Homeಮುಖಪುಟ'ಭಾರತ್ ಮಾತಾ ಕಿ ಜೈ’ ಘೋಷಣೆ ಮೊದಲು ಕೂಗಿದ್ದು ಮುಸ್ಲಿಮರು ಎಂದು ಸಂಘಪರಿವಾರಕ್ಕೆ ಗೊತ್ತಿಲ್ಲದಂತಿದೆ: ಸಿಎಂ...

‘ಭಾರತ್ ಮಾತಾ ಕಿ ಜೈ’ ಘೋಷಣೆ ಮೊದಲು ಕೂಗಿದ್ದು ಮುಸ್ಲಿಮರು ಎಂದು ಸಂಘಪರಿವಾರಕ್ಕೆ ಗೊತ್ತಿಲ್ಲದಂತಿದೆ: ಸಿಎಂ ಪಿಣರಾಯ್‌ ವಿಜಯನ್

- Advertisement -
- Advertisement -

‘ಭಾರತ್ ಮಾತಾ ಕಿ ಜೈ’ ಮತ್ತು ‘ಜೈ ಹಿಂದ್’ ಘೋಷಣೆಗಳನ್ನು ಮೊದಲು ಇಬ್ಬರು ಮುಸ್ಲಿಮರು ಕೂಗಿದ್ದು, ಸಂಘ ಪರಿವಾರವು ಅವರನ್ನು ಕೈಬಿಡಲು ಸಿದ್ಧವಾಗಿದೆಯೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.

ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಸಿಪಿಐ(ಎಂ) ರಾಜ್ಯದಲ್ಲಿ ಆಯೋಜಿಸಿದ್ದ  ನಾಲ್ಕನೇ ರ್ಯಾಲಿಯನ್ನು ಉದ್ದೇಶಿಸಿ ಮುಸ್ಲಿಂ ಪ್ರಾಬಲ್ಯದ ಉತ್ತರ ಕೇರಳ ಜಿಲ್ಲೆಯಲ್ಲಿ ಮಾತನಾಡಿದ ಪಿಣರಾಯ್‌ ವಿಜಯನ್‌, ಮುಸ್ಲಿಂ ಆಡಳಿತಗಾರರು ಮತ್ತು ಸಾಂಸ್ಕೃತಿಕ ಪ್ರತಿಭೆಗಳು ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಅಜೀಮುಲ್ಲಾ ಖಾನ್ ಎಂಬ ಮುಸ್ಲಿಂ ವ್ಯಕ್ತಿ ‘ಭಾರತ್ ಮಾತಾ ಕಿ ಜೈ’ ಘೋಷಣೆಯನ್ನು ಮೊದಲು ಕೂಗಿದ್ದಾರೆ. ಇಲ್ಲಿಗೆ ಬಂದ ಕೆಲವು ಸಂಘಪರಿವಾರದ ಮುಖಂಡರು ತಮ್ಮ ಮುಂದೆ ಕುಳಿತವರಿಗೆ ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗುವಂತೆ ಹೇಳಿದ್ದಾರೆ. ಘೋಷಣೆಯನ್ನು ರೂಪಿಸಿದವರು ಯಾರು? ಅವರ ಹೆಸರು ಅಜೀಮುಲ್ಲಾ ಖಾನ್ ಎಂಬುವುದು ಸಂಘಪರಿವಾರಕ್ಕೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ಪಿಣರಾಯ್‌ ವಿಜಯನ್‌ ಹೇಳಿದ್ದಾರೆ.

ಈ ಘೋಷಣೆಯನ್ನು ರೂಪಿಸಿದವರು ಮುಸ್ಲಿಮರು ಎಂದು ಗೊತ್ತಾದರೆ ಅವರು ಆ ಘೋಷಣೆಯನ್ನು ಬಳಸುವುದನ್ನು ನಿಲ್ಲಿಸುತ್ತಾರೆಯೇ ಎಂದು ನನಗೆ ತಿಳಿದಿಲ್ಲ. ‘ಜೈ ಹಿಂದ್’ ಘೋಷಣೆಯನ್ನು ಮೊದಲು ಘೋಷಿಸಿದವರು ಅಬಿದ್ ಹಸನ್ ಎಂಬವರಾಗಿದ್ದಾರೆ. ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಮಗ ದಾರಾ ಶಿಕೋ ಅವರು ಮಾಡಿದ ಮೂಲ ಸಂಸ್ಕೃತ ಪಠ್ಯದಿಂದ ಪರ್ಷಿಯನ್ ಭಾಷೆಗೆ 50ಕ್ಕೂ ಹೆಚ್ಚು ಉಪನಿಷತ್ತುಗಳ ಅನುವಾದಗಳು ಭಾರತೀಯ ಪಠ್ಯಗಳು ಪ್ರಪಂಚದಾದ್ಯಂತ ತಲುಪಲು ಸಹಾಯ ಮಾಡಿದೆ ಎಂದು ಪಿಣರಾಯ್‌ ವಿಜಯನ್ ಹೇಳಿದ್ದಾರೆ.

ಭಾರತದಿಂದ ಪಾಕಿಸ್ತಾನಕ್ಕೆ ಮುಸ್ಲಿಮರನ್ನು ಕಳುಹಿಸಬೇಕು ಎಂದು ಪ್ರತಿಪಾದಿಸುವ ಸಂಘಪರಿವಾರದ ನಾಯಕರು ಮತ್ತು ಕಾರ್ಯಕರ್ತರು ಈ ಐತಿಹಾಸಿಕ ಸಂದರ್ಭವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ ಸಿಎಂ ಪಿಣರಾಯ್‌ ವಿಜಯನ್‌, ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಇತರರೊಂದಿಗೆ ಮುಸ್ಲಿಮರೂ ಕೂಡ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: ‘ಅಲ್ಪಸಂಖ್ಯಾತರನ್ನು ರಕ್ಷಿಸುವವರಿಗೆ ಮತ ನೀಡಿ’: ಸಿರೊ ಮಲಬಾರ್ ಚರ್ಚ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read