Homeಮುಖಪುಟ4,002 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ: ಯಾಕೆ?

4,002 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ: ಯಾಕೆ?

- Advertisement -
- Advertisement -

ಸುಪ್ರೀಂಕೋರ್ಟ್‌ ಖಡಕ್ ನಿರ್ದೇಶನದ ಬಳಿಕ ಎಸ್‌ಬಿಐ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ ಕುರಿತು ಮಾಹಿತಿಯನ್ನು ನೀಡಿದೆ. ಆದರೆ ಎಸ್‌ಬಿಐ ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿಲ್ಲ ಎನ್ನವುದು ಆ ಬಳಿಕ ಬಹಿರಂಗವಾಗಿದೆ.

ಆರ್‌ಟಿಐ ಮಾಹಿತಿ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2018ರಿಂದ 16,518 ಕೋಟಿ ಮೌಲ್ಯದ 28,030 ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ, ಆದರೆ ಗುರುವಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಖರೀದಿದಾರರ ಪಟ್ಟಿಯಲ್ಲಿ ಕೇವಲ 18,871 ಬಾಂಡ್‌ಗಳ ಮಾರಾಟ ಮಾಡಿರುವ ಬಗ್ಗೆ ಮಾತ್ರ ಮಾಹಿತಿ ಇದ್ದು, ಅದರ ಮೌಲ್ಯ 12,516 ಕೋಟಿ ರೂ.ಆಗಿದೆ. ಇನ್ನುಳಿದವುಗಳ ಬಗ್ಗೆ ಮಾಹಿತಿ ನೀಡಲಾಗಿಲ್ಲ.

4,002 ಕೋಟಿ ಮೌಲ್ಯದ 9,159 ಬಾಂಡ್‌ಗಳ ಮಾಹಿತಿಯನ್ನು ಏಕೆ ಬಹಿರಂಗಪಡಿಸಿಲ್ಲ?

ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಲೆಕ್ಕಾಚಾರದಲ್ಲಿ “ಮೇಲ್ವಿಚಾರಣೆ” ಮಾಡಿಡುತ್ತಿದೆ ಎಂದು ಹೇಳಿದೆ. ಉತ್ತರದ ಇನ್ನೊಂದು ಭಾಗವು ಇನ್ನೂ ಸಾರ್ವಜನಿಕಗೊಳಿಸದ “ಸೀಲ್‌ ಮಾಡಿದ ಕವರ್” ನಲ್ಲಿದೆ.

ಫೆಬ್ರವರಿ 15ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು. ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಬಾಂಡ್‌ಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂಕೋರ್ಟ್‌ ನಿರ್ದೇಶಿಸಿತ್ತು.

ಮಾರ್ಚ್ 1, 2018ರಿಂದ, ಬ್ಯಾಂಕ್ 30 ಹಂತಗಳಲ್ಲಿ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಆದರೆ ಮಾರ್ಚ್ 4 ರಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಅವಧಿ ವಿಸ್ತರಣೆಯನ್ನು ಕೋರಿ ನ್ಯಾಯಾಲಯದ ಮುಂದೆ ಸಲ್ಲಿಸಿದ ಮನವಿಯಲ್ಲಿ,  ಏಪ್ರಿಲ್ 2019ರಿಂದ 22 ಹಂತಗಳಲ್ಲಿ ಮಾರಾಟವಾದ ಬಾಂಡ್‌ಗಳನ್ನು ಮಾತ್ರ ಲೆಕ್ಕ ಹೇಳಿದೆ. ಅದರಲ್ಲಿ ಏಪ್ರಿಲ್ 12, 2019 ರಿಂದ ಫೆಬ್ರವರಿ 15, 2024ರ ನಡುವೆ ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಇಪ್ಪತ್ತೆರಡು ಸಾವಿರದ ಇನ್ನೂರ ಹದಿನೇಳು (22,217) ಚುನಾವಣಾ ಬಾಂಡ್‌ಗಳನ್ನು ಬಳಸಲಾಗಿದೆ ಎಂದು ಬ್ಯಾಂಕ್‌ ಹೇಳಿದೆ.

ಮಾರ್ಚ್ 12ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಏಪ್ರಿಲ್ 12, 2019 ಮತ್ತು ಫೆಬ್ರವರಿ 15, 2024 ರ ನಡುವೆ ವಾಸ್ತವವಾಗಿ ಕೇವಲ 18,871 ಬಾಂಡ್‌ಗಳನ್ನು ಮಾರಾಟ ಮಾಡಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ಉಳಿದ 3,346 ಬಾಂಡ್‌ಗಳನ್ನು ಏಪ್ರಿಲ್ 1, 2019 ರಿಂದ ಏಪ್ರಿಲ್ 11, 2019ರ ನಡುವೆ  ಮಾರಾಟ ಮಾಡಲಾಗಿದೆ.

3,346 ಬಾಂಡ್‌ಗಳ ಬಗ್ಗೆ ಮಾಹಿತಿ ಏಕೆ ಬಿಡುಗಡೆ ಮಾಡಲಿಲ್ಲ?

ಅಫಿಡವಿಟ್‌ನಲ್ಲಿ, ಸುಪ್ರೀಂಕೋರ್ಟ್‌ನ ಫೆಬ್ರವರಿ 2024ರ ತೀರ್ಪನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ  ನ್ಯಾಯಾಲಯ 12 ಏಪ್ರಿಲ್ 2019ರ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ECIಗೆ ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಲ್ಲಿಸಲು ಕೇಳಿದೆ.

2019ರ ಏಪ್ರಿಲ್ 12ರಂದು ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್, ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರಿದ್ದ ತ್ರಿಸದಸ್ಯ ಪೀಠವು ಮಧ್ಯಂತರ ಆದೇಶವನ್ನು ನೀಡಿದೆ.  ಚುನಾವಣಾ ಬಾಂಡ್‌ಗಳಿಗೆ  ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಮೇ 15ರ ಒಳಗೆ ಸಲ್ಲಿಸಲು  ಬ್ಯಾಂಕ್‌ಗೆ ತಿಳಿಸಲಾಗಿತ್ತು.

ಆದರೆ ಈಗಿನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈಗಾಗಲೇ ಮುಚ್ಚಿದ ಕವರ್‌ನಲ್ಲಿ ಸಲ್ಲಿಸಿರುವ ಡೇಟಾವನ್ನು ಹೊರತುಪಡಿಸಿ ಇತರ ಡೇಟಾವನ್ನು ಬಿಡುಗಡೆ ಮಾಡುವಂತೆ ಎಸ್‌ಬಿಐಗೆ ನಿರ್ದೇಶಿಸಿದೆ. ಆದರೆ ಎಸ್‌ಬಿಐ ಇದನ್ನು ಏಪ್ರಿಲ್ 12, 2019ರಿಂದ ಫೆಬ್ರವರಿ 15, 2024ರ ನಡುವೆ ನೀಡಲಾದ ಬಾಂಡ್‌ಗಳ ಮಾಹಿತಿ ನೀಡುವ ಕುರಿತ ನಿರ್ದೇಶನ ಎಂದು ವ್ಯಾಖ್ಯಾನಿಸಿದೆ.

ಮುಚ್ಚಿದ ಲಕೋಟೆಯಲ್ಲಿ ನೀಡಿದ ಡೇಟಾದ ಒಂದು ಭಾಗವು ಸಾರ್ವಜನಿಕಗೊಳಿಸಲಾಗಿದೆ, ಆದರೆ ಉಳಿದವು ಬಹಿರಂಗಗೊಳಿಸಲಾಗಿಲ್ಲ. ಚುನಾವಣಾ ಬಾಂಡ್‌ಗಳ ಸಂಪೂರ್ಣ ಡೇಟಾವನ್ನು ಹಂಚಿಕೊಳ್ಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಸುಪ್ರೀಂಕೋರ್ಟ್ ನಿನ್ನೆ ತರಾಟೆಗೆ ತೆಗೆದುಕೊಂಡಿತ್ತು. ಚುನಾವಣಾ ಆಯೋಗದ ಅರ್ಜಿಯನ್ನು ಆಲಿಸಿದ ಸುಪ್ರೀಂಕೋರ್ಟ್, ಎಸ್‌ಬಿಐ ನೀಡಿರುವ ಅಂಕಿ ಅಂಶಗಳು ಅಪೂರ್ಣ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ, ಎಸ್‌ಬಿಐ ಈಗಾಗಲೇ ಹಂಚಿಕೊಂಡಿರುವ ವಿವರಗಳ ಜೊತೆಗೆ ಚುನಾವಣಾ ಬಾಂಡ್ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಸೂಚಿಸಿತ್ತು.

ಇದನ್ನು ಓದಿ: ಬಿಜೆಪಿ ವಿರುದ್ಧ ಈಶ್ವರಪ್ಪ ಬಂಡಾಯ: ಶಿವಮೊಗ್ಗದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...