Homeಅಂತರಾಷ್ಟ್ರೀಯಇರಾನ್: ವಸ್ತ್ರಸಂಹಿತೆ ವಿರುದ್ಧ ಮುಂದುವರಿದ ಹೋರಾಟ; 19 ಮಕ್ಕಳು ಸೇರಿ 185 ಮಂದಿ ಸಾವು- ವರದಿ

ಇರಾನ್: ವಸ್ತ್ರಸಂಹಿತೆ ವಿರುದ್ಧ ಮುಂದುವರಿದ ಹೋರಾಟ; 19 ಮಕ್ಕಳು ಸೇರಿ 185 ಮಂದಿ ಸಾವು- ವರದಿ

- Advertisement -
- Advertisement -

ಪೊಲೀಸ್‌‌ ಕಸ್ಟಡಿಯಲ್ಲಿದ್ದ ಯುವತಿಯ ಸಾವಿನಿಂದ ಆರಂಭವಾದ ಪ್ರತಿಭಟನೆಗಳು ಇರಾನ್‌ನಲ್ಲಿ ತೀವ್ರ ಸ್ವರೂಪ ಪಡೆದಿವೆ. ಅಧಿಕಾರಿಗಳ ಶಿಸ್ತುಕ್ರಮವನ್ನು ಧಿಕ್ಕರಿಸಿ ಭಾನುವಾರ ಇರಾನ್‌ನಾದ್ಯಂತ ಪ್ರತಿಭಟನೆಗಳು ನಡೆದಿವೆ. ಮಕ್ಕಳು ಸೇರಿದಂತೆ ಕನಿಷ್ಠ 185 ಜನರು ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ತಿಳಿಸಿರುವುದಾಗಿ ‘ರಾಯಿಟರ್ಸ್’ ವರದಿ ಮಾಡಿದೆ.

ಸೆಪ್ಟೆಂಬರ್ 17ರಂದು ಕುರ್ದಿಶ್ ಪಟ್ಟಣವಾದ ಸಾಕೆಜ್‌ನಲ್ಲಿ 22 ವರ್ಷದ ಮಹ್ಸಾ ಅಮಿನಿಯ ಅಂತ್ಯಕ್ರಿಯೆಯ ನಂತರ ವಿವಾದ ಭುಗಿಲೆದ್ದಿದೆ. ಇರಾನಿನ ಕುಖ್ಯಾತ ‘ಮೊರಾಲಿಟಿ ಪೊಲೀಸರು’ ಟೆಹ್ರಾನ್‌ನಲ್ಲಿ ಬಂಧಿಸಿದ ನಂತರ ಕೋಮಾಕ್ಕೆ ಹೋದ ಯುವತಿ ಕೊನೆಯುಸಿರೆಳೆದಿದ್ದಳು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

22 ವರ್ಷದ ಮಹ್ಸಾ ಅಮಿನಿ ತನ್ನ ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡುತ್ತಿದ್ದರು. ಇಸ್ಲಾಮಿಕ್ ಗಣರಾಜ್ಯದಲ್ಲಿ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೊಳಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಪೊಲೀಸ್ ಘಟಕವು ಅಮಿನಿ ಅವರನ್ನು ಬಂಧಿಸಿತು. ಸಾರ್ವಜನಿಕವಾಗಿ ಹೆಡ್‌ಸ್ಕ್ರಾಪ್‌ (ಹಿಜಾಬ್‌) ಧರಿಸಬೇಕೆಂದು ಕಡ್ಡಾಯ ಮಾಡಲಾಗಿದ್ದು, ಯುವತಿ ಧರಿಸಿರಲಿಲ್ಲ ಎಂದು ದಾಳಿ ಮಾಡಲಾಗಿತ್ತು. ಅಂದಿನಿಂದಲೂ ಪ್ರತಿಭಟನೆಗಳು ನಡೆಯುತ್ತಿವೆ.

“ಇರಾನ್‌ನಾದ್ಯಂತ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಕನಿಷ್ಠ 19 ಮಕ್ಕಳು ಸೇರಿದಂತೆ ಕನಿಷ್ಠ 185 ಜನರು ಸಾವನ್ನಪ್ಪಿದ್ದಾರೆ. ಈಗ ವರದಿಯಾಗಿರುವ ಸಾವುಗಳಲ್ಲಿ ಅರ್ಧದಷ್ಟು ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಂಭವಿಸಿವೆ” ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಇರಾನ್‌ ವೈರಿಗಳ ಸಂಚಿನ ಭಾಗವಾಗಿ ಪ್ರತಿಭಟನೆಗಳು ನಡೆಯುತ್ತಿವೆ” ಎಂದು ಅಧಿಕಾರಿಗಳು ವಾದಿಸಿದ್ದಾರೆ. ಹಿಂಸಾಚಾರದಲ್ಲಿ ಶಸ್ತ್ರಸಜ್ಜಿತ ಭಿನ್ನಮತೀಯರೂ ಇದ್ದಾರೆಂದು ಆರೋಪಿಸಲಾಗಿದೆ. ಭದ್ರತಾ ಪಡೆಗಳ ಕನಿಷ್ಠ 20 ಸದಸ್ಯರೂ ಸಾವಿಗೀಡಾಗಿದ್ದಾರೆಂದು ಹೇಳಲಾಗುತ್ತಿದೆ.

ಪ್ರತಿಭಟನೆಯ ವೇಳೆ ಭದ್ರತಾ ಪಡೆಗಳು ಮದ್ದುಗುಂಡುಗಳನ್ನು ಬಳಸಿವೆ. ಇದರ ನಡುವೆ ನೂರಾರು ಹೈಸ್ಕೂಲ್ ಹುಡುಗಿಯರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾನುವಾರ ಮುಂಜಾನೆ ಇರಾನ್‌ನ ಹಲವು ನಗರಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು. ಹೋರಾಟ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಸಜೀವ ಗುಂಡುಗಳನ್ನು ಬಳಸಲಾಗಿದೆ ಎಂಬ ಆರೋಪವನ್ನು ಇರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ.

‘ನನ್ನ ಹೆಂಡತಿಗೆ ಹೊಡೆಯಬೇಡ, ಆಕೆ ಗರ್ಭಿಣಿ’

ಸಾಮಾಜಿಕ ಕಾರ್ಯಕರ್ತ ತಸ್ವಿರ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳು ಪ್ರತಿಭಟನೆಯ ತೀವ್ರತೆಯನ್ನು ತೆರೆದಿಟ್ಟಿದೆ. ಟೆಹ್ರಾನ್‌ನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಶಸ್ತ್ರಸಜ್ಜಿತವಾದ ಭದ್ರತಾ ಪಡೆಗಳು ದಾಳಿ ಮಾಡುವುದನ್ನು ಒಂದು ವಿಡಿಯೊ ತೋರಿಸಿದೆ.

ಮತ್ತೊಂದು ವೀಡಿಯೊದಲ್ಲಿ ವ್ಯಕ್ತಿಯೊಬ್ಬರು, “ನನ್ನ ಹೆಂಡತಿಯನ್ನು ಹೊಡೆಯಬೇಡಿ, ಆಕೆ ಗರ್ಭಿಣಿ” ಎಂದು ಪೊಲೀಸರಿಗೆ ಮನವಿ ಮಾಡುತ್ತಿರುವುದು ದಾಖಲಾಗಿದೆ.

ಇದನ್ನೂ ಓದಿರಿ: ಬೌದ್ಧಧಮ್ಮದ ಅನುಯಾಯಿ ರಾಜೇಂದ್ರ ಪಾಲ್ ರಾಜೀನಾಮೆ; ಎಎಪಿಯ ಮೃದು ಹಿಂದುತ್ವ ಮುನ್ನೆಲೆಗೆ

150,000ಕ್ಕೂ ಹೆಚ್ಚು ಫಾಲೋಯರ್ಸ್‌ಗಳನ್ನು ಹೊಂದಿರುವ ಟ್ವಿಟರ್ ಖಾತೆ ಮಾಮ್ಲೆಕೇಟ್‌ನಲ್ಲಿ ಹಂಚಿಕೊಂಡ ವೀಡಿಯೊವೊಂದರಲ್ಲಿ ಹುಡುಗಿಯರ ಪರಿಸ್ಥಿತಿಯನ್ನು ತೋರಿಸಲಾಗಿದೆ. ಬಂದರ್ ಅಬ್ಬಾಸ್ ನಗರದಲ್ಲಿ ಭದ್ರತಾ ಪಡೆಗಳು ಶಾಲಾ ಹುಡುಗಿಯರನ್ನು ಬೆನ್ನಟ್ಟುತ್ತಿರುವುದು ಸೆರೆಯಾಗಿದೆ. ಹೋರಾಟಗಾರರು ಸಾಮೂಹಿಕ ಮುಷ್ಕರಕ್ಕೆ ಕರೆ ನೀಡಿದ ನಂತರ ಹಲವಾರು ನಗರಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಪೋಸ್ಟ್‌ಗಳು ತಿಳಿಸಿವೆ.

ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ರಾಯಿಟರ್ಸ್ ತಿಳಿಸಿದೆ. ಅಧಿಕಾರಿಗಳು ವಿಧಿಸಿದ ಇಂಟರ್ನೆಟ್ ನಿರ್ಬಂಧಗಳ ಕಾರಣದಿಂದಾಗಿ ಸಾವುನೋವುಗಳ ವಿವರಗಳು ನಿಧಾನವಾಗಿ ಹೊರಬರುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...