲ್ಲಿದೆ” ಎಂದು ಬರೆಯಲಾಗಿದೆ.

ಪೋಸ್ಟ್ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

ವಾಸ್ತವ : ನಾನು ಗೌರಿ.ಕಾಂ ಈ ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಿದೆ. ಈ ವೇಳೆ ಗ್ಲೋಬಲ್ ಟೈಮ್ಸ್ ತನ್ನ ಎಕ್ಸ್ ಖಾತೆಯಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ರಾಹುಲ್ ಗಾಂಧಿಗೆ ಧನ್ಯವಾದ ಹೇಳಿರುವುದರ ಕುರಿತು ಯಾವುದೇ ಸುದ್ದಿಯನ್ನು ಪ್ರಕಟಿಸಿರುವುದು ಕಂಡು ಬಂದಿಲ್ಲ.

“ನಾವು ಎಕ್ಸ್ ಅಡ್ವಾನ್ಸ್ ಸರ್ಚ್‌ ಮಾಡಿದ್ದೇವೆ. ಈ ವೇಳೆ ಕ್ಸಿ ಜಿನ್‌ಪಿಂಗ್ ಅವರು ರಾಹುಲ್ ಗಾಂಧಿಗೆ ಧನ್ಯವಾದ ಹೇಳಿರುವುದರ ಕುರಿತು ಗ್ಲೋಬಲ್ ಟೈಮ್ಸ್ ಯಾವುದೇ ಸುದ್ದಿ ಪ್ರಕಟಿಸಿರುವುದು ಕಂಡು ಬಂದಿರುವುದಿಲ್ಲ. ಗ್ಲೋಬಲ್ ಟೈಮ್ಸ್ ಇಂತಹ ಸುದ್ದಿಯ ಪೋಸ್ಟ್ ಅನ್ನು ಪ್ರಕಟಿಸಿ ಡಿಲಿಟ್ ಮಾಡಿಯೂ ಇಲ್ಲ. ಭಾರತ್ ಜೋಡೋ ನ್ಯಾಯ ಯಾತ್ರೆಯ ಬಗ್ಗೆ ಕ್ಸಿ ಜಿನ್‌ಪಿಂಗ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರುವ ಕುರಿತು ಸುದ್ದಿ ದೊರೆತಿಲ್ಲ” ಎಂದು ಖ್ಯಾತ ಫ್ಯಾಕ್ಟ್ ಚೆಕ್ ವೆಬ್‌ಸೈಟ್ ಬೂಮ್ ಹೇಳಿದೆ.

“ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಗ್ಲೋಬಲ್ ಟೈಮ್ಸ್ ಸುದ್ದಿ ಪ್ರಕಟಿಸಿರುವುದಾಗಿ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. ಭಾರತದ ಯಾವುದೇ ಮುಖ್ಯವಾಹಿನಿ ಸುದ್ದಿ ಮಾಧ್ಯಮಗಳು ರಾಹುಲ್ ಗಾಂಧಿಗೆ ಕ್ಸಿ ಜಿನ್‌ಪಿಂಗ್ ಧನ್ಯವಾದ ಹೇಳಿರುವ ಕುರಿತು ಇದುವರೆಗೆ ಸುದ್ದಿ ಪ್ರಕಟಿಸಿಲ್ಲ” ಎಂದು ಬೂಮ್ ತಿಳಿಸಿದೆ.

ಒಟ್ಟಿನಲ್ಲಿ, ನಾನು ಗೌರಿ.ಕಾಂ ಪರಿಶೀಲನೆಯ ಪ್ರಕಾರ ಅರುಣಾಚಲ ಪ್ರದೇಶದ ಬದಲು ಮಣಿಪುರದಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಿದ್ದಕ್ಕೆ ಚೀನಾ ಅಧ್ಯಕ್ಷರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಧನ್ಯವಾದ ಹೇಳಿದ್ದಾರೆ ಎಂಬುವುದು ಸತ್ಯಕ್ಕೆ ದೂರವಾದದ್ದು. ಗ್ಲೋಬಲ್ ಟೈಮ್ಸ್ ಪತ್ರಿಕೆ ಹೆಸರಿನಲ್ಲಿ ಹರಿದಾಡುತ್ತಿರುವ ಸ್ಕ್ರೀನ್ ಶಾಟ್ ಕೂಡ ಸುಳ್ಳು ಎಂಬುವುದು ತಿಳಿದು ಬಂದಿದೆ.

ಇದನ್ನೂ ಓದಿ : Fact Check : 500 ರೂ. ನೋಟಿನಲ್ಲಿ ಗಾಂಧಿ ಬದಲು ರಾಮನ ಫೋಟೋ ಮುದ್ರಿಸಲಾಗಿದೆಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...