Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌: ಮೋದಿಯಿಂದಾಗಿ ಕೊರೊನಾ ಸಮಯದಲ್ಲಿ ಪ್ರತಿ ಮನೆಗೆ ಲಕ್ಷ್ಮಿ ದೇವಿ ಬಂದಿದ್ದರು ಎಂಬ ಅಮಿತ್ ಶಾ...

ಫ್ಯಾಕ್ಟ್‌ಚೆಕ್‌: ಮೋದಿಯಿಂದಾಗಿ ಕೊರೊನಾ ಸಮಯದಲ್ಲಿ ಪ್ರತಿ ಮನೆಗೆ ಲಕ್ಷ್ಮಿ ದೇವಿ ಬಂದಿದ್ದರು ಎಂಬ ಅಮಿತ್ ಶಾ ಹೇಳಿಕೆ ನಿಜವೇ?

- Advertisement -
- Advertisement -

ಬುಧವಾರದಂದು ಉತ್ತರ ಪ್ರದೇಶದ ಅಟ್ರೌಲಿ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ, “ಕೋವಿಡ್ ಸಾಂಕ್ರಾಮಿಕದ ಕಳೆದ ಎರಡು ವರ್ಷಗಳಲ್ಲಿ ಕಮಲದ ಮೇಲೆ ಕೂತ ಲಕ್ಷ್ಮಿ ದೇವಿ ಪ್ರತಿ ಮನೆಗೂ ಬಂದಿದ್ದಾಳೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ” ಎಂದು ಹೇಳಿದ್ದಾರೆ.

ಭಾರತೀಯ ಪುರಾಣ ಕತೆಗಳ ಪ್ರಕಾರ ಲಕ್ಷ್ಮೀ ದೇವಿ ಸಂಪತ್ತಿನ ದೇವತೆಯಾಗಿದ್ದಾಳೆ. ಅಮಿತ್‌ ಶಾ ಅವರ ಈ ಹೇಳಿಕೆಯನ್ನು ಅರ್ಥ ಮಾಡಿಕೊಂಡರೆ, ಅವರು ಹೇಳಿದ್ದು, “ಕೊರೊನಾ ಸಮಯದಲ್ಲಿ ಪ್ರತಿ ಭಾರತೀಯರ ಮನೆಯಲ್ಲಿ ಸಂಪತ್ತು ತುಳುಕುತ್ತಿತ್ತು. ಆರ್ಥಿಕ ತೊಂದರೆ ದೇಶದ ಯಾವುದೇ ಪ್ರಜೆಯ ಮನೆಯಲ್ಲಿ ಇರಲಿಲ್ಲ. ಇದೆಲ್ಲವೂ ಸಾಧ್ಯವಾಗಿದ್ದು ಪ್ರಧಾನಿ ಮೋದಿಯಿಂದಾಗಿ” ಎಂದಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಜಿಲ್ಲಾಧಿಕಾರಿ ಏಕೆ ಮೇಕಪ್‌ ಮಾಡಿಲ್ಲ?’- ಮನಕಲಕುವ ಕತೆ ಹಿಂದಿನ ವಾಸ್ತವವೇನು?

ಫ್ಯಾಕ್ಟ್‌ಚೆಕ್

ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದು ನಿಜವೇ ಅಥವಾ ಸುಳ್ಳೆ ಎಂದು ಚರ್ಚೆಗಳಾಗುತ್ತಿದೆ. ಸಚಿವರ ಈ ಹೇಳಿಕೆಯ ಬಗ್ಗೆ ‘ನಾನುಗೌರಿ.ಕಾಂ’ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. ಅವುಗಳನ್ನು ಒಂದೊಂದಾಗಿ ನೋಡೋಣ.

ದೇಶದ ಜಿಡಿಪಿ

ಜಿಡಿಪಿ ಎಂದರೆ Gross Domestic Product ಅರ್ಥಾತ್ ಒಟ್ಟು ದೇಶೀಯ ಉತ್ಪನ್ನ. ಅಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದೊಳಗೆ ಉತ್ಪಾದನೆಯಾಗುವ ಸರಕು ಮತ್ತು ಸೇವೆಗಳ ಒಟ್ಟು ಮಾರುಕಟ್ಟೆ ಮೌಲ್ಯವಾಗಿದೆ. ಇದರೊಂದಿಗೆ ದೇಶದಲ್ಲಿ ಜಿಡಿಪಿ ಇಳಿಕೆಯಾಗಿದೆ ಎಂದರೆ ದೇಶದಲ್ಲಿ ಉತ್ಪಾದನೆಗಳು ಕಡಿಮೆಯಾಗಿದೆ ಎಂದರ್ಥ.

ಕೊರೊನಾ ಸೋಂಕು 2019ರಲ್ಲಿ ಚೀನಾದಲ್ಲಿ ಪತ್ತೆಯಾದರೂ, 2020ರ ಹೊತ್ತಿಗೆ ಭಾರತದಲ್ಲಿ ಎಲ್ಲಾ ಕಡೆಗೆ ಹರಡಲು ಪ್ರಾರಂಭವಾಗಿತ್ತು. 2020 ರಲ್ಲಿ ದೇಶದ ಜಿಡಿಪಿ -7.252 ಗೆ ಇಳಿದಿತ್ತು. (ಸರಿಯಾಗಿ ಗಮನಿಸಿ ಅದು ಮೈನಸ್‌ 7.252)

ಕೊರೊನಾ ಸಮಯದಲ್ಲಿ ಲಾಕ್‌ಡೌನ್‌‌ ಇದ್ದ ಕಾರಣ ವಿಶ್ವದ ಇತರ ದೇಶಗಳಲ್ಲೂ ಜಿಡಿಪಿ ಕುಸಿತ ಕಂಡಿತ್ತು. ಹೀಗೆಯೇ ಭಾರತದಲ್ಲೂ ಜಿಡಿಪಿ ಕುಸಿತ ಆಗಿತ್ತು ಎಂಬ ವಾದಕ್ಕೆ ಬರುವುದಾದರೆ ಅದು 100% ಸರಿಯಾದ ವಾದವಲ್ಲ. ಯಾಕೆಂದರೆ ಕಳೆದ ಹತ್ತು ವರ್ಷಗಳ ಜಿಡಿಪಿಯನ್ನು ಲೆಕ್ಕಕ್ಕೆ ತೆಗೆದುಕೊಂಡದರೆ ಭಾರತದ ಜಿಡಿಪಿ ಏರುತ್ತಲೇ ಇತ್ತು. ಭಾರತದ ಜಿಡಿಪಿ ನಿರಂತರವಾಗಿ ಇಳಿಕೆ ಪ್ರಾರಂಭವಾಗಿದ್ದು 2016ರ ನಂತರವಾಗಿದೆ.

2010 ರಲ್ಲಿ 8.498 ಇದ್ದ ದೇಶದ ಜಿಡಿಪಿ 2019 ರ ಹೊತ್ತಿಗೆ 4.042 ತಲುಪಿತ್ತು. ಅದೇ ರೀತಿ 2020 ರಲ್ಲಿ ದೇಶದ ಜಿಡಿಪಿ ‘ಮೈನಸ್‌ 7.252ತಲುಪಿತ್ತು. ಈ ಮಾದರಿಯನ್ನು ನೋಡುವುದಾದರೆ ದೇಶದಲ್ಲಿ ಕೊರೊನಾ ಹರಡದಿದ್ದರೂ ದೇಶದ ಜಿಡಿಪಿ ಮೇಲಕ್ಕೆ ಏರುತ್ತಿರಲಿಲ್ಲ. ಆರ್ಥಿಕ ತಜ್ಞರು, ‘ನೋಟ್ ಬ್ಯಾನ್, ಅವೈಜ್ಞಾನಿಕ ಜಿಎಸ್‌ಟಿ ಜಾರಿ ಮತ್ತು ಮೋದಿ ಸರ್ಕಾರದ ಇತರ ಯೋಜನೆಗಳು ಇದಕ್ಕೆ ಕಾರಣ’ ಎಂದು ಹೇಳುತ್ತಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ವಿದ್ಯಾರ್ಥಿನಿ ಸಾವಿನ ಬಗ್ಗೆ ಸುಳ್ಳು ಬರೆದು ಕೋಮುದ್ವೇಷ ಹರಡುತ್ತಿರುವ ‘ಪೋಸ್ಟ್‌ ಕಾರ್ಡ್’!

ಇಷ್ಟೇ ಅಲ್ಲದೆ, ದೇಶದಲ್ಲಿ ಕೊರೊನಾ ಲಾಕ್‌ಡೌನ್‌ ಪ್ರಾರಂಭವಾಗಿದ್ದು 2020 ರ ಮಾರ್ಚ್‌ ನಂತರವಾಗಿದೆ. ಆದರೆ ದೇಶದ ಜಿಡಿಪಿ 2018-19 ಮತ್ತು  2019-20 ರ ಆರ್ಥಿಕ ವರ್ಷದ ಎಂಟು ತ್ರೈಮಾಸಿದಲ್ಲೂ ಇಳಿಕೆಯಲ್ಲಿತ್ತು. ಕೊರೊನಾ ಲಾಕ್‌ಡೌನ್‌‌ನಿಂದಾಗಿ ದೇಶದ ಜಿಡಿಪಿ ಮೇಲೆ ಪರಿಣಾಮ ಬೀರಿದ್ದು 2020-21 ರ ಮೇಲೆಯಾಗಿದೆ. 2020-21 ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ -23.9 (ಸರಿಯಾಗಿ ಗಮನಿಸಿ ಅದು ‘ಮೈನಸ್‌23.9ಆಗಿದೆ). ಅದರ ನಂತರ ಲಾಕ್‌ಡೌನ್‌ ಸಡಿಲಿಕೆಯ ನಂತರ ದೇಶದ ಜಿಡಿಪಿ ಮೇಲೇರುತ್ತಾ ಬಂದಿದೆ.


source: tradingeconomics.com

ತಲಾ ಆದಾಯ

ತಲಾ ಆದಾಯ ಎಂದರೆ ದೇಶದ ಪ್ರತಿ ವ್ಯಕ್ತಿ ಗಳಿಸಿದ ಸರಾಸರಿ ಆದಾಯ. ತಲಾ ಆದಾಯವನ್ನು ಒಂದು ದೇಶದ ಜನಸಂಖ್ಯೆಯ ಜೀವನ ಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಬಳಸಬಹುದು.

ದೇಶದ ತಲಾ ಆದಾಯ 2012 ರಿಂದ ನಿತಂತರ ಏರುಗತಿಯಲ್ಲೇ ಇತ್ತು. ಆದರೆ 2020 ರಲ್ಲಿ ದೇಶದ ತಲಾ ಆದಾಯ ಪ್ರಧಾನಿ ಮೋದಿ ಇದ್ದಾಗಿಯೂ ಇಳಿದಿದೆ.


source: tradingeconomics.com

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಈ ಯೋಗಿ ಹಿಮಾಲಯದವರೂ ಅಲ್ಲ, ಅವರ ಮೈಮೇಲೆ ಇರುವುದು ಹಿಮವೂ ಅಲ್ಲ!

ಭಾರತದ ಸಂಪತ್ತು

ಭಾರತವು “ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅತ್ಯಂತ ಅಸಮಾನ ದೇಶವಾಗಿದೆ” ಎಂದು ಇತ್ತೀಚಿನ “ವಿಶ್ವ ಅಸಮಾನತೆ ವರದಿ-2022’’ ಹೇಳಿದೆ. 2021 ರಲ್ಲಿ ದೇಶದ 57% ಒಟ್ಟು ರಾಷ್ಟ್ರೀಯ ಆದಾಯದ ಪಾಲು ಅಗ್ರ 10% ಜನರು ಹೊಂದಿದ್ದಾರೆ ಎಂದು ವರದಿಯು ಹೇಳಿದೆ.

ಭಾರತೀಯ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯ 2,04,200 ಆಗಿದೆ. ಕೆಳ ಮಟ್ಟದ 50% ಜನರು ವಾರ್ಷಿಕವಾಗಿ ₹53,610 ಗಳಿಸಿದರೆ, ಅಗ್ರ 10% ಜನರು ಅದಕ್ಕಿಂದ 20 ಪಟ್ಟು (₹11,66,520) ಹೆಚ್ಚು ಗಳಿಸುತ್ತಾರೆ ಎಂದು ವರದಿಯು ಉಲ್ಲೇಖಿಸಿದೆ. ವಿಶ್ವ ಅಸಮಾನತೆಯ ವರದಿ-2022 ರ ಪ್ರಕಾರ, “2021 ರಲ್ಲಿ ದೇಶದ ಒಟ್ಟು ರಾಷ್ಟ್ರೀಯ ಆದಾಯದ 22% ಸಂಪತ್ತು ಕೇವಲ ಅಗ್ರ 1% ಜನರ ಬಳಿ ಶೇಖರಣೆಗೊಂಡಿದ್ದು, ಈ ಮೂಲಕ ಭಾರತವು ಅತ್ಯಂತ ಅಸಮಾನ ದೇಶವಾಗಿ ಹೊರಹೊಮ್ಮಿದೆ” ಎಂದು ಉಲ್ಲೇಖಿಸಿದೆ. ಈ ವರ್ಷದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಆಗಿದ್ದಾರೆ.

ಅವೈಜ್ಞಾನಿಕ ಕೊರೊನಾ ಲಾಕ್‌ಡೌನ್‌ನಲ್ಲಿ ಕಾರ್ಮಿಕ ಮಹಾವಲಸೆ

ಪ್ರಧಾನಿ ಮೋದಿಯವರ ಅವೈಜ್ಞಾನಿಕ ಮತ್ತು ಅತ್ಯಂತ ತುರ್ತಿನ ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ದೇಶದ ಸಂಪತ್ತನ್ನು ಸೃಷ್ಟಿಸುವ ಕೋಟ್ಯಾಂತರ ಕಾರ್ಮಿಕರು ಸಂಕಷ್ಟಕ್ಕೆ ಒಳಗಾದರು. ಲಕ್ಷಾಂತರ ಕಾರ್ಮಿಕರು ಹೊಟ್ಟೆಗೆ ಏನೂ ಇಲ್ಲದೆ ಸಾವಿರಾರು ಕಿಲೊ ಮೀಟರ್‌ ದೂರದ ತಮ್ಮ ಮನೆಯನ್ನು ಅರಸುತ್ತಾ ಬರಿಗಾಲಲ್ಲಿ ನಡೆಯುತ್ತಾ ಹೊದರು. ಈ ವೇಳೆ ಸಾವಿರಾರು ಜನರು ದಾರಿ ಮಧ್ಯೆ ಅಸುನೀಗಿದರು. ಹಲವಾರು ದಾರುಣ ಘಟನೆಗಳಿಗೂ ದೇಶ ಸಾಕ್ಷಿಯಾಯಿತು. ಈ ವೇಳೆ ಕೂಡಾ ಮೋದಿ ದೇಶದ ಪ್ರಧಾನಿಯಾಗಿದ್ದರು.

ಆರೋಗ್ಯ ತಜ್ಞರ ಎಚ್ಚರಿಕೆಯ ಹೊರಾಗಿಯು ಆರೋಗ್ಯ ವ್ಯವಸ್ಥೆ ಸರಿ ಮಾಡದ ಪ್ರಧಾನಿ

ಕೊರೊನಾ ಮೊದಲ ಅಲೆಯ ಸಮಯದಲ್ಲಿ ದೇಶದ ಜನತೆ ಕಷ್ಟಪಟ್ಟರೂ, ಎರಡನೇ ಅಲೆ ಬರಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದರೂ, ಪ್ರಧಾನಿ ಮೋದಿ ಅದರ ಬಗ್ಗೆ ಗಮನಹರಿಸಿರಲಿಲ್ಲ. 2021ರ ಜನವರಿ 28 ರಂದು ವರ್ಲ್ಡ್ ಎಕನಾಮಿಕ್ ಫೋರಮ್‌ನ ದಾವೋಸ್ ಸಂವಾದವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ‘ಕೊರೊನಾ ವೈರಸ್ ಅನ್ನು ಯಶಸ್ವಿಯಾಗಿ ನಿಯಂತ್ರಿಸಿದ ದೇಶಗಳಲ್ಲಿ ಭಾರತವೂ ಒಂದು’ ಎಂದು ಘೋಷಿಸಿದ್ದರು.

ಇದರ ನಂತರ ದೇಶದಲ್ಲಿ ಎರಡನೇ ಅಲೆ ಪ್ರಾರಂಭವಾಗಿ ದೇಶದ ಜನತೆ ಆಮ್ಲಜನಕವಿಲ್ಲದೆ ಕಷ್ಟಕ್ಕೆ ಒಳಗಾಗಿದ್ದು. ಕೋಟ್ಯಾಂತರ ಭಾರತೀಯರು ಆಮ್ಲಜನಕವಿಲ್ಲದೆ, ಕೊರೊನಾ ಚಿಕಿತ್ಸೆಗೆ ದುಡ್ಡಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ದೇಶದ ಸ್ಮಶಾನಗಳು ತುಂಬಿ ಜನರು ಹೆಣವನ್ನು ಸುಡಲೂ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!

ಹೆಚ್ಚಿದ ಸಾಲ

ಕೊರೊನಾದ ಎರಡು ವರ್ಷಗಳಲ್ಲಿ ಪ್ರತಿ ಭಾರತೀಯನ ಮೇಲಿನ ಸಾಲಗಳು ಹೆಚ್ಚಾಗಿದೆ. ಭಾರತದ ಸಾಲದ ಹೊರೆಯು 2021 ರ ಹಣಕಾಸು ವರ್ಷಕ್ಕೆ ಒಟ್ಟು GDP ಗಿಂತಲೂ 60.5% ಕ್ಕೆ ಜಿಗಿದಿದೆ.

ಉದ್ಯೋಗ ನಷ್ಟ

CMIE 2020 ವರದಿಯ ಪ್ರಕಾರ, ಜುಲೈ 2020 ರಲ್ಲಿ ರಾಷ್ಟ್ರೀಯ ನಿರುದ್ಯೋಗ ದರವು 7.4% ಕ್ಕೆ ಇಳಿದಿತ್ತು ಮತ್ತು ಏಪ್ರಿಲ್ 2020 ರಲ್ಲಿ ಗರಿಷ್ಠ 23.5% ವರೆಗೂ ತಲುಪಿತ್ತು. ನವೆಂಬರ್ 2021 ರಲ್ಲಿ ಕಾರ್ಮಿಕ ವರ್ಗದ ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು CMIE ವರದಿ ಮಾಡಿತ್ತು.  ಸುಮಾರು 60 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಈ ವರದಿ ಹೇಳಿತ್ತು.

ಬೆಲೆ ಏರಿಕೆ

ಕೊರೊನಾದಿಂದ ದೇಶದ ಜನರು ಉದ್ಯೋಗವಿಲ್ಲದೆ ಕಷ್ಟ ಪಡುತ್ತಿದ್ದಾಗ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನಗಳ ಬೆಲೆಗಳನ್ನು ಏರಿಸುತ್ತಲೇ ಹೋಗಿದೆ. ದೇಶದ ಇತಿಹಾಸದಲ್ಲೇ ಇಂದನಕ್ಕೆ ಅತ್ಯಂತ ಹೆಚ್ಚು ಬೆಲೆ ಕೊರೊನಾದ ಈ ಎರಡು ವರ್ಷಗಳಲ್ಲಿ ದಾಖಲಾಯಿತು. ಇಷ್ಟೇ ಅಲ್ಲದೆ, ಅಡುಗೆ ಎಣ್ಣೆ ಸೇರಿದಂತೆ ದಿನ ಬಳಕೆ ವಸ್ತುಗಳ ಮೇಲೆ ಕೂಡಾ ಬೆಲೆ ಏರಿಕೆ ಆಗಿತ್ತು. ಜನರು ಬೆಲೆ ಏರಿಕೆಯಿಂದಾಗಿ ಕಷ್ಟ ಪಡುವಂತಾಯಿತು.

ಈ ಎಲ್ಲಾ ಆಧಾರಗಳನ್ನು ಇಟ್ಟುಕೊಂಡು ಹೇಳಬಹುದಾದರೆ, ‘ಮೋದಿಯಿಂದಾಗಿ ಕೊರೊನಾ ಸಮಯದಲ್ಲೂ ದೇಶದ ಪ್ರತಿ ಮನೆಯ ಸಂಪತ್ತು ತುಂಬಿತ್ತು’ ಎಂಬ ಅಮಿತ್‌ ಶಾ ಅವರ ಹೇಳಿಕೆಯು ಸುಳ್ಳಾಗಿದೆ. ಇದಕ್ಕೆ ಯಾವುದೆ ಅಧೀಕೃತ ಆಧಾರಗಳು ಇಲ್ಲ. ಇದೊಂದು ರಾಜಕೀಯ ಗಿಮಿಕ್ಕಿನ ಭಾಷಣ ಮಾತ್ರವೇ ಆಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನಾಟಕೀಯ ವಿಡಿಯೋಗಳ ಬಗ್ಗೆ ಗಮನವಿರಲಿ.. ಹಂಚುವ ಮುನ್ನ ಪರಿಶೀಲಿಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...