Homeಮುಖಪುಟದಲಿತ ಯುವಕನಿಗೆ ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ: ಅಮಾನವೀಯ ಘಟನೆ ವರದಿ

ದಲಿತ ಯುವಕನಿಗೆ ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ: ಅಮಾನವೀಯ ಘಟನೆ ವರದಿ

- Advertisement -
- Advertisement -

ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ದಲಿತರ ಮೇಲಿನ ಹಿಂಸೆ, ದೌರ್ಜನ್ಯ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿದೆ. ಉತ್ತರಪ್ರದೇಶದ ಜೌನ್‌ಪುರ್‌ ಜಿಲ್ಲೆಯಲ್ಲಿ ಕಳೆದ ನ.23ರಂದು 14 ವರ್ಷದ ದಲಿತ ಬಾಲಕನಿಗೆ ಕೆಲವು ಸವರ್ಣಿಯ ಜಾತಿಗೆ ಸೇರಿದ ದುಷ್ಕರ್ಮಿಗಳ ಗುಂಪು ಮೂತ್ರ ಕುಡಿಸಿದ ಪ್ರಕರಣ ನಡೆದಿತ್ತು. ಇದೀಗ ಅಂತದ್ದೇ ಪ್ರಕರಣವೊಂದು ನಡೆದಿದ್ದು, ದಲಿತ ಸಮುದಾಯಕ್ಕೆ ಸೇರಿದ ಯುವಕನಿಗೆ ಥಳಿಸಿ ಮುಖದ ಮೇಲೆ ಮೂತ್ರ ಮಾಡಿದ ಘಟನೆ ಲಕ್ನೋ ಜಿಲ್ಲೆಯ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದೇ ಜನವರಿ 9ರಂದು ದಲಿತ ಸಮುದಾಯಕ್ಕೆ ಸೇರಿದ ಅಂಕಿತ್‌ ಎಂಬ ಯುವಕನನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಮುಝಪ್ಪರ್‌ ನಗರ ಜಿಲ್ಲೆಯ ಖತೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋಲಾ ಗ್ರಾಮದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಠಿಣ ಸೆಕ್ಷನ್ 302 (ಕೊಲೆ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯಿದೆಯ ನಿಬಂಧನೆಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ ಹೊರಬಿದ್ದದೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರವಿದ್ದು, ಯೋಗಿ ಆದಿತ್ಯನಾಥ್‌ ಆಡಳಿತ ಇಡೀ ದೇಶಕ್ಕೆ ಮಾದರಿ ಎಂದು ಬಿಜೆಪಿ ಡಂಗುರ ಸಾರಿತ್ತು. ಆದರೆ ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ಅವರೇ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದೆ. ಆದರೆ ಇವುಗಳಲ್ಲಿ ಹೆಚ್ಚಿನವುಗಳು ಬಹಿರಂಗವಾಗುತ್ತಿಲ್ಲ ಎನ್ನವುದನ್ನು ಗಮನಿಸಬೇಕಿದೆ.

ಲಕ್ನೋ ಜಿಲ್ಲೆಯ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಯುವಕರ ಗುಂಪೊಂದು 18 ವರ್ಷದ ದಲಿತ ಬಾಲಕನಿಗೆ ಥಳಿಸಿ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಮಾನವೀಯವಾಗಿ ವರ್ತಿಸಿದೆ. ಜ.13ರಂದು ಘಟನೆ ನಡೆದಿದ್ದು, ಸಂತ್ರಸ್ತ ಯುವಕನ ತಂದೆ ಕೂಲಿ ಕಾರ್ಮಿಕ ಸಂದೀಪ್ ಕುಮಾರ್ ರಾವತ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ ನಂತರ ಮಂಗಳವಾರ ಸಂಜೆ ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿ  25-30 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 504 (ಅವಮಾನ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 147 (ಗಲಭೆ) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಆರೋಪಿಗಳ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿದೆ.

ಇಂದಿರಾನಗರದ ಚಡಾನ್ ಗ್ರಾಮದ ನಿವಾಸಿ ರಾವತ್ ಅವರು ಈ ಕುರಿತು ಎಫ್‌ಐಆರ್‌ ದಾಖಲಿಸಿದ್ದು, ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ತನ್ನ ಮಗ ಲಕ್ಕಿ(18) ತನ್ನ ಸ್ನೇಹಿತರೊಂದಿಗೆ ಖುರ್ರಂ ನಗರದ ಬಳಿ ಕ್ರಿಕೆಟ್ ಆಡಲು ಹೋಗಿದ್ದ. ಕ್ರಿಕೆಟ್‌ ಆಡುವಾಗ ಚೆಂಡು ಇತರ ಕೆಲವು ಯುವಕರು ಆಡುತ್ತಿದ್ದ ಪ್ರದೇಶದಲ್ಲಿ ಬಿತ್ತು. ಲಕ್ಕಿ ಚೆಂಡನ್ನು ತೆಗೆದುಕೊಳ್ಳಲು ಅಲ್ಲಿಗೆ ಹೋದಾಗ ಅಲ್ಲಿದ್ದ ಯುವಕರು ಆತನಿಗೆ ಚೆಂಡನ್ನು ನೀಡಲು ನಿರಾಕರಿಸಿದ್ದಾರೆ. ಆತನಿಗೆ ಜಾತಿ ನಿಂದನೆಗೈದು ಥಳಿಸಿದ್ದಾರೆ. ತನ್ನ ಅವರಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಾನೆ. ಆದರೆ ಅವನು ಈ ಬಗ್ಗೆ ಮನೆಯಲ್ಲಿ ಹೇಳಿರಲಿಲ್ಲ. ಅದೇ ದಿನ ಲಕ್ಕಿಯನ್ನು ಮತ್ತೆ ಯುವಕರ ಗುಂಪು ಅಡ್ಡಗಟ್ಟಿ ಮತ್ತೊಮ್ಮೆ ಥಳಿಸಿದ್ದಾರೆ. ಆ ಬಳಿಕ ಘಟನೆಯ ಬಗ್ಗೆ ನಮ್ಮೊಂದಿಗೆ ಆತ ಹೇಳಿಕೊಂಡಿದ್ದಾನೆ. ನಾವು ಆ ವಿಷಯದ ಬಗ್ಗೆ ಆತಂಕಿತರಾಗಿರುವಾಗಲೇ ಮತ್ತೆ ಮನೆಯ ಬಳಿಗೆ ಬಂದ ಗುಂಪು, ನನ್ನ ಪುತ್ರನನ್ನು ಮನೆಯಿಂದ ಹೊರಗೆ ಎಳೆದೊಯ್ದು ಥಳಿಸಿದೆ. ಆದರೆ ನೆರೆಹೊರೆಯವರು ನಮ್ಮ ನೆರವಿಗೆ ಬಂದಿದ್ದರಿಂದ ಆ ಯುವಕರ ಗುಂಪು ಅಲ್ಲಿಂದ ಪರಾರಿಯಾಗಿದೆ. ಮರುದಿನ ತನ್ನ ಸಹೋದರಿಯನ್ನು ಶಾಲೆಯಿಂದ ಮರಳಿ ಕರೆ ತರಲು ಟಕ್ರೋಹಿಗೆ ತೆರಳಿದ್ದ ನನ್ನ ಪುತ್ರನನ್ನು ಆ ಯುವಕರ ಗುಂಪು ಮತ್ತೆ ಕನೌಸಾದಲ್ಲಿ ಅಡ್ಡಗಟ್ಟಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಥಳಿಸಿದ್ದಾರೆ. ನಂತರ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಘಟನೆಯಿಂದ ಭಯಗೊಂಡು ಆತ ಮನೆಯಿಂದ ಹೊರಗೆ ಬಂದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಯುವಕನ ತಂದೆ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಉತ್ತರ ವಲಯದ ಉಪ ಪೊಲೀಸ್ ಆಯುಕ್ತ ಖಾಸಿಂ ಅಬಿದಿ, ಕ್ರಿಕೆಟ್‌ ಪಂದ್ಯದ ವೇಳೆ ಗಲಾಟೆ ನಡೆದಿದೆ. ಈ ಕುರಿತು ಗಾಝಿಪುರ ಎಸಿಪಿ ಅವರ ನೇತೃತ್ವದ ತಂಡ ತನಿಖೆಯನ್ನು ನಡೆಸುತ್ತಿದೆ, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಭಾರತ್‌ ಜೋಡೋ ನ್ಯಾಯ ಯಾತ್ರೆ: ನಾಗಾಲ್ಯಾಂಡ್ ಜನತೆಗೆ ಮೋದಿ ನೀಡಿದ್ದು ಸುಳ್ಳು ಭರವಸೆ; ರಾಹುಲ್‌ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್...

0
"ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ. ಕಾವಲುಗಾರ ವಾಹನ ಹೀಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರೂ ಜಿಹಾದಿಗಳು ವಾಹನವನ್ನು ಹೀಗೆ ಕಳುಹಿಸಲು ಹಠ ಹಿಡಿದಿದ್ದಾರೆ. ಇದು ಯಾವ...