HomeಮುಖಪುಟNCERT ತೆಗೆದು ಹಾಕಿದ ಎಲ್ಲಾ ಪಠ್ಯ ಮರು ಸೇರ್ಪಡೆ ಮಾಡಿದ ಏಕೈಕ ರಾಜ್ಯ ಕೇರಳ; ಶಿವನ್‌ಕುಟ್ಟಿ

NCERT ತೆಗೆದು ಹಾಕಿದ ಎಲ್ಲಾ ಪಠ್ಯ ಮರು ಸೇರ್ಪಡೆ ಮಾಡಿದ ಏಕೈಕ ರಾಜ್ಯ ಕೇರಳ; ಶಿವನ್‌ಕುಟ್ಟಿ

- Advertisement -
- Advertisement -

ಶಾಲಾ ಪಠ್ಯಪುಸ್ತಕಗಳಿಂದ ಎನ್‌ಸಿಇಆರ್‌ಟಿ ತೆಗೆದು ಹಾಕಿದ ಎಲ್ಲಾ ಪಠ್ಯದ ಭಾಗಗಳನ್ನು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅನುಕೂಲವಾಗುವಂತೆ ಹೊಸ ಪಠ್ಯಪುಸ್ತಕವನ್ನು ರಚಿಸಿದ ದೇಶದ ಏಕೈಕ ರಾಜ್ಯ ಕೇರಳವಾಗಿದೆ ಎಂದು ಶಿಕ್ಷಣ ಸಚಿವ ಶಿವನ್‌ಕುಟ್ಟಿ ಅವರು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2023ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆಯಲ್ಲಿ ಯುಡಿಎಫ್ ಪ್ರತಿಪಕ್ಷಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಮಿಳುನಾಡು ಈ ನೀತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಕರ್ನಾಟಕವು ಎನ್‌ಸಿಇಆರ್‌ಟಿಯ ಕೆಲವು ಭಾಗಗಳನ್ನು ಮಾತ್ರ ಜಾರಿಗೆ ತರಲು ಸಮ್ಮತಿಸಿದೆ. ಈ ನೀತಿಯನ್ನು ದೇಶದಲ್ಲಿ ಸಂಪೂರ್ಣವಾಗಿ ಅಂಗೀಕರಿಸಲಾಗಿಲ್ಲ ಎಂದು ಶಿವನ್‌ಕುಟ್ಟಿ ಅವರು ಹೇಳಿದ್ದಾರೆ.

ಇದಲ್ಲದೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಬಹಳಷ್ಟು ವಿಷಯಗಳನ್ನು ಅಳಿಸಿ ಹಾಕಿದೆ. ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ಅದರಲ್ಲಿ ಆರ್‌ಎಸ್‌ಎಸ್‌ನ ಪಾತ್ರ, ಭಾರತದಲ್ಲಿ ಮೊಘಲ್ ಆಳ್ವಿಕೆ ಮತ್ತು ಭಾರತೀಯ ಸ್ವಾತಂತ್ರ್ಯದ ಕುರಿತ ಕೆಲ ಅಧ್ಯಾಯಗಳು ಹಾಗೂ ಕೆಲವು ಕೋಮು ಗಲಭೆಗಳ ಕುರಿತ ಅಧ್ಯಯನವನ್ನು 11 ಮತ್ತು 12ನೇ ತರಗತಿ ಪಠ್ಯಪುಸ್ತಕದಿಂದ ತೆಗೆದು ಹಾಕಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ನಾವು ಎಲ್ಲಾ ತೆಗೆದು ಹಾಕಿದ ಪಠ್ಯಗಳನ್ನು ಸೇರಿಸಿದ್ದೇವೆ. ಹೊಸ ಪಾಠ ಪುಸ್ತಕ ರಚಿಸುತ್ತೇವೆ. ಇದು ಕೇವಲ ಪಠ್ಯಪುಸ್ತಕವಲ್ಲ. ವಿದ್ಯಾರ್ಥಿಗಳು ಅಧ್ಯಯನ ಮತ್ತು ಪರೀಕ್ಷೆಗಳನ್ನು ಬರೆಯಬೇಕಿರುವ ಪಠ್ಯಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪೂರಕ ಪಠ್ಯಪುಸ್ತಕವನ್ನು ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಅವರು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದರು. ಪಠ್ಯದ ಮುಖ್ಯ ಭಾಗವನ್ನು ತೆಗೆದು ಹಾಕಿರುವ ಎನ್‌ಸಿಇಆರ್‌ಟಿ ಬಗ್ಗೆ ಪಿಣರಾಯ್‌ ವಿಜಯನ್‌ ತೀವ್ರವಾಗಿ ಟೀಕಿಸಿದ್ದು, ದ್ವೇಷಯುತ ಸಮಾಜದ ಸೃಷ್ಟಿಯ ರಾಜಕೀಯ ಉದ್ದೇಶದಿಂದ ಈ ರೀತಿ ಪಠ್ಯವನ್ನು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಇದನ್ನು ಓದಿ: ಮಹಿಷ ದಸರಾ: ಪ್ರಚೋದನಾಕಾರಿ ಹೇಳಿಕೆ ನೀಡಿದ ಪ್ರತಾಪ್ ಸಿಂಹ, ಶ್ರೀವತ್ಸ ವಿರುದ್ಧ ದೂರು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...