Homeಮುಖಪುಟಚುನಾವಣಾ ಬಾಂಡ್‌: ಒಟ್ಟು ನಿಧಿಯ 50% ಸ್ವೀಕರಿಸಿದ್ದು ಬಿಜೆಪಿ: ಅಂಕಿಅಂಶ ಬಯಲು ಮಾಡಿದ ADR

ಚುನಾವಣಾ ಬಾಂಡ್‌: ಒಟ್ಟು ನಿಧಿಯ 50% ಸ್ವೀಕರಿಸಿದ್ದು ಬಿಜೆಪಿ: ಅಂಕಿಅಂಶ ಬಯಲು ಮಾಡಿದ ADR

- Advertisement -
- Advertisement -

2017-18ರಲ್ಲಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದ, ಬಿಜೆಪಿಯು ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು ನಿಧಿಯ ಸುಮಾರು 50% ಸ್ವೀಕರಿಸಿದ್ದು, ಅದು ಬರೊಬ್ಬರಿ 7,700ಕೋಟಿ ರೂ. ಆಗಿದೆ ಎಂದು ಎಡಿಆರ್‌ ವರದಿಯು ಬಹಿರಂಗಪಡಿಸಿದೆ.

ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್‌(ಎಡಿಆರ್‌) ಮಾಹಿತಿ ಪ್ರಕಾರ, 2017-18 ಮತ್ತು 2018-19ರ ಎರಡು ವರ್ಷಗಳಲ್ಲಿ ಬಿಜೆಪಿ ಕ್ರಮವಾಗಿ 1,450.9 ಕೋಟಿ ಮತ್ತು 210 ಕೋಟಿ ರೂಪಾಯಿಗಳನ್ನು ದೇಣಿಗೆ ಪಡೆದಿದೆ ಮತ್ತು ಏಪ್ರಿಲ್ 12, 2019 ರಿಂದ ಜನವರಿ 24, 2024 ರಲ್ಲಿ 6,060.5 ಕೋಟಿ ರೂ.ಮೌಲ್ಯದ  ಬಾಂಡ್‌ ಪಡೆದಿದೆ. ಇದರ ಒಟ್ಟು ಮೌಲ್ಯ 7,721.4 ಕೋಟಿ ರೂ.ಆಗಿದ್ದು, ಇದು ಇಲ್ಲಿಯವರೆಗಿನ ಒಟ್ಟು ಮೊತ್ತ ಅಂದರೆ 15,529 ಕೋಟಿ ಸುಮಾರು 50%ರಷ್ಟಾಗಿರುತ್ತದೆ.

ಕಾಂಗ್ರೆಸ್ ಎರಡು ವರ್ಷಗಳಲ್ಲಿ 383.3 ಕೋಟಿ ಮತ್ತು 5 ಕೋಟಿ ಪಡೆದಿದೆ ಮತ್ತು ಒಟ್ಟು ಇಲ್ಲಿಯವರೆಗೆ 1,810 ಕೋಟಿ ರೂ.ಚುನಾವಣಾ ಬಾಂಡ್‌ ಕಾಂಗ್ರೆಸ್‌ ಪಡೆದುಕೊಂಡಿದೆ. ಎರಡು ವರ್ಷಗಳಲ್ಲಿ ಟಿಎಂಸಿ 97.3 ಕೋಟಿ ದೇಣಿಗೆಯನ್ನು ಮೊದಲು ಪಡೆದಿದ್ದು, ಪಕ್ಷ ಒಟ್ಟು 1706.8 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಎಸ್ ಬಿಐ ನೀಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

2018-19ರಲ್ಲಿ ಬಿಜೆಡಿ 213.5 ಕೋಟಿ ರೂಪಾಯಿ ದೇಣಿಗೆ ಪಡೆದಿದ್ದು, 2017-18ರಲ್ಲಿ ಯಾವುದೇ ದೇಣಿಗೆ ಸ್ವೀಕರಿಸಿಲ್ಲ. ಗುರುವಾರದ ಅಂಕಿ ಅಂಶ ಬಹಿರಂಗಗೊಂಡಾಗ ಬಿಜೆಡಿ ಸಂಗ್ರಹಿಸಿದ ಒಟ್ಟು ದೇಣಿಗೆ ಮೊತ್ತ 989 ಕೋಟಿ ಎನ್ನುವುದು ತಿಳಿದು ಬಂದಿದೆ. 2019ರ ಏಪ್ರಿಲ್ 1ರಿಂದ 2019ರ ಏಪ್ರಿಲ್ 11ರವರೆಗಿನ ಅಂಕಿ ಅಂಶಗಳು ಇದರಲ್ಲಿ ಸೇರಿಲ್ಲ. ಈ ಅವಧಿಯ ಕೇವಲ 11 ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಿರತವಾಗಿದ್ದು ದೊಡ್ಡ ಪ್ರಮಾಣದ ನಗದು ಹರಿದಿರುವ ಸಾಧ್ಯತೆ ಇದೆ.

2017ರಲ್ಲಿ ಚುನಾವಣಾ ಬಾಂಡ್‌ ಪ್ರಾರಂಭವಾದ ದಿನಗಳಿಂದ ಈ ವರ್ಷದ ಆರಂಭದಲ್ಲಿ ಸುಪ್ರೀಂಕೋರ್ಟ್ ಚುನಾವಣಾ ಬಾಂಡ್‌ನಿಷೇಧಿಸುವವರೆಗೆ ಯಾವ ಪಕ್ಷ ಚುನಾವಣಾ ಬಾಂಡ್‌ಗಳ ಮೂಲಕ ಎಷ್ಟು ಹಣವನ್ನು ಪಡೆದಿದೆ ಎಂಬ ಸಂಪೂರ್ಣ ವಿವರಗಳು ಲಭ್ಯವಾಗಿಲ್ಲ. ಈ ಬಗ್ಗೆ ಎಸ್‌ಬಿಐ ಸಂಪೂರ್ಣ ಮಾಹಿತಿ ನೀಡಿದರೆ ಇದರ ಒಟ್ಟು ಮೊತ್ತ ಬಹಿರಂಗವಾಗಲಿದೆ.

ಸುಪ್ರೀಂಕೋರ್ಟ್‌ ಖಡಕ್ ನಿರ್ದೇಶನದ ಬಳಿಕ ಎಸ್‌ಬಿಐ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ ಕುರಿತು ಮಾಹಿತಿಯನ್ನು ನೀಡಿತ್ತು. ಈ ಕುರಿತ ಮಾಹಿತಿ ನಿನ್ನೆ ಬಿಡುಗಡೆಯಾಗಿದ್ದು, ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ ಮೂಲಕ ಹರಿದು ಬಂದ ಮೊತ್ತದ ಮಾಹಿತಿ ಲಭ್ಯವಾಗಿದೆ. ಆದರೆ ಎಸ್‌ಬಿಐ  ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿಲ್ಲ ಎನ್ನುವುದು ಆ ಬಳಿಕ ಬಹಿರಂಗವಾಗಿದೆ.

ಆರ್‌ಟಿಐ ಮಾಹಿತಿ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2018ರಿಂದ 16,518 ಕೋಟಿ ಮೌಲ್ಯದ 28,030 ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ, ಆದರೆ ಗುರುವಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಖರೀದಿದಾರರ ಪಟ್ಟಿಯಲ್ಲಿ ಕೇವಲ 18,871 ಬಾಂಡ್‌ಗಳ ಮಾರಾಟ ಮಾಡಿರುವ ಬಗ್ಗೆ ಮಾತ್ರ ಮಾಹಿತಿ ಇದ್ದು, ಅದರ ಮೌಲ್ಯ 12,516 ಕೋಟಿ ರೂ.ಆಗಿದೆ. ಇನ್ನುಳಿದವುಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ಓದಿ: 4,002 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ: ಯಾಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...