Homeಮುಖಪುಟ‘ಅಲ್ಪಸಂಖ್ಯಾತರನ್ನು ರಕ್ಷಿಸುವವರಿಗೆ ಮತ ನೀಡಿ’: ಸಿರೊ ಮಲಬಾರ್ ಚರ್ಚ್

‘ಅಲ್ಪಸಂಖ್ಯಾತರನ್ನು ರಕ್ಷಿಸುವವರಿಗೆ ಮತ ನೀಡಿ’: ಸಿರೊ ಮಲಬಾರ್ ಚರ್ಚ್

- Advertisement -
- Advertisement -

ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡುವ ಮತ್ತು ದೇಶದ ಸಂವಿಧಾನವನ್ನು ಎತ್ತಿಹಿಡಿಯುವವರಿಗೆ ಜನರು ಮತ ಹಾಕುವುದು ಅನಿವಾರ್ಯವಾಗಿದೆ ಎಂದು ಸೈರೋ-ಮಲಬಾರ್ ಚರ್ಚ್‌ನ ಮುಖ್ಯಸ್ಥರಾದ ರಾಫೆಲ್ ಥಟ್ಟಿಲ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಭಾರತದಲ್ಲಿ ಕ್ರಿಶ್ಚಿಯನ್ನರು ಸುರಕ್ಷಿತವಾಗಿದ್ದಾರೆ ಎಂದು ಸೈರೋ-ಮಲಬಾರ್ ಚರ್ಚ್‌ನ ಮಾಜಿ ಮುಖ್ಯಸ್ಥ ಜಾರ್ಜ್ ಅಲೆಂಚೆರಿ ಈ ಹಿಂದೆ ಹೇಳಿಕೆ ನೀಡಿದ್ದರು, ಇದಾದ ಒಂದು ವರ್ಷದ ನಂತರ, ಅವರ ಉತ್ತರಾಧಿಕಾರಿ ರಾಫೆಲ್ ಥಟ್ಟಿಲ್ ಅವರು ಶುಕ್ರವಾರದಂದು ದೇಶದಲ್ಲಿ ಕ್ರಿಶ್ಚಿಯನ್ನರ ವಿರುದ್ಧದ ದಾಳಿಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಗೆ ಪ್ರತಿಕ್ರಿಯೆಯಾಗಿ ಥಟ್ಟಿಲ್ ಅವರ ಹೇಳಿಕೆ ಹೊರಬಿದ್ದಿದೆ. ಕ್ರಿಶ್ಚಿಯನ್ನರ ಮೇಲೆ 161 ದಾಳಿಗಳು ನಡೆದಿರುವ ಬಗ್ಗೆ ಜನವರಿ 1ರಿಂದ ಮಾರ್ಚ್ 15 2024ರವರೆಗೆ UCFನ ಟೋಲ್-ಫ್ರೀ ಸಂಖ್ಯೆಯ ಮೂಲಕ ವರದಿಯಾಗಿದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ನಾವು ದೃಢವಾದ ಸಂವಿಧಾನವನ್ನು ಹೊಂದಿರುವಾಗ ಈ ದಾಳಿಗಳ ವರದಿಗಳು ಆಳವಾಗಿ ದುಃಖವನ್ನುಂಟು ಮಾಡುತ್ತವೆ. ಪ್ರಧಾನಿಯೊಂದಿಗಿನ ನಮ್ಮ ಭೇಟಿಯ ಸಮಯದಲ್ಲಿ, ಸರ್ಕಾರವು ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು ಎಂದು ಬಿಷಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಟ್ಟಿಲ್ ಅವರು ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಲು ಹೇಳಿದ್ದು, ಜನರು ತಮಗೆ ಬೇಕಾದಂತೆ ಮತ ಚಲಾಯಿಸಲು ಸ್ವತಂತ್ರರಾಗಿದ್ದರೂ, ಅಲ್ಪಸಂಖ್ಯಾತರು ಮತ್ತು ಸಂವಿಧಾನವನ್ನು ರಕ್ಷಿಸುವವರ ಪರವಾಗಿ ಮತ ಚಲಾಯಿಸುವಂತೆ ನಾನು ವೈಯಕ್ತಿಕವಾಗಿ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

UCF ಮಾಹಿತಿಯ ಪ್ರಕಾರ, 2023ರಿಂದ ದೇಶಾದ್ಯಂತ ಕ್ರಿಶ್ಚಿಯನ್ನರ ವಿರುದ್ಧ 600ಕ್ಕೂ ಹೆಚ್ಚು ದಾಳಿಗಳು ದಾಖಲಾಗಿವೆ. ವರದಿಯು ಛತ್ತೀಸ್‌ಗಢ ರಾಜ್ಯವು ಕ್ರಿಶ್ಚಿಯನ್ನರ ಮೇಲೆ ಅತಿ ಹೆಚ್ಚು ದಾಳಿಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದು, ಉತ್ತರಪ್ರದೇಶವು ಎರಡನೇ ಸ್ಥಾನದಲ್ಲಿದೆ. ಉತ್ತರಪ್ರದೇಶದಲ್ಲಿ ದಾಳಿಗಳು ಸರಕಾರಿ ಪ್ರಾಯೋಜಿತವಾಗಿದೆ ಎಂದು ಹೇಳಿದೆ.

ಏಪ್ರಿಲ್ 2023ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಜಾರ್ಜ್ ಅಲೆಂಚೆರಿ ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಸುರಕ್ಷತೆಯ ಬಗ್ಗೆ ಮಾತನಾಡಿದ್ದರು, ಕ್ರಿಶ್ಚಿಯನ್ನರು ಪ್ರಸ್ತುತ ಅಂತಹ ಯಾವುದೇ ಅಭದ್ರತೆಯನ್ನು ಎದುರಿಸುವುದಿಲ್ಲ. ಬಿಜೆಪಿಯು ಸಂಪೂರ್ಣ ಅಧಿಕಾರವನ್ನು ಗಳಿಸಿದರೆ ಈ ರೀತಿ ಸಂಭವಿಸಬಹುದು ಎಂದು ಕೆಲವರು ಹೇಳುತ್ತಾರೆ ಎಂದು ಹೇಳಿದ್ದರು.

 ಇದನ್ನು ಓದಿ: ಲೋಕಸಭೆ ಚುನಾವಣೆ: ಬಿಜೆಪಿ ಸೇರಿದ್ದ ಜಡ್ಜ್‌ ವಿರುದ್ಧ ವಿದ್ಯಾರ್ಥಿ ನಾಯಕನನ್ನು ಕಣಕ್ಕಿಳಿಸಿದ ದೀದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...