ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಅತ್ಯುನ್ನತ ಗೌರವವಾದ ‘ಸಂಗೀತ ಕಲಾನಿಧಿ’ ಬಿರುದನ್ನು ಸಂಗೀತಗಾರ ಟಿಎಂ ಕೃಷ್ಣ ಅವರಿಗೆ ನೀಡುವ ನಿರ್ಧಾರಕ್ಕೆ ಗಾಯಕರಾದ ರಂಜನಿ-ಗಾಯತ್ರಿ ಮತ್ತು ಹರಿಕಥಾ ನಿರೂಪಕ ದುಷ್ಯಂತ್ ಶ್ರೀಧರ್ ಅವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಇರುವ ಜಾತೀಯತೆ, ತಾರತಮ್ಯ ವಿರೋಧಿಸಿಕೊಂಡು ಬಂದಿರುವುದೇ ಟಿಎಂ ಕೃಷ್ಣ ಅವರಿಗೆ ಈ ಗೌರವ ಸಿಗುವುದಕ್ಕೆ ಗಾಯಕರು ಆಕ್ಷೇಪಣೆ ಸಲ್ಲಿಸಲು ಕಾರಣವಾ ಎಂಬ ಪ್ರಶ್ನೆ ಮೂಡಿದ್ದು, ಬ್ರಾಹ್ಮಣ್ಯದ ಮನಸ್ಥಿತಿಯಿಂದ ಮಾಡಿದ ವಿರೋಧ ಇದಾಗಿದೆ ಎಂದು ಹಲವರು ಟೀಕಿಸಿದ್ದಾರೆ, ಇದರ ಜೊತೆಗೆ ಇವರ ಬಹಿಷ್ಕಾರದ ಕರೆಗಳನ್ನು ಬೆಂಬಲಿಸಲು ಹಲವು ಸಂಗೀತಗಾರರು ನಿರಾಕರಿಸಿದ್ದಾರೆ.
ಮದ್ರಾಸ್ ಸಂಗೀತ ಅಕಾಡೆಮಿಯು 2024ರ ವಾರ್ಷಿಕ ಸಂಗೀತ ಅಕಾಡೆಮಿ ಕಾರ್ಯಕ್ರಮ ಆಯೋಜಿಸುತ್ತಿದೆ. ಕಾರ್ಯಕ್ರಮದಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಟಿಎಂ ಕೃಷ್ಣ ಅವರಿಗೆ ನೀಡುವುದಾಗಿ ಮದ್ರಾಸ್ ಸಂಗೀತ ಅಕಾಡೆಮಿಯು ಘೋಷಿಸಿದೆ.ಕರ್ನಾಟಕ ಸಂಗೀತ ಗಾಯಕರಾದ ರಂಜನಿ-ಗಾಯತ್ರಿ ಮತ್ತು ಹರಿಕಥಾ ನಿರೂಪಕ ದುಷ್ಯಂತ್ ಶ್ರೀಧರ್ ಅವರು ಸಂಗೀತ ಅಕಾಡೆಮಿ ಸಮ್ಮೇಳನ 2024ರಿಂದ ಹಿಂದೆ ಸರಿಯುವುದಾಗಿ ಹೇಳಿಕೊಂಡಿದ್ದಾರೆ. ಅವರು ಕರ್ನಾಟಕ ಸಂಗೀತ ಲೋಕಕ್ಕೆ ಅಪಾರ ಹಾನಿಯನ್ನುಂಟು ಮಾಡಿದ್ದಾರೆ, ಉದ್ದೇಶಪೂರ್ವಕವಾಗಿ ಈ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ತ್ಯಾಗರಾಜ ಮತ್ತು ಎಂಎಸ್ ಸುಬ್ಬುಲಕ್ಷ್ಮಿ ಅವರನ್ನು ಅವಮಾನಿಸಿದ್ದಾರೆ. ಪೆರಿಯಾರ್ ಅವರನ್ನು ವೈಭವೀಕರಿಸಿದ್ದಾರೆ ಎಂದು ರಂಜನಿ ಮತ್ತು ಗಾಯತ್ರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
#thread 1/6
We have communicated our decision to withdraw from participating in the Music Academy’s conference 2024 & from presenting our concert on 25 Dec.
We made this decision as the conference would be presided over by TM Krishna. #madrasmusicacademy #respectcarnaticmusic— Ranjani Gayatri (@ranjanigayatri) March 20, 2024
ವೈದಿಕ ವಾಗ್ಮಿಯಾಗಿ ಗುರುತಿಸಿಕೊಂಡಿರುವ ದುಶ್ಯಂತ್ ಶ್ರೀಧರ್, ಸಂಗೀತ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆದು ಜನವರಿ 1ರಂದು ಟಿಎಂ ಕೃಷ್ಣ ಅವರಿಗೆ ಪ್ರಶಸ್ತಿ ನೀಡಿದ ಕಾರಣ ಕಾರ್ಯಕ್ರಮದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಹರಿಕಥಾ ನಿರೂಪಕಿ ವಿಶಾಖ ಹರಿ ಅವರು ಇನ್ಸ್ಟಾಗ್ರಾಂನಲ್ಲಿನ ತಮ್ಮ ಪೋಸ್ಟ್‌ನಲ್ಲಿ, ಈ ವರ್ಷದ ಸಂಗೀತ ಕಲಾನಿಧಿ ಪ್ರಶಸ್ತಿಗೆ ನಿಯೋಜತರು ಈ ಹಿಂದೆ ಸಾಕಷ್ಟು ದೂಷಣೆಯಲ್ಲಿ ತೊಡಗಿದ್ದಾರೆ, ಹಲವರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ರಾಷ್ಟ್ರ ಪ್ರಶಸ್ತಿ ವಿಜೇತೆ ಮತ್ತು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟಿಎಂ ಕೃಷ್ಣ ಅವರನ್ನು ಬೆಂಬಲಿಸಿ ಪ್ರಶಸ್ತಿ ಪಡೆದಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದಾರೆ. ಅವರು ರಂಜನಿ ಮತ್ತು ಗಾಯತ್ರಿಗೆ ಪ್ರಮುಖ ಪ್ರಶ್ನೆಯನ್ನು ಕೇಳಿದ್ದಾರೆ. 2018ರಲ್ಲಿ ಕರ್ನಾಟಕ ಸಂಗೀತದ ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಮಾತನಾಡುವಾಗ ಅಂತಹ ಭಾವೋದ್ರೇಕದ ಪತ್ರವನ್ನು ನಾವು ಕಂಡಿರಲಿಲ್ಲ ಎಂದು ಹೇಳಿದ್ದು, ಪತ್ರದ ಹಿಂದೆ ದುರುದ್ದೇಶವಿದೆ ಎಂದು ಹೇಳಿದ್ದಾರೆ.
ರಂಜನಿ ಗಾಯತ್ರಿ ಅವರ ಕಾರ್ಯಕ್ರಮದ ಬಹಿಷ್ಕಾರದ ಬಗ್ಗೆ ಪ್ರತಿಕ್ರಿಯಿಸಿದ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಅಧ್ಯಕ್ಷರಾದ ಎನ್ ಮುರಳಿ, ಇದು ಕೀಳು ಅಭಿರುಚಿಯಿಂದ ಬರೆದ ಪತ್ರವಾಗಿದೆ. ನೀವು ನನ್ನ ಮತ್ತು ಅಕಾಡೆಮಿಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪತ್ರವನ್ನು ನಾನು ಗಮನಿಸಿದ್ದೇನೆ. ನಿಮ್ಮ ಪತ್ರ ವಿವೇಚನಾರಹಿತವಾಗಿರುವುದಲ್ಲದೆ, ಪತ್ರದ ಹಿಂದಿನ ಉದ್ದೇಶದ ಬಗ್ಗೆ ನನಗೆ ಸಂದೇಹವಿದೆ ಎಂದು ಹೇಳಿದ್ದಾರೆ.
ಬಿರುದು ಘೋಷಣೆ ಬೆನ್ನಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಕೃಷ್ಣ, ಮ್ಯೂಸಿಕ್ ಅಕಾಡೆಮಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಇದನ್ನು ವಿಶೇಷ ಕ್ಷಣ ಎಂದು ಬಣ್ಣಿಸಿದ್ದಾರೆ. ಮದ್ರಾಸ್‌ನ ಮ್ಯೂಸಿಕ್ ಅಕಾಡೆಮಿ 2024ಕ್ಕೆ ನನಗೆ ಸಂಗೀತ ಕಲಾನಿಧಿ ಎಂಬ ಬಿರುದನ್ನು ನೀಡಿ ಗೌರವಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಇದು ಕರ್ನಾಟಕ ಸಂಗೀತಗಾರರಿಗೆ ನೀಡುವ ಅತ್ಯುನ್ನತ ಗೌರವ ಎಂಬುದರಲ್ಲಿ ಸಂದೇಹವಿಲ್ಲ. ಈ ಕ್ಷಣದಲ್ಲಿ ನಾನು ನನ್ನ ಕುಟುಂಬ, ನನ್ನ ಗುರುಗಳು ಮತ್ತು ಸಹ-ಸಂಗೀತಗಾರರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕ ಸಂಗೀತಗಾರರಲ್ಲದೆ ಕೃಷ್ಣ ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ ಮತ್ತು ಪ್ರತಿಷ್ಠಿತ ಎ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೃಷ್ಣ ಅವರು ಅಸ್ತಿತ್ವದಲ್ಲಿರುವ ಕರ್ನಾಟಕ ಸಂಗೀತ ವ್ಯವಸ್ಥೆಯಲ್ಲಿನ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ದ ಆಗಾಗ್ಗ ಧ್ವನಿಗೂಡಿಸುತ್ತಿದ್ದರು. ಇದು ಬಲಪಂಥೀಯ ಗಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಕೃಷ್ಣ ಅವರಿಗೆ ಬಿರುದು ಸಿಕ್ಕಿರುವ ಕಾರ್ಯಕ್ರಮವನ್ನು ಬಲಪಂಥೀಯರು ವಿರೋಧಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಹಿಂದುತ್ವಾವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ, ರಂಜನಿ-ಗಾಯತ್ರಿ ಮತ್ತು ವಿಶಾಖ ಹರಿ ಅವರು 2024ರ ಸಂಗೀತ ಅಕಾಡೆಮಿ ಆಯೋಜಿಸಿದ್ದ ಸಂಗೀತ ಸಮ್ಮೇಳನದಿಂದ ಹಿಂದೆ ಸರಿದಿದ್ದಾರೆ, ಏಕೆಂದರೆ ಟಿ.ಎಂ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು, ಸನಾತನ ಧರ್ಮದ ಜೊತೆ ನಿಂತಿದ್ದಕ್ಕೆ ಅವರಿಗೆ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.
Ranjani-Gayatri and Vishakha Hari have withdrawn from 2024 Music Conference organised by music academy as it is presided over by TM Krishna who being a woke has done immense damage to the culture of Carnatic music.
Kudos to them for standing with Sanatana Dharma🙏 pic.twitter.com/gF2VIiMyeW
— Chakravarty Sulibele (Modi Ka Pariwar) (@astitvam) March 21, 2024
ರಂಜನಿ ಗಾಯತ್ರಿ ಅವರು ತಮ್ಮ ಪೋಸ್ಟ್‌ನಲ್ಲಿ ಪೆರಿಯಾರ್ ಅವರನ್ನು ಎಳೆದು ತಂದಿದ್ದರು ಈ ಬಗ್ಗೆ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ, ರಾಮ್ ಎಂಬವರು ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ಅಸೂಯೆ ಪಡುತ್ತಾರೆ ಮತ್ತು ಕೋಪದಿಂದ ಕುಪ್ಪಳಿಸುತ್ತಿದ್ದಾರೆ. ಪೆರಿಯಾರ್ ಮೇಲೆ ಆಕ್ರಮಣ ಮಾಡುವ ಹಳೆಯ, ಜಾತಿವಾದಿ ಮತ್ತು ದ್ವೇಷದ ತಂತ್ರವನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡಿನ 0.1% ಕ್ಕಿಂತ ಹೆಚ್ಚು ಜನರಿಗೆ ತಿಳಿದಿಲ್ಲದ ಅಥವಾ ಕಾಳಜಿ ವಹಿಸದ ಪ್ರಶಸ್ತಿಗಾಗಿ ಪೆರಿಯಾರ್ ಅವರನ್ನು ನಿರ್ದಿಷ್ಟವಾಗಿ ತಮ್ಮ ಆಂತರಿಕ ಕದನಕ್ಕೆ ಎಳೆಯುವ ಅವರ ಆಯ್ಕೆಯು ರಾಜಕೀಯವಾಗಿದೆ. ಪೆರಿಯಾರ್ ಅವರನ್ನು ಪ್ರಚೋದಿಸುವ ಮೂಲಕ, ಅವರು ಪೆರಿಯಾರನ್ನು ದ್ವೇಷಿಸಲು ಯತ್ನಿಸುತ್ತಾರೆ. ಗಾಯಕ-ದ್ವಯರ ಈ ಹಾವಿಗಿಂತ ಕೆಟ್ಟ ನಡವಳಿಕೆಯು ಮಹಾನ್ ಪೆರಿಯಾರ್ ಅವರ ಸ್ಥಾನಕ್ಕೆ ಕುತ್ತು ತರುವುದಿಲ್ಲ. ಆದರೆ ಇದು ಚುನಾವಣೆಗೆ ಮುಂಚಿತವಾಗಿ ಬ್ರಾಹ್ಮಣರಲ್ಲಿ ಹೆಚ್ಚು ಜಾತೀಯತೆ ಮತ್ತು ದ್ವೇಷವನ್ನು ಉಂಟುಮಾಡುತ್ತದೆ. ದೇಶವನ್ನು ಸುಧಾರಿಸಲು ಪ್ರಯತ್ನಿಸಿದವರ ವಿರುದ್ಧ ದ್ವೇಷವನ್ನು ಬ್ರಾಹ್ಮಣರು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
Because they are jealous and seething with anger that @tmkrishna – their ideological adversary within their Brahminical Carnatic music ecosystem – got the #SangitaKalanidhi, Brahmin singer duo #Ranjani – #Gayatri have chosen the age-old, lazy, casteist and hateful strategy of… https://t.co/xEvXQDJAvw
— Ram (@madarassi) March 21, 2024
ಇದನ್ನು ಓದಿ: ಯೋಗಿ ಆದಿತ್ಯನಾಥ್‌ಗೆ ಶ್ಲಾಘಿಸಿ, ಮುಸ್ಲಿಮರ ವಿರುದ್ಧ ದ್ವೇಷ ಪೂರಿತ ಹೇಳಿಕೆ: ಬರೇಲಿ ಕೋರ್ಟ್ ಜಡ್ಜ್‌ಗೆ ಹೈಕೋರ್ಟ್ ತರಾಟೆ


