ದೇಶದ ಯುವ ಜನತೆಗೆ ನಿರುದ್ಯೋಗವೇ ಅತಿ ದೊಡ್ಡ ಸಮಸ್ಯೆಯಾಗಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ‘ಉದ್ಯೋಗ ಕ್ರಾಂತಿ’ಯನ್ನು ತರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ನೂರಾರು ರ್ಯಾಲಿಗಳನ್ನು ನೀವು ನೋಡಿರಬಹುದು, ಆದರೆ ಅವರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಎಷ್ಟು ಉದ್ಯೋಗಗಳನ್ನು ನೀಡಿದೆ ಎಂದು ಹೇಳುವುದನ್ನು ನೀವು ಕೇಳಿರಲಿಕ್ಕಿಲ್ಲ. 10 ವರ್ಷಗಳಲ್ಲಿ 20 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು, ಆದರೆ 12 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಕಿತ್ತುಕೊಂಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
“ಯುವ ನ್ಯಾಯ” ಗ್ಯಾರಂಟಿಯಡಿಯಲ್ಲಿ ಕಾಂಗ್ರೆಸ್ ಉದ್ಯೋಗ ಕ್ರಾಂತಿಯನ್ನು ಉಂಟು ಮಾಡಲಿದೆ, ಇದಕ್ಕಾಗಿ ನೇಮಕಾತಿ ಪರೀಕ್ಷೆಗಳಿಂದ ಉದ್ಯೋಗ ಪಡೆಯುವ ಪ್ರಕ್ರಿಯೆ ಸುಲಭಗೊಳಿಸಲಾಗುವುದು. 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪೇಪರ್ ಸೋರಿಕೆಯಿಂದ ಮುಕ್ತಿ ನೀಡಲಾಗುವುದು. ನೇಮಕಾತಿ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆಯ ಪ್ರಕರಣಗಳನ್ನು ವಿಚಾರಣೆಗೆ ಕಾಂಗ್ರೆಸ್ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಿದೆ ಮತ್ತು ಸಂತ್ರಸ್ತರಿಗೆ ಆರ್ಥಿಕ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಗಿಗ್ ಆರ್ಥಿಕತೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ನಾವು ಸಾಮಾಜಿಕ ಭದ್ರತಾ ಕಾನೂನನ್ನು ಜಾರಿಗೊಳಿಸುತ್ತೇವೆ. 40 ವರ್ಷದೊಳಗಿನ ಯುವಕರಿಗೆ ತಮ್ಮದೇ ಆದ ಉದ್ಯೋಗವನ್ನು ಸೃಷ್ಟಿಸಲು ಮತ್ತು ವಿಸ್ತರಿಸಲು ಸಹಕರಿಸುವುದು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯನ್ನು ಕಾಂಗ್ರೆಸ್ ನಿಲ್ಲಿಸಲಿದೆ. ವ್ಯಾಪಕವಾದ ನಿರುದ್ಯೋಗದ ಕಾರಣ, ಕಾಂಗ್ರೆಸ್ ಮಾರ್ಚ್ 15, 2024ರವರೆಗಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಬಡ್ಡಿಸಮೇತ ಮನ್ನಾ ಮಾಡುತ್ತದೆ ಮತ್ತು ಬ್ಯಾಂಕ್‌ಗಳಿಗೆ ಸರ್ಕಾರ ಲೋನ್ ಹಣವನ್ನು ಮರುಪಾವತಿ ಮಾಡುತ್ತದೆ ಎಂದು ಹೇಳಿದ್ದಾರೆ.
21 ವರ್ಷದೊಳಗಿನ ಪ್ರತಿಭಾವಂತ ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ಕಾಂಗ್ರೆಸ್ ತಿಂಗಳಿಗೆ 10,000 ರೂ.ಗಳ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡಲಿದೆ. ಕಾಂಗ್ರೆಸ್ ಪಕ್ಷವು ಸರ್ಕಾರಿ ಪರೀಕ್ಷೆಗಳು ಮತ್ತು ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ರದ್ದುಪಡಿಸಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
युवाओं के लिए रोज़गार, चुनाव का सबसे बड़ा मुद्दा है।
मोदी जी की सैंकड़ों रैलियों में आपने उनके मुँह से कभी ये नहीं सुना कि उनकी सरकार ने पिछले 10 साल में कितने रोज़गार दिए !
10 साल में 20 करोड़ नौकरियाँ देनी थी,
12 करोड़ से ज़्यादा छीन ली।कांग्रेस पार्टी “युवा न्याय” के… pic.twitter.com/5I5e9OnfTR
— Mallikarjun Kharge (@kharge) April 21, 2024
ಇದನ್ನು ಓದಿ; ಎನ್‌ಡಿಎ ಮೈತ್ರಿ ಕೂಟದ ಏಕೈಕ ಮುಸ್ಲಿಂ ಸಂಸದ ಆರ್‌ಜೆಡಿಗೆ ಸೇರ್ಪಡೆ


