Homeಮುಖಪುಟರೋಮಿಲಾ ಥಾಪರ್ ಸಿವಿ ಪರಿಶೀಲಿಸುವ ಅಗತ್ಯವಿಲ್ಲ: ಯುಎಸ್ ಹಿಸ್ಟೋರಿಕಲ್ ಅಸೋಸಿಯೇಷನ್

ರೋಮಿಲಾ ಥಾಪರ್ ಸಿವಿ ಪರಿಶೀಲಿಸುವ ಅಗತ್ಯವಿಲ್ಲ: ಯುಎಸ್ ಹಿಸ್ಟೋರಿಕಲ್ ಅಸೋಸಿಯೇಷನ್

- Advertisement -
- Advertisement -

ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಇತಿಹಾಸ ತಜ್ಞೆ ಡಾ.ರೋಮಿಲಾ ಥಾಪರ್ ಅವರ ಪಠ್ಯಕ್ರಮ ಜೀವನವನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ವಿಶ್ವದ ಅತಿ ಹೆಚ್ಚು ಇತಿಹಾಸಕಾರರನ್ನು ಹೊಂದಿರುವ ಸಂಸ್ಥೆ ಅಮೆರಿಕ ಹಿಸ್ಟೋರಿಕಲ್ ಅಸೋಸಿಯೇಷನ್ ಹೇಳಿದೆ.

ಜೆಎನ್‌ಯು ವಿವಿಯ ಕುಲಪತಿ ಜಗದೀಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಅಮೆರಿಕ ಹಿಸ್ಟೋರಿಕಲ್ ಅಸೋಸಿಯೇಷನ್ ಅಧ್ಯಕ್ಷ ಮ್ಯಾಕ್ ನೀಲ್, ಯಾವುದೇ ಕಾರಣಕ್ಕೂ ಗೌರವ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ರೋಮಿಲಾ ಥಾಪರ್ ಅವರ ಪಠ್ಯಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಥಾಪರ್ ಅವರು ಇತಿಹಾಸಕ್ಕೆ ನೀಡಿರುವ ಕೊಡುಗೆ ಮತ್ತು ಅವರ ಸಾಧನೆ ಅಪಾರ. ಹಲವು ದೇಶಗಳ ಇತಿಹಾಸಕಾರರು ಥಾಪರ್ ಅವರನ್ನು ಹೆಚ್ಚು ಗೌರವಿಸುತ್ತಾರೆ. ಥಾಪರ್ ನಮ್ಮ ಸಂಸ್ಥೆಯ ವಿದೇಶಿ ಗೌರವಾನ್ವಿತ ಸದಸ್ಯರಾಗಿದ್ದಾರೆ. ದಕ್ಷಿಣ ಏಷ್ಯಾದ ಗತಕಾಲದ ಕುರಿತು ರೋಮಿಲಾ ಥಾಪರ್ ಬರಹಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಅವರು ಹೇಳಿದ್ದಾರೆ.

ಅಮೆರಿಕ ಹಿಸ್ಟೋರಿಕಲ್ ಅಸೋಸಿಯೇಷನ್ ಸಂಸ್ಥೆ 12 ಸಾವಿರ ಸದಸ್ಯರನ್ನು ಒಳಗೊಂಡಿರುವ ಬೃಹತ್ ಸಂಸ್ಥೆಯಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ರೋಮಿಲಾ ಥಾಪರ್ ಅವರ ಸಿವಿ (ಪಠ್ಯಕ್ರಮದ ಜೀವನ) ಪರಿಶೀಲಿಸಲು ದಾಖಲೆ ಸಲ್ಲಿಸುವಂತೆ ಸೂಚಿಸಿತ್ತು. ಇದಕ್ಕೆ ರೋಮಿಲಾ ಥಾಪರ್ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...