ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಬಿಡುಗಡೆ ಮಾಡಿದೆ.
ಹೊಸ ಪಟ್ಟಿಯಲ್ಲಿ ತಮಿಳುನಾಡು ಮತ್ತು ರಾಜಸ್ಥಾನದ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಭಾನುವಾರ ಮೂವರು ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಇಂದು ಹೊಸ ಪಟ್ಟಿ ಪ್ರಕಟಿಸಿದೆ.
ಆರನೇ ಪಟ್ಟಿಯಲ್ಲಿ ರಾಜಸ್ಥಾನದ ಅಜ್ಮೀರ್‌ನಿಂದ ರಾಮಚಂದ್ರ ಚೌಧರಿ, ರಾಜಸಮಂದ್‌ನಿಂದ ಸುದರ್ಶನ್ ರಾವತ್, ಬಿಲ್ವಾರದಿಂದ ಡಾ. ದಾಮೋದರ್ ಗುರ್ಜರ್, ಕೋಟಾದಿಂದ ಪ್ರಲ್ಹಾದ್ ಗುಂಜಾಲ್, ತಮಿಳುನಾಡಿನ ತಿರುನೆಲ್ವೇಲಿಯಿಂದ ಅಡ್ವೊಕೇಟ್ ಸಿ ರಾಬರ್ಟ್ ಬ್ರೂಸ್ ಅವರಿಗೆ ಟಿಕೆಟ್ ನೀಡಿದೆ.
कांग्रेस अध्यक्ष श्री @kharge की अध्यक्षता में आयोजित 'केंद्रीय चुनाव समिति' की बैठक में लोकसभा चुनाव, 2024 के लिए कांग्रेस उम्मीदवारों के नाम की छठवीं लिस्ट। pic.twitter.com/KoXyKzYH87
— Congress (@INCIndia) March 25, 2024
ಐದನೇ ಪಟ್ಟಿಯಲ್ಲಿ ಜೈಪುರದ ಟಿಕೆಟ್ ಪಡೆದಿದ್ದ ಸುನಿಲ್ ಶರ್ಮಾ ಬದಲಿಗೆ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರನ್ನು ಕಣಕ್ಕಿಳಿಸಿದೆ. ಇತರ ಇಬ್ಬರು ಅಭ್ಯರ್ಥಿಗಳಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದಿಂದ ಪ್ರತಿಭಾ ಸುರೇಶ್ ಧನೋರ್ಕರ್ ಮತ್ತು ರಾಜಸ್ಥಾನದ ದೌಸಾದಿಂದ ಮುರಾರಿ ಲಾಲ್ ಮೀನಾ ಅವರಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ : ಚುನಾವಣಾ ಬಾಂಡ್: ‘ಕಚೇರಿ ಹೊರಗೆ ಡ್ರಾಪ್ ಬಾಕ್ಸ್ ಇಟ್ಟಿದ್ದೇವೆ, ಹಣ ಕೊಟ್ಟವರು ಯಾರೆಂಬುದು ಗೊತ್ತಿಲ್ಲ’ ಎಂದ ಟಿಎಂಸಿ


