Homeಮುಖಪುಟ1% ಜನರ ಬಳಿ ದೇಶದ 22% ಸಂಪತ್ತು: ‘ಭಾರತ ಅತೀ ಶ್ರೀಮಂತರನ್ನು ಹೊಂದಿರುವ ಬಡ &...

1% ಜನರ ಬಳಿ ದೇಶದ 22% ಸಂಪತ್ತು: ‘ಭಾರತ ಅತೀ ಶ್ರೀಮಂತರನ್ನು ಹೊಂದಿರುವ ಬಡ & ಅತ್ಯಂತ ಅಸಮಾನ ದೇಶ’

ಜನಸಂಖ್ಯೆಯ ಅಗ್ರ 10% ಜನರು ದೇಶದ ಒಟ್ಟು ಆದಾಯದ 57% ಅನ್ನು ಹೊಂದಿದ್ದರೆ, ಕೆಳ ಮಟ್ಟದ 50% ಜನರ ಪಾಲು 13% ಕ್ಕೆ ಇಳಿದಿದೆ.

- Advertisement -

ಭಾರತವು “ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅತ್ಯಂತ ಅಸಮಾನ ದೇಶವಾಗಿದೆ” ಎಂದು ಇತ್ತೀಚಿನ “ವಿಶ್ವ ಅಸಮಾನತೆ ವರದಿ-2022’’ ಹೇಳಿದೆ. 2021 ರಲ್ಲಿ ದೇಶದ 57% ಒಟ್ಟು ರಾಷ್ಟ್ರೀಯ ಆದಾಯದ ಪಾಲು ಅಗ್ರ 10% ಜನರು ಹೊಂದಿದ್ದಾರೆ ಎಂದು ವರದಿಯು ಹೇಳಿದೆ.

ಭಾರತೀಯ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯ 2,04,200 ಆಗಿದೆ. ಕೆಳ ಮಟ್ಟದ 50% ಜನರು ವಾರ್ಷಿಕವಾಗಿ ₹53,610 ಗಳಿಸಿದರೆ, ಅಗ್ರ 10% ಜನರು ಅದಕ್ಕಿಂದ 20 ಪಟ್ಟು (₹11,66,520) ಹೆಚ್ಚು ಗಳಿಸುತ್ತಾರೆ ಎಂದು ವರದಿಯು ಉಲ್ಲೇಖಿಸಿದೆ. ವಿಶ್ವ ಅಸಮಾನತೆಯ ವರದಿ-2022 ರ ಪ್ರಕಾರ, “2021 ರಲ್ಲಿ ದೇಶದ ಒಟ್ಟು ರಾಷ್ಟ್ರೀಯ ಆದಾಯದ 22% ಸಂಪತ್ತು ಕೇವಲ ಅಗ್ರ 1% ಜನರ ಬಳಿ ಶೇಖರಣೆಗೊಂಡಿದ್ದು, ಈ ಮೂಲಕ ಭಾರತವು ಅತ್ಯಂತ ಅಸಮಾನ ದೇಶವಾಗಿ ಹೊರಹೊಮ್ಮಿದೆ” ಎಂದು ಉಲ್ಲೇಖಿಸಿದೆ.

ಜನಸಂಖ್ಯೆಯ ಅಗ್ರ 10% ಜನರು ದೇಶದ ಒಟ್ಟು ಆದಾಯದ 57% ಅನ್ನು ಹೊಂದಿದ್ದರೆ, ಕೆಳ ಮಟ್ಟದ 50% ಜನರ ಪಾಲು 13% ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ. ದೇಶದ ಸರಾಸರಿ ಕುಟುಂಬವೊಂದರ ಸಂಪತ್ತು ₹9,83,010 ರಷ್ಟಿದ್ದರೆ, ಕೆಳಗಿನ 50 ಪ್ರತಿಶತದಷ್ಟು ಜನರು ಬಹುತೇಕ ಏನನ್ನೂ ಹೊಂದಿಲ್ಲ, ರೂ 66,280 ರ ಸರಾಸರಿ ಆದಾಯ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಭಾರತದ ಆರ್ಥಿಕತೆ – ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ

ಈ ವರದಿಯು ದೇಶದ ಲಿಂಗ ಅಸಮಾನತೆಯನ್ನು ಎತ್ತಿ ತೋರಿಸಿದ್ದು, ದೇಶದ ಆದಾಯದಲ್ಲಿ ಮಹಿಳಾ ಕಾರ್ಮಿಕರ ಆದಾಯದ ಪಾಲು 18% ಎಂದು ಉಲ್ಲೇಖಿಸಿದ್ದು, ಇದು ಪ್ರಪಂಚದಲ್ಲೇ ಅತ್ಯಂತ ಕಡಿಮೆ ಎಂದು ವರದಿ ತಿಳಿಸಿದೆ. ಆದರೆ ಮಧ್ಯಪ್ರಾಚ್ಯ ದೇಶಕ್ಕಿಂತ ಹೆಚ್ಚಿದ್ದು, ಮಧ್ಯಪ್ರಾಚ್ಯದಲ್ಲಿ ಮಹಿಳಾ ಕಾರ್ಮಿರ ಆದಾಯದ ಪಾಲು 15% ಎಂದು ವರದಿ ತಿಳಿಸಿದೆ.

ನೀತಿ ಆಯೋಗವು ಇತ್ತೀಚೆಗೆ ಸಿದ್ಧಪಡಿಸಿದ ಬಹು ಆಯಾಮದ ಬಡತನ ಸೂಚ್ಯಂಕ (MPI) ಪ್ರಕಾರ, ಭಾರತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಬಹು ಆಯಾಮದ ಬಡವರಾಗಿದ್ದರು. ಬಹುಆಯಾಮದ ಬಡವರಾಗಿರುವ ಬಿಹಾರವು ಅತಿ ಹೆಚ್ಚು ಜನರನ್ನು (ರಾಜ್ಯದ ಜನಸಂಖ್ಯೆಯ ಶೇಕಡಾ 51.91) ಹೊಂದಿದೆ, ನಂತರ ಜಾರ್ಖಂಡ್ ಶೇಕಡಾ 42.16 ಮತ್ತು ಉತ್ತರ ಪ್ರದೇಶವು ಶೇಕಡಾ 37.79 ರಷ್ಟಿದೆ.

“ಅಸಮಾನತೆಯಲ್ಲಿ ವಿಶ್ವದ ಎಲ್ಲಾ ದೇಶಗಳು ಒಂದೇ ರೀತಿಯಲ್ಲಿ ಏರಿಕೆಯಾಗಿಲ್ಲ. ಅಮೆರಿಕಾ, ರಷ್ಯಾ ಮತ್ತು ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಅಸಮಾನತೆ ತೀವ್ರವಾಗಿ ಹೆಚ್ಚಗಿದ್ದರೆ, ಚೀನಾ ಮತ್ತು ಯುರೋಪಿಯನ್ ದೇಶಗಳಲ್ಲಿ ತುಲನಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿ ಏರಿಕೆಗಳನ್ನು ಅನುಭವಿದೆ” ಎಂದು ವರದಿಯು ಹೇಳಿದೆ.

ಅನಿಯಂತ್ರಣ ಮತ್ತು ಉದಾರೀಕರಣದಿಂದಾಗಿ 1980 ರ ದಶಕದಿಂದಲೂ ವಿಶ್ವದ ಅನೇಕ ದೇಶದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆಗಳು ಹೆಚ್ಚುತ್ತಿದೆ ಎಂದು ವರದಿ ಕಂಡುಕೊಂಡಿದೆ. ಮೂರು ದಶಕಗಳ ವ್ಯಾಪಾರ ಮತ್ತು ಆರ್ಥಿಕ ಜಾಗತೀಕರಣದ ನಂತರ 2021 ರಲ್ಲಿ, ಜಾಗತಿಕ ಅಸಮಾನತೆಗಳು ಅತ್ಯಂತ ಸ್ಪಷ್ಟವಾಗಿವೆ ಎಂದು ವರದಿಯು ಗಮನ ಸೆಳೆದಿದೆ.

ವಿಶ್ವ ಅಸಮಾನತೆಯ ಪ್ರಯೋಗಾಲಯದ ಸಹ-ನಿರ್ದೇಶಕ ಲ್ಯೂಕಾಸ್ ಚಾನ್ಸೆಲ್ ಅವರು ವರದಿಯನ್ನು ರಚಿಸಿದ್ದು, ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಸೇರಿದಂತೆ ಹಲವಾರು ತಜ್ಞರು ಸಂಯೋಜಿಸಿದ್ದಾರೆ.

ಇದನ್ನೂ ಓದಿ:’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial