HomeದಿಟನಾಗರFact Check: 'ದಿಲ್ಲಿ ಚಲೋ' ಪ್ರತಿಭಟನಾ ನಿರತ ರೈತರು ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ರಾ?

Fact Check: ‘ದಿಲ್ಲಿ ಚಲೋ’ ಪ್ರತಿಭಟನಾ ನಿರತ ರೈತರು ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ರಾ?

- Advertisement -
- Advertisement -

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಹಮ್ಮಿಕೊಂಡಿರುವ ‘ದಿಲ್ಲಿ ಚಲೋ’ ಹೋರಾಟ ಮುಂದುವರೆಯುತ್ತಿದೆ. ಈ ನಡುವೆ ರೈತರ ಟ್ರ್ಯಾಕ್ಟರ್‌ ಚಕ್ರಕ್ಕೆ ಪೊಲೀಸ್ ಸಿಬ್ಬಂದಿಯೊಬ್ಬರು ಸಿಲುಕಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಬಳಕೆದಾರರು ” ದೆಹಲಿಯ ಆಸುಪಾಸಿನಲ್ಲಿ ಹೋರಾಟ ನಿರತ ರೈತರು ಪೊಲೀಸ್ ಸಿಬ್ಬಂದಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾರೆ” ಎಂಬರ್ಥದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

‘Anjna'(@SaffronQueen_) ಎಂಬ ಎಕ್ಸ್ ಬಳೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ” ರೈತರು ಎನ್ನಲಾದವರು ಪೊಲೀಸ್ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾರೆ. ಇದು ಯಾವ ರೀತಿಯ ಶಾಂತಿಯುತ ಹೋರಾಟ?. ಇವರು ನನ್ನ ರೈತರಲ್ಲ” ಎಂದು ಬರೆದುಕೊಂಡಿದ್ದಾರೆ.


ಪೋಸ್ಟ್ ಲಿಂಕ್ ಇಲ್ಲಿದೆ 

‘Sunanda Roy'(@SaffronSunanda)ಎಂಬ ಮತ್ತೊಬ್ಬರು ಎಕ್ಸ್ ಬಳಕೆದಾರರು ಕೂಡ ಈ ವಿಡಿಯೋ ಹಂಚಿಕೊಂಡಿದ್ದು, “ನಿಜವಾದ ರೈತರು ಯಾವತ್ತೂ ಪೋಲೀಸರನ್ನು ಅಥವಾ ಇತರ ಮನುಷ್ಯರನ್ನು ಕೊಲ್ಲುವುದಿಲ್ಲ. ಸೋ ಕಾಲ್ಡ್ ರೈತರು ಪೊಲೀಸರ ಮೇಲೆ ಟ್ರ್ಯಾಕ್ಟರ್‌ ಹತ್ತಿಸಿದ್ದಾರೆ. ಇವರು ರೈತರ ಸೋಗಿನಲ್ಲಿರುವ ಖಲಿಸ್ತಾನಿ ಭಯೋತ್ಪಾದಕರು. ಕೇಂದ್ರ ಗೃಹ ಸಚಿವಾಲಯ ದಯವಿಟ್ಟು ಈ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ” ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಮೇಲಿನ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ಮಾಡಿದೆ. ಈ ವೇಳೆ ಇದು ಆಗಸ್ಟ್ 2023 ರಲ್ಲಿ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಲಾಂಗೋವಾಲ್‌ನಲ್ಲಿ ನಡೆದ ರೈತ ಹೋರಾಟದ ವೇಳೆ ನಡೆದ ದುರ್ಘಟನೆಯೊಂದರ ದೃಶ್ಯ ಎಂದು ತಿಳಿದು ಬಂದಿದೆ.

ರೈತರು ಬೆಳೆ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಸಂಭವಿಸಿದೆ. ಆಗ ಓರ್ವ ರೈತ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಟ್ರಾಲಿಯ ಚಕ್ರಕ್ಕೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು. ಓರ್ವ ಪೊಲೀಸ್ ಸಿಬ್ಬಂದಿ ಘಟನೆಯಲ್ಲಿ ಗಾಯಗೊಂಡಿದ್ದರು.

‘Gagandeep Singh'(@Gagan4344)ಎಂಬ ಪಂಜಾಬ್‌ನ ಪತ್ರಕರ್ತರೊಬ್ಬರು ಆಗಸ್ಟ್ 21, 2023ರಂದು ಈ ವಿಡಿಯೋ ಹಂಚಿಕೊಂಡಿದ್ದು, “ಪ್ರತಿಭಟನೆಯಲ್ಲಿ ಭಾಗವಹಿಸಲು ಚಂಡೀಗಢಕ್ಕೆ ತೆರಳುತ್ತಿದ್ದ ಸಂಗ್ರೂರ್‌ನ ಲಾಂಗೋವಾಲ್‌ನಲ್ಲಿ ರೈತರು ಮತ್ತು ಪಂಜಾಬ್ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಘರ್ಷಣೆಯ ಸಮಯದಲ್ಲಿ, ಒಬ್ಬ ರೈತ ಟ್ರ್ಯಾಕ್ಟರ್ ಟ್ರಾಲಿ ಟೈರ್‌ಗೆ ಸಿಲುಕಿ ತನ್ನ ಕಾಲು ಕಳೆದುಕೊಂಡಿದ್ದು ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ. ಈ ವೇಳೆ ಓರ್ವ ಪೊಲೀಸ್ ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ಬರೆದುಕೊಂಡಿದ್ದರು.

ಸಂಗ್ರೂರ್ ಪೊಲೀಸರು ಕೂಡ 21 ಆಗಸ್ಟ್ 2023ರಂದು ಈ ವಿಡಿಯೋ ಹಂಚಿಕೊಂಡಿದ್ದರು. ಇಂದು ಲಾಂಗೋವಾಲ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಒಬ್ಬರು ಮೃತಪಟ್ಟಿರುವುದು ದುರೃಷ್ಟಕರ ಸಂಗತಿ. ಸಾಕ್ಷಿಗಳು ಮತ್ತು ವಿಡಿಯೋಗಳ ಪ್ರಕಾರ, ಪ್ರತಿಭಟನಾಕಾರರ ಟ್ರಾಕ್ಟರ್ ಟ್ರಾಲಿ ಮೃತ ರೈತ ಮೇಲೆ ಹರಿದಿದೆ. ಘಟನೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ಬರೆದುಕೊಂಡಿದ್ದರು.

ನಾವು ನಡೆಸಿದ ಪರಿಶೀಲನೆಯಲ್ಲಿ ಇದು 2023ರಲ್ಲಿ ಪಂಜಾಬ್‌ನ ಸಂಗ್ರೂರ್‌ನಲ್ಲಿ ರೈತ ಪ್ರತಿಭಟನೆಯ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಟ್ರಾಲಿ ಹರಿದ ಪರಿಣಾಮ ಸಂಭವಿಸಿದ ದುರ್ಘಟನೆಯ ವಿಡಿಯೋ ಎಂಬುವುದು ಖಚಿತವಾಗಿದೆ. ಫೆ.13, 2024ರಿಂದ ದಿಲ್ಲಿ ಚಲೋ ಹಮ್ಮಿಕೊಂಡಿರುವ ರೈತರು ಪೊಲೀಸ್ ಅಧಿಕಾರಿಯ ಮೇಲೆ ಟ್ರ್ಯಾಕ್ಟರ್‌ ಹತ್ತಿಸಿದ್ದಾರೆ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ.

ಇದನ್ನೂ ಓದಿ: Fact Check: ‘ದಿಲ್ಲಿ ಚಲೋ’ಗೆ ರೈತರು ಒಂದೂವರೆ ಕೋಟಿ ರೂ. ಬೆಲೆಯ ಜೀಪ್‌ನಲ್ಲಿ ಬಂದಿದ್ದಾರೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...