Homeಮುಖಪುಟಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ದಾಳಿ: 21 ಜನರು ಸಾವು

ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ದಾಳಿ: 21 ಜನರು ಸಾವು

ಅಲ್ ಅಕ್ಸಾ ಪ್ರವೇಶಕ್ಕೆ ಇಸ್ರೇಲ್ ಪಡೆಗಳಿಂದ ತಡೆ ಆರೋಪ, 30 ಸಾವಿರ ದಾಟಿದ ಪ್ಯಾಲೆಸ್ತೀನಿಯರ ಸಾವಿನ ಸಂಖ್ಯೆ

- Advertisement -
- Advertisement -

ಅಮಾಯಕ ಪ್ಯಾಲೆಸ್ತೀನ್ ನಾಗರಿಕರ ಮೇಲಿನ ಇಸ್ರೇಲ್ ಆಕ್ರಮಣ ಮುಂದುವರೆದಿದೆ. ಕಳೆದ ಗುರುವಾರ ಅಗತ್ಯ ಸಾಮಗ್ರಿಗಳಿಗಾಗಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ಬುಧವಾರ ದಾಳಿ ನಡೆಸಿದ ಅದೇ ಜಾಗದಲ್ಲಿ ಗುರುವಾರ ಮತ್ತೆ ದಾಳಿ ನಡೆಸಲಾಗಿದೆ. ಗಾಝಾದ ಆರೋಗ್ಯ ಸಚಿವಾಲಯವು ಗುರುವಾರದ ದಾಳಿಯನ್ನು “ಹೊಸ, ಪೂರ್ವಯೋಜಿತ ಹತ್ಯಾಕಾಂಡ” ಎಂದು ಬಣ್ಣಿಸಿದ್ದು, ಘಟನೆಯಲ್ಲಿ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಬುಧವಾರ ಗಾಝಾದ ಕುವೈತ್ ರೌಂಡ್‌ಬೌಟ್‌ನಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದ್ದವು. ಇದರಲ್ಲಿ ಆರು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಕುವೈತ್ ರೌಂಡ್‌ಬೌಟ್‌ನಲ್ಲಿ ಆಹಾರಕ್ಕಾಗಿ ಕಾಯುವ ಜನರ ಮೇಲೆ ಇಸ್ರೇಲಿ ಪಡೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಇದುವರೆಗೆ 400 ಜನರನ್ನು ಇಸ್ರೇಲಿ ಸೈನಿಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಆಹಾರಕ್ಕಾಗಿ ಕಾಯುತ್ತಿರುವ ಜನರನ್ನು ಗುರಿಯಾಗಿಸಿ ದಾಳಿ ಮಾಡಲು ಇಸ್ರೇಲಿ ಪಡೆಗಳು ಹೆಲಿಕಾಪ್ಟರ್‌, ಟ್ಯಾಂಕ್‌ ಮತ್ತು ಡ್ರೋನ್‌ಗಳನ್ನು ಬಳಸುತ್ತಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿ ಅಲ್‌ ಜಝೀರಾ ವರದಿ ಮಾಡಿದೆ.

ಇಸ್ರೇಲಿ ಪಡೆಗಳು ಆಹಾರಕ್ಕಾಗಿ ಕಾಯುತ್ತಿರುವ ಜನರ ಮೇಲೆ ದಾಳಿ ಮಾಡಿರುವ ಆರೋಪವನ್ನು ಅಲ್ಲಗಳೆದಿವೆ. ಶಸ್ತ್ರ ಸಜ್ಜಿತ ಪ್ಯಾಲೆಸ್ತೀನಿಯರು ಜನರ ಸಾವಿಗೆ ಕಾರಣ ಎಂದು ಹೇಳಿದೆ.

ಗುರುವಾರ ಗಾಝಾ ನಗರದಲ್ಲಿ ನಾಗರಿಕರು ಆಹಾರಕ್ಕಾಗಿ ಕಾಯುತ್ತಿರುವಾಗ ಶಸ್ತ್ರ ಸಜ್ಜಿತ ಪ್ಯಾಲೆಸ್ತೀನಿಯರು ಜನರ ಗುಂಪಿನ ಮೇಲೆ ದಾಳಿ ಮಾಡಿ ಟ್ರಕ್‌ಗಳಿಂದ ಆಹಾರ ಲೂಟಿ ಮಾಡಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ.

ಆಹಾರ ಟ್ರಕ್‌ಗಳು ಬಂದಾಗ ಜನರು ಅವುಗಳ ಹಿಂದೆ ಓಡುವುದು, ನೂಕು ನುಗ್ಗಲು ನಡೆಸುವುದರಿಂದ ಸಾವುಗಳು ಸಂಭವಿಸುತ್ತಿವೆ. ನಾವು ಹೆಲಿಕಾಫ್ಟರ್, ಟ್ಯಾಂಕರ್, ಡ್ರೋನ್ ಬಳಸಿ ದಾಳಿ ನಡೆಸಿಲ್ಲ ಎಂದು ಹೇಳಿದೆ.

ಅಲ್‌ ಅಕ್ಸಾ ಪ್ರವೇಶಕ್ಕೆ ನಿರಾಕರಣೆ:

ಇಸ್ರೇಲ್‌ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಜೆರುಸಲೇಂನ ಅಲ್‌ ಅಕ್ಸಾ ಮಸೀದಿಯಲ್ಲಿ ನಮಾಝ್‌ ನಿರ್ವಹಿಸಲು ಪ್ಯಾಲೆಸ್ತೀನ್ ಮುಸ್ಲಿಮರಿಗೆ ಇಸ್ರೇಲ್‌ ಸೈನಿಕರು ತಡೆಯೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮುಸ್ಲಿಮರ ಪವಿತ್ರ ತಿಂಗಳು ರಂಝಾನ್ ಹಿನ್ನೆಲೆ ಸಾವಿರಾರು ಪ್ಯಾಲೆಸ್ತೀನಿರು ಅಲ್‌ ಅಕ್ಸಾ ಮಸೀದಿಯಲ್ಲಿ ನಮಾಝ್‌ಗೆ ತೆರಳಿದ್ದರು. ಈ ವೇಳೆ ಇಸ್ರೇಲಿ ಪಡೆ ಅವರನ್ನು ತಡೆದಿದೆ ಎಂದು ಅಲ್‌ ಜಝೀರಾ ವರದಿ ಮಾಡಿದೆ.

ಇಸ್ರೇಲಿ ಪಡೆಗಳ ನಿರ್ಬಂಧದ ಹೊರತಾಗಿಯೂ ಮುಸ್ಲಿಮರ ಮೂರನೇ ಅತೀ ಪವಿತ್ರ ಮಸೀದಿಯಾದ ಅಲ್‌ ಅಕ್ಸಾದಲ್ಲಿ ರಂಝಾನಿನ ಮೊದಲ ಶುಕ್ರವಾರ ಬರೋಬ್ಬರಿ 80 ಸಾವಿರ ಜನರು ಜುಮಾ ನಮಾಝ್ ನಿರ್ವಹಿಸಿದ್ದಾರೆ ಎಂದು ಮಸೀದಿಯನ್ನು ನಿಯಂತ್ರಿಸುವ ಇಸ್ಲಾಮಿಕ್ ವಕ್ಫ್ ಸಂಸ್ಥೆಯನ್ನು ಉಲ್ಲೇಖಿಸಿ ಕುದ್ಸ್ ನ್ಯೂಸ್ ನೆಟ್‌ವರ್ಕ್ ವರದಿ ಮಾಡಿದೆ.

30 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಸಾವು:

ಅಕ್ಟೋಬರ್ 7 ರಂದು ಪ್ರಾರಂಭಗೊಂಡ ಇಸ್ರೇಲ್‌-ಹಮಾಸ್ ನಡುವಿನ ಸಂಘರ್ಷದಲ್ಲಿ ಇದುವರೆಗೆ 30 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 72 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Photo Courtesy : Al Jazeera

ಇದನ್ನೂ ಓದಿ : ಚುನಾವಣಾ ಬಾಂಡ್‌: ಒಟ್ಟು ನಿಧಿಯ 50% ಸ್ವೀಕರಿಸಿದ್ದು ಬಿಜೆಪಿ: ಅಂಕಿಅಂಶ ಬಯಲು ಮಾಡಿದ ADR

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಟಿಪ್ಪು ಸುಲ್ತಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬುವುದು ಸುಳ್ಳು

0
"ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯಾರಾದ ದೇಶದ್ರೋಹಿ, ಮತಾಂಧ ತಿಪ್ಪೆ ಸುಲ್ತಾನನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಸಿನಿಮಾವನ್ನು ಬಹಿಷ್ಕರಿಸಲು ಶೇರ್ ಮಾಡಿ" ಎಂದು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ...