HomeದಿಟನಾಗರFact Check : 'ಮೋದಿ ದೇಶದ್ರೋಹಿ' ಎಂಬ ಭಾಗ ಕೈಬಿಟ್ಟು ವೈಕೋ ಹೇಳಿಕೆ ಹಂಚಿಕೊಂಡ ANI

Fact Check : ‘ಮೋದಿ ದೇಶದ್ರೋಹಿ’ ಎಂಬ ಭಾಗ ಕೈಬಿಟ್ಟು ವೈಕೋ ಹೇಳಿಕೆ ಹಂಚಿಕೊಂಡ ANI

- Advertisement -
- Advertisement -

ತಮಿಳುನಾಡಿನ ಮರು ಮಳರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಪ್ರಧಾನ ಕಾರ್ಯದರ್ಶಿ ವೈಯಾಪುರಿ ಗೋಪಾಲಸಾಮಿ ಅಥವಾ ವೈಕೋ ಅವರು ಏಪ್ರಿಲ್ 3ರಂದು ಶ್ರೀಲಂಕಾದ ಕಚ್ಚತೀವು ದ್ವೀಪದ ಸುತ್ತ ನಡೆಯುತ್ತಿರುವ ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಎಂಡಿಎಂಕೆ ಪಕ್ಷವು ತಮಿಳುನಾಡಿನ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ಯ ಮಿತ್ರ ಪಕ್ಷವಾಗಿದೆ. ಡಿಎಂಕೆ ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷಗಳಲ್ಲಿ ಒಂದಾಗಿದೆ.

ವೈಕೋ ಅವರ ಹೇಳಿಕೆಯ 10 ಸೆಕೆಂಡ್‌ನ ವಿಡಿಯೋವನ್ನು ಏಪ್ರಿಲ್ 3ರಂದು ಎಎನ್‌ಐ ಸುದ್ದಿ ಸಂಸ್ಥೆ ಎಕ್ಸ್‌ನಲ್ಲಿ ಪ್ರಕಟಿಸಿತ್ತು. ವಿಡಿಯೋದಲ್ಲಿ ” ಆ ಸಮಯದಲ್ಲಿ ಕಾಂಗ್ರೆಸ್ ಪ್ರತಿ ರಂಗದಲ್ಲೂ ತಮಿಳುನಾಡಿಗೆ ದ್ರೋಹ ಬಗೆದಿತ್ತು..” ಎಂದು ವೈಕೋ ಹೇಳಿರುವುದನ್ನು ಕಾಣಬಹುದು.

ಎಎನ್‌ಐ ಎಕ್ಸ್ ಪೋಸ್ಟನ್ನು ರೀ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್, “ತಮಿಳುನಾಡಿನ ಜನರು ಕಡ್ಡಾಯವಾಗಿ ಇದನ್ನು ಆಲಿಸಬೇಕು” ಎಂದು ಬರೆದುಕೊಂಡಿದ್ದರು.

ಎಎನ್‌ಐ ಎಕ್ಸ್‌ ಪೋಸ್ಟ್‌ ಆಧರಿಸಿ ಹಿಂದುಸ್ತಾನ್ ಟೈಮ್ಸ್, ನ್ಯೂಸ್ 18, ಸಿಎನ್‌ಎನ್ ಮತ್ತು ನ್ಯೂಸ್ 9 ಸೇರಿದಂತೆ ಅನೇಕ ಮುಖ್ಯ ವಾಹಿನಿ ಮಾಧ್ಯಮಳು ಸುದ್ದಿ ಪ್ರಕಟಿಸಿದ್ದವು. ಎಲ್ಲಾ ಸುದ್ದಿಗಳಲ್ಲೂ ಎಎನ್‌ಐ ಹಂಚಿಕೊಂಡ ವೈಕೋ ಅವರ 10 ಸೆಕೆಂಡ್‌ನ ವಿಡಿಯೋದ ಹೇಳಿಕೆಯನ್ನು ಶೀರ್ಷಿಕೆಯಲ್ಲಿ ಹಾಕಲಾಗಿತ್ತು.

ನ್ಯೂಸ್ 18ನ ನಿರೂಪಕ ರಾಹುಲ್ ಶಿವಶಂಕರ್ ಎಕ್ಸ್‌ ಪೋಸ್ಟ್‌ ಅನ್ನು ರೀ ಟ್ವೀಟ್ ಮಾಡಿ ” ಮತ್ತೆ ಅವರು ಯಾಕೆ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದಾರೆ? ಅನುಕೂಲತೆಯ ರಾಜಕೀಯಕ್ಕೆ ಮಿತಿಯಿಲ್ಲವೇ? ಎಂದು ಪ್ರಶ್ನಿಸಿದ್ದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಕೆ ಕೇಶವನ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಎಎನ್‌ಐ ವಿಡಿಯೋವನ್ನು ಹಂಚಿಕೊಂಡಿದ್ದರು.

ಫ್ಯಾಕ್ಟ್‌ಚೆಕ್ : ಇಂಡಿಯಾ ಒಕ್ಕೂಟದ ಭಾಗವಾಗಿದ್ದರೂ ವೈಕೋ ಅವರು ಕಾಂಗ್ರೆಸ್‌ ವಿರುದ್ದವೇ ಹೇಳಿಕೆ ನೀಡಿದ್ದಾರೆ ಎಂಬರ್ಥದಲ್ಲಿ ವೈರಲ್ ಆದ ವಿಡಿಯೋದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ.

ನಾವು ಮೂಲ ವಿಡಿಯೋ ಹುಡುಕಾಡಿದಾಗ ತಮಿಳಿನ ಸನ್‌ ನ್ಯೂಸ್ ಎಕ್ಸ್‌ ಖಾತೆಯಲ್ಲಿ ವೈಕೋ ಅವರ ಹೇಳಿಕೆಯ 37 ಸೆಕೆಂಡ್‌ನ ಸಂಪೂರ್ಣ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ವಿಡಿಯೋದಲ್ಲಿ “ಆ ಸಮಯದಲ್ಲಿ ಕಾಂಗ್ರೆಸ್ ಪ್ರತಿ ರಂಗದಲ್ಲೂ ತಮಿಳುನಾಡಿಗೆ ದ್ರೋಹ ಬಗೆದಿತ್ತು. ಆ ನಂತರ… ಈ ಹತ್ತು ವರ್ಷಗಳು ನರೇಂದ್ರ ಮೋದಿಯವರಿಗೆ ಪರೀಕ್ಷಾ ಸಮಯವಾಗಿತ್ತು. ಆದರೆ, ಅವರು ದೇಶದ್ರೋಹಿ, ಅವರು ತಮಿಳುನಾಡಿಗೆ ದ್ರೋಹ ಮಾಡಿದರು, ಭಾರತಕ್ಕೆ ದ್ರೋಹ ಮಾಡಿದರು, ಶ್ರೀಲಂಕಾಕ್ಕೆ ದ್ರೋಹ ಮಾಡಿದರು” ಎಂದು ಹೇಳಿದ್ದಾರೆ.

ಇದರಿಂದ ನಮಗೆ ತಿಳಿದ್ದದ್ದು ಏನೆಂದರೆ, ಎಎನ್‌ಐ ಸುದ್ದಿ ಸಂಸ್ಥೆ “ಮೋದಿ ದೇಶ ದ್ರೋಹಿ, ಕಾಂಗ್ರೆಸ್ ತಮಿಳುನಾಡಿಗೆ ದ್ರೋಹವೆಸಗಿದೆ ಎಂಬ ವೈಕೋ ಹೇಳಿಕೆಯ 37 ಸೆಕೆಂಡ್‌ನ ವಿಡಿಯೋವನ್ನು ಕಟ್ ಮಾಡಿ, “ಕಾಂಗ್ರೆಸ್‌ ತಮಿಳುನಾಡಿಗೆ ದ್ರೋಹವೆಸಗಿದೆ’ ಎಂಬ 10 ಸೆಕೆಂಡ್‌ನ ವಿಡಿಯೋವನ್ನು ಮಾತ್ರ ಪೋಸ್ಟ್ ಮಾಡಿದೆ.

ಏಪ್ರಿಲ್ 3ರಂದು ಬುಧವಾರ ಡಿಎಂಕೆ ಅಭ್ಯರ್ಥಿ ತಮಿಳಚಿ ತಂಗಪಾಂಡಿಯನ್ ಪರ ಪ್ರಚಾರ ಮಾಡುವಾಗ ವೈಕೋ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ತಮ್ಮ ಭಾಷಣದ ವೇಳೆಯೂ ಅವರು ಬಿಜೆಪಿಯನ್ನು ಟೀಕಿಸಿದ್ದರು, “ಹಿಂದುತ್ವ ಶಕ್ತಿಗಳನ್ನು ಸೋಲಿಸಬೇಕಾಗಿದೆ. ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರದ ಬಿಜೆಪಿ ನಾಯಕ ತಮಿಳುನಾಡಿನ ದ್ರಾವಿಡ ಸರ್ಕಾರವನ್ನು ಉರುಳಿಸುವುದಾಗಿ ಘೋಷಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜನರು ಪಣ ತೊಡಬೇಕು” ಎಂದಿದ್ದರು.

ಎಎನ್‌ಐ ಕಟ್ ಮಾಡಿದ್ದ ವೈಕೋ ಹೇಳಿಕೆಯ ಉಳಿದ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಏಪ್ರಿಲ್ 3ರಂದು ಹಂಚಿಕೊಂಡಿದ್ದರು. ” ಈ 10 ವರ್ಷಗಳು ನರೇಂದ್ರ ಮೋದಿಯವರಿಗೆ ಪರೀಕ್ಷಾ ಸಮಯವಾಗಿತ್ತು. ಅವರೊಬ್ಬ ದೇಶದ್ರೋಹಿ. ಅವರು ತಮಿಳುನಾಡಿಗೆ ದ್ರೋಹ ಮಾಡಿದರು. ಭಾರತಕ್ಕೆ ದ್ರೋಹ ಮಾಡಿದರು, ಶ್ರೀಲಂಕಾಕ್ಕೆ ದ್ರೋಹ ಮಾಡಿದರು : ಎಂಡಿಎಂಕೆ ಸಂಸ್ಥಾಪಕ ವೈಕೋ” ಎಂದು ಬರೆದುಕೊಂಡಿದ್ದರು.

ಕೊನೆಯದಾಗಿ, ಈ ಫ್ಯಾಕ್ಟ್‌ಚೆಕ್ ಮೂಲಕ ನಾವು ಹೇಳುತ್ತಿರುವುದು ಎಎನ್‌ಐ ವೈಕೋ ಅವರು ಕಾಂಗ್ರೆಸ್ ಕುರಿತು ನೀಡಿರುವ ಹೇಳಿಕೆಯನ್ನು ಮಾತ್ರ ಪ್ರಕಟಿಸಿ, ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆಯನ್ನು ಮರೆ ಮಾಚಿದೆ ಎಂಬುದಾಗಿದೆ.

ಇದನ್ನೂ ಓದಿ : Fact Check : ಬೆಂಗಳೂರಿನಲ್ಲಿ ಮುಸ್ಲಿಮರು ಬಸ್‌ ಮೇಲೆ ಕಲ್ಲು ತೂರಿದ್ದಾರೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...